ಬೆಂಗಳೂರಿನಲ್ಲಿ ಜೂನ್‌ಗೆ ಕೊರೋನಾ ಕರಾಳತೆ : ಟಾಸ್ಕ್‌ಫೋರ್ಸ್ ಟೀಂ ಎಚ್ಚರಿಕೆ

By Suvarna NewsFirst Published May 5, 2021, 1:32 PM IST
Highlights

ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಆತಂಕಕಾರಿ ಮಾಹಿತಿಯನ್ನು ಕೋವಿಡ್ ಟಾಸ್ಕ್ ಫೋರ್ಸ್ ಟೀಂ   ತಿಳಿಸಿದೆ. ಬೆಂಗಳೂರಿನ ಪಾಲಿಗೆ ಇದೊಂದು ಆಘಾತಕಾರಿ ವಿಚಾರವಾಗಿದ್ದು, ಜೂನ್‌ಗೆ ಕೋವಿಡ್ ಕೇಸ್‌ಗಳು ವಿಪರೀತವಾಗುವ ಎಚ್ಚರಿಕೆ ನೀಡಿದೆ. 

ಬೆಂಗಳೂರು (ಮೇ.05): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮುಂದುವರಿದಿದೆ. ಜನರ ಜೀವ-ಜೀವನವನ್ನು ಹಿಂಡುತ್ತಿರುವ ಮಹಾಮಾರಿಯಿಂದ ತಲ್ಲಣ ಸೃಷ್ಟಿಯಾಗಿದೆ. 

ಇದೇ ವೇಳೆ ಬೆಂಗಳೂರಿನ ಪಾಲಿಗೆ ಮತ್ತೊಂದು ಆಘಾತದ ಸುದ್ದಿಯು ಇಲ್ಲಿದೆ.  ಜೂನ್ ಮೊದಲ ವಾರದ ವೇಳೆಗೆ ಬೆಂಗಳೂರಿಗೆ 70 ಸಾವಿರ ಆಕ್ಸಿಜನ್ ಬೆಡ್ ಗಳು ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಇದೇ ವೇಗದಲ್ಲಿ ಮಹಾಮಾರಿ ಮುಂದುವರಿದಲ್ಲಿ ಈ ಪ್ರಮಾಣದ ಬೆಡ್‌ಗಳ ಅವಶ್ಯಕತೆ ಇದೆ ಎನ್ನಲಾಗಿದೆ. 

ಐದು ಸಚಿವರಿಗೆ ಕೋವಿಡ್ ಹೊಣೆ, ಉಸ್ತುವಾರಿ ಸಚಿವರು ತಕ್ಷಣ ತಮ್ಮ ಜಿಲ್ಲೆಗೆ ತೆರಳಲು ಸೂಚನೆ

ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಮಾಹಿತಿ ರವಾನೆ ಮಾಡಿದ್ದು, ಈಗಾಗಲೇ ರಾಜ್ಯ ಸರ್ಕಾರದ ಕೇಂದ್ರ ಸರ್ಕಾರದ ವರದಿಯು ರಾಜ್ಯ ಸರ್ಕಾರದ ಕೈ ಸೇರಿದೆ. 

ಮಂಗಳವಾರ (ಮೇ.4) ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಆತಂಕಕಾರಿ ಮಾಹಿತಿಯನ್ನು ಕೋವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷ ಡಾ. ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ. 

ಈ ನಿಟ್ಟಿನಲ್ಲಿ ರಾಜ್ಯದ ಪಾಲಿನ ಆಕ್ಸಿಜನ್ ರಾಜ್ಯವೇ ಬಳಕೆ ಮಾಡಲು ಅನುಮತಿ ಪಡೆಯುವಂತೆ ಸಿಎಂ ಮೇಲೆ ಒತ್ತಡ ಹಾಕಿದ್ದು, ತಾವು ಸತತವಾಗಿ ಕೇಂದ್ರ ಸರ್ಕಾರದ ಜೊತೆ ಸಂಪರ್ಕದಲ್ಲಿರುವುದಾಗಿ  ಸಂಪುಟ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!