ಕೊರೋನಾ ಎಂದ್ರು ಕೇಳೋರೇ ಇಲ್ಲ: 20 ನಿಮಿಷ ಆ್ಯಂಬು​ಲೆ​ನ್ಸ್‌​ನಲ್ಲೇ ಉಳಿದ ಸೋಂಕಿತ

By Kannadaprabha NewsFirst Published Jul 5, 2020, 8:32 AM IST
Highlights

ಉಳ್ಳಾಲದ ಮುನ್ನೂರು ಭಾಗದ 25ರ ಹರೆಯದ ಕೊರೊನಾ ಸೋಂಕಿತ ಶನಿ​ವಾರ, 20 ನಿಮಿಷ ಆ್ಯಂಬುಲೆಸ್ಸ್‌ನಲ್ಲೇ ಉಳಿದಿದ್ದು, ಶಾಸಕರ ಮಧ್ಯಪ್ರವೇಶದ ಬಳಿಕ ಆಸ್ಪತ್ರೆ ವೈದ್ಯರು ದೇರ​ಳ​ಕ​ಟ್ಟೆಯ ಖಾಸ​ಗಿ ಕಟ್ಟಡದಲ್ಲಿರುವ ಕೋವಿಡ್‌ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿದ್ದಾರೆ.

ಮಂಗಳೂರು(ಜು.05): ಉಳ್ಳಾಲದ ಮುನ್ನೂರು ಭಾಗದ 25ರ ಹರೆಯದ ಕೊರೊನಾ ಸೋಂಕಿತ ಶನಿ​ವಾರ, 20 ನಿಮಿಷ ಆ್ಯಂಬುಲೆಸ್ಸ್‌ನಲ್ಲೇ ಉಳಿದಿದ್ದು, ಶಾಸಕರ ಮಧ್ಯಪ್ರವೇಶದ ಬಳಿಕ ಆಸ್ಪತ್ರೆ ವೈದ್ಯರು ದೇರ​ಳ​ಕ​ಟ್ಟೆಯ ಖಾಸ​ಗಿ ಕಟ್ಟಡದಲ್ಲಿರುವ ಕೋವಿಡ್‌ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿದ್ದಾರೆ.

ಬಂಟ್ವಾಳದ ಸಜಿಪದಲ್ಲಿ ನೆರೆ ಹಾವಳಿ ಪ್ರದೇಶವನ್ನು ವೀಕ್ಷಿಸಲು ಶಾಸಕ ಯು.ಟಿ.ಖಾದರ್‌ ತೆರಳುತ್ತಿದ್ದರು. ದಾರಿಮಧ್ಯೆ ಖಾಸಗಿ ಆಸ್ಪತ್ರೆ ಎದುರಿನ ಖಾಸಗಿ ಕಟ್ಟಡದ ಎದುರುಗಡೆ ಪಿಪಿಇ ಕಿಟ್‌ ಧರಿಸಿದ್ದ ಮಂದಿ ಆಂಬುಲೆಸ್ಸ್‌ ಜೊತೆಗೆ ನಿಂತಿದ್ದರು.

ಮಂಗಳೂರು ಪ್ರವೇಶಕ್ಕೆ ವಾಹನಗಳಿಗೆ ನಿರ್ಬಂಧ

ಇದನ್ನು ಗಮನಿಸಿದ ಖಾದರ್‌ ಕಾರು ನಿಲ್ಲಿಸಿ, ಆಂಬುಲೆಸ್ಸ್‌ ಸಿಬ್ಬಂದಿ ಜತೆಗೆ ಮಾತನಾಡಿದಾಗ ಸೋಂಕಿತ ಆಂಬುಲೆಸ್ಸ್‌ ಒಳಗಿರುವುದಾಗಿ ಗೊತ್ತಾಗಿದೆ. ಜಿಲ್ಲಾ ಆರೋಗ್ಯ ಅಧಿಕಾರಿ ಕಚೇರಿಯಿಂದ ಸಂದೇಶ ಬಾರದ ಹಿನ್ನೆಲೆ ಸೋಂಕಿತನನ್ನು ಒಳಸೇರಿಸಲು ಕೋವಿಡ್‌ ಚಿಕಿತ್ಸಾ ಕೇಂದ್ರದ ವೈದ್ಯರು ನಿರಾಕರಿಸಿದ್ದರು.

ತಕ್ಷಣ ಸ್ಪಂದಿಸಿದ ಶಾಸಕ ಯು.ಟಿ.ಖಾದರ್‌ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣ ಸೋಂಕಿತನನ್ನು ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಶಾಸಕರ ಮಾತಿಗೆ ಸ್ಪಂದಿಸಿ ಸೋಂಕಿತನನ್ನು ತಕ್ಷಣ ಕೋವಿಡ್‌ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿದರು.

ದಕ್ಷಿಣ ಕನ್ನಡದಲ್ಲಿ ಮತ್ತೆ ಮೂವರು ಬಲಿ, ಬಿಜೆಪಿ ಮುಖಂಡ ಸೇರಿ 75 ಪಾಸಿಟಿವ್‌

ಶಾಸಕರ ಮಾನವೀಯತೆಯ ಕಾರ್ಯಕ್ಕೆ 20 ನಿಮಿಷಗಳ ಕಾಲ ಸೋಂಕಿತನ ಜತೆಗೆ ರಸ್ತೆ ಬದಿ ಕಾಯುತ್ತಿದ್ದ ಪಿಪಿಇ ಕಿಟ್‌ ಧರಿಸಿದ್ದ ಆಂಬುಲೆಸ್ಸ್‌ ಸಿಬ್ಬಂದಿ ಕೃತಜ್ಞತೆ ಸಲ್ಲಿಸಿದರು.

click me!