ಮೈಸೂರು: ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ 40ಕ್ಕೆ ಏರಿಕೆ

By Kannadaprabha NewsFirst Published Apr 11, 2020, 2:58 PM IST
Highlights

8 ವರ್ಷದ ಬಾಲಕ ಸೇರಿದಂತೆ ಜಿಲ್ಲೆಯ ಐವರಲ್ಲಿ ಮತ್ತೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆಯಾಗದೆ. ಇವರೆಲ್ಲರೂ ನಂಜನಗೂಡಿನ ಜ್ಯುಬಿಲಿಯಂಟ್‌ ಕಾರ್ಖಾನೆಯ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರು.

ಮೈಸೂರು(ಏ.11): 8 ವರ್ಷದ ಬಾಲಕ ಸೇರಿದಂತೆ ಜಿಲ್ಲೆಯ ಐವರಲ್ಲಿ ಮತ್ತೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆಯಾಗದೆ. ಇವರೆಲ್ಲರೂ ನಂಜನಗೂಡಿನ ಜ್ಯುಬಿಲಿಯಂಟ್‌ ಕಾರ್ಖಾನೆಯ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರು.

ಪಿ- 103 ಮತ್ತು ಪಿ- 159ರ ಸಂಪರ್ಕದಲ್ಲಿದ್ದ ಅವರ ಪುತ್ರ 8 ವರ್ಷದ ಬಾಲಕನಿಗೂ ಸೋಂಕು ತಗುಲಿದ್ದು ಕೋವಿಡ್‌ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಂತೆಯೇ 103ರ ಸಂಪರ್ಕದಲ್ಲಿದ್ದ ಇವರ 48 ವರ್ಷದ ಅತ್ತೆಗೂ ಸೋಂಕು ತಗುಲಿದೆ.

ವಿತ್ತ ಸಚಿವೆ ನಿರ್ಮಲಾ ಜಾಗಕ್ಕೆ ಬರ್ತಾರಾ ಆರ್‌ಬಿಐ ಗೌರ್ನರ್?

ಜ್ಯುಬಿಲಿಯಂಟ್‌ ಕಂಪನಿಯ ಸಹ ಉದ್ಯೋಗಿ ಒಬ್ಬರಿಗೆ ಸೋಂಕು ದೃಢಪಟ್ಟಿದ್ದು, ಪಿ- 85ರ ಸಂಪರ್ಕದಲ್ಲಿದ್ದ ಅವರ ಪತ್ನಿಗೆ, ಪಿ- 183ರ ಸಂಪರ್ಕದಲ್ಲಿದ್ದ ಅವರ ಪತ್ನಿಯಲ್ಲಿಯೂ ಸೋಂಕು ಪತ್ತೆಯಾಗಿದೆ. ಜ್ಯುಬಿಲಿಯಂಟ್‌ ಕಾರ್ಖಾನೆಯಲ್ಲಿ ಸೋಂಕು ದೃಢಪಟ್ಟಎಲ್ಲಾ ಪ್ರಾಥಮಿಕ ಸಂಪರ್ಕದಲ್ಲಿ ಇರುವವರ ಮಾದರಿಯನ್ನು ಸಂಗ್ರಹಿಸಿದ್ದು, ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಧಿಕಾರಿ ಅಭಿರಾಮ್‌ ಜಿ. ಶಂಕರ್‌ ತಿಳಿಸಿದ್ದಾರೆ.

ಸೀಲ್‌ ಡೌನ್‌ಗೆ ಸಿದ್ಧರಾಗಿ: ಜನರಿಗೆ ಕರೆ ನೀಡಿದ ಶಾಸಕ

ಒಟ್ಟಾರೆ ಜಿಲ್ಲೆಯಲ್ಲಿ ಜ್ಯುಬಿಲಿಯಂಟ್‌ ಕಾರ್ಖಾನೆಯ ನೌಕರರಿಂದ ಅವರ ಕುಟುಂಬ ಸದಸ್ಯರಿಗೆ ಸೋಂಕು ತಗಲುವುದು ಹೆಚ್ಚಾಗಿದೆ. ಈವರೆಗೆ ಜ್ಯುಬಿಲಿಯಂಟ್‌ ಸಂಬಂಧಿಸಿತ 36 ಮಂದಿಗೆ ಸೋಂಕು ತಗುಲಿದೆ. ಉಳಿದ 8 ಮಂದಿ ದೆಹಲಿ ಯಾತ್ರಿಗಳು, ಒಬ್ಬ ದುಬೈ ಪ್ರವಾಸಿ ಮತ್ತೊಬ್ಬರ ವಿದೇಶಯಾತ್ರಿಯ ಸಂಬಂಧಿ ಸೇರಿ ಒಟ್ಟು 41 ಮಂದಿ ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಅವರು ವಿವರಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ 3449 ಜನರ ಮೇಲೆ ನಿಗಾ

ಮೈಸೂರು: ಕೋವಿಡ್‌-19 ಕೊರೋನಾ ವೈರಸ್‌ ಕಾಯಿಲೆ ಸಂಬಂಧ ಮೈಸೂರು ಜಿಲ್ಲೆಯಲ್ಲಿ ಶುಕ್ರವಾರದವರೆಗೂ ಒಟ್ಟು 3449 ಜನರ ಮೇಲೆ ನಿಗಾ ವಹಿಸಲಾಗಿದ್ದು, 1577 ಮಂದಿ 14 ದಿನಗಳ ಹೋಂ ಐಸೋಲೇಶನ್‌ ಮುಗಿಸಿದ್ದಾರೆ. 1831 ಮಂದಿಯನ್ನು 14 ದಿನ ಹೋಂ ಐಸೋಲೇಶನ್‌ನಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ತಿಳಿಸಿದ್ದಾರೆ.

ಲಾಕ್‌ಡೌನ್ ಮಾಡದೇ ವಿಧಿಯಿಲ್ಲ; ಮೋದಿ ಸಾಹೇಬರಿಗೆ ಈಗ ಖಜಾನೆಯದ್ದೇ ಚಿಂತೆ

ಜಿಲ್ಲೆಯಲ್ಲಿ 42 ಮಂದಿಗೆ ಕೊರೋನಾ ಪಾಸಿಟಿವ್‌ ಕಂಡು ಬಂದಿದ್ದು, ಇವರಲ್ಲಿ ಮೊದಲ ವ್ಯಕ್ತಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆಗಿದ್ದಾರೆ. ಉಳಿದ 41 ಜನರನ್ನು ಕೋವಿಡ್‌-19 ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಈವರೆಗೂ 569 ಜನರ ಸ್ಯಾಂಪಲ್‌ ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 527 ಮಂದಿಗೆ ನೆಗಿಟಿವ್‌ ಬಂದಿದೆ ಎಂದು ಅವರು ವಿವರಿಸಿದ್ದಾರೆ.

click me!