ಇಲ್ಲಿ ಹಳ್ಳಿಗಳಲ್ಲೇ ಅಬ್ಬರಿಸುತ್ತಿದೆ ಕೊರೋನಾ : ಮೋಸ್ಟ್ ಡೇಂಜರಸ್ ಪಟ್ಟಿಯಲ್ಲಿದೆ ಈ ಜಿಲ್ಲೆ

By Suvarna News  |  First Published Apr 29, 2021, 1:35 PM IST

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಬ್ಬರಿಸುತ್ತಿದೆ. ದಿನದಿನವೂ ಸೋಂಕಿತರು, ಸಾವಿನ ಸಂಖ್ಯೆ ಅಧಿಕವಾಗುತ್ತಿದೆ. ಜನರ ಜೀವ, ಜೀವನವನ್ನು ನುಂಗುತ್ತಿರುವ ಮಹಾಮಾರಿ ರಾಜ್ಯದ 10 ಜಿಲ್ಲೆಗಳಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಚಾಮರಾಜನಗರ ಜಿಲ್ಲೆ ಮೋಸ್ಟ್ ಡೇಂಜರಸ್ ಆಗಿದೆ. 


ಚಾಮರಾಜನಗರ (ಏ.29):  ರಾಜ್ಯದಲ್ಲಿ ಮಹಾಮಾರಿ ಅಬ್ಬರ ವಿಪರೀತವಾಗಿದ್ದು ಇದೀಗ ಚಾಮರಾಜನಗರ ಜಿಲ್ಲೆಯ ಹಳ್ಳಿಹಳ್ಳಿಗಳಲ್ಲೂ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. 

ಚಾಮರಾಜನಗರದ ಜಿಲ್ಲೆಯ ನಗರ ಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶಗಳಲ್ಲೆ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುತ್ತಿವೆ.  ದೊಡ್ಡರಾಯಪೇಟೆ ಒಂದೇ ಗ್ರಾಮದಲ್ಲಿ 40 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ.  

Tap to resize

Latest Videos

undefined

ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆ ಗ್ರಾಮದಲ್ಲಿ  ಕಳೆದ ಕೆಲದಿನಗಳ ಹಿಂದೆ ಮಹಿಳೆಯೊಬ್ಬರು ಮೃತಪಟ್ಟಿದ್ದರು.  ಇವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಸೋಂಕಿತರೊಬ್ಬರಿಂದ ಸೋಂಕು ಹರಡಿರುವ ಸಾದ್ಯತೆ ಇದೆ.

ರಾಜ್ಯದ 10 ಜಿಲ್ಲೆಗಳು ಮೋಸ್ಟ್ ಡೇಂಜರಸ್ : ಇಲ್ಲಿ ಎಲ್ಲವೂ ಸಂಪೂರ್ಣ ಲಾಕ್ ಆಗುತ್ತಾ..? ...

 ಪ್ರತಿ ದಿನವೂ ಕೂಡ ಅತ್ಯಧಿಕ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ. ಸೋಂಕಿತರಿಗೆ ಸರಿಯಾದ ಟ್ರೀಟ್ ಮೆಂಟ್ ಸಿಗುತ್ತಿಲ್ಲ. ಹೋಂ ಐಸೋಲೇಷನ್ ನಲ್ಲಿ ಸೋಂಕಿತರು ಇದ್ದು,  ಆರೋಗ್ಯ ಇಲಾಖೆ ತೀವ್ರ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. 

ಔಷಧಿಗಾಗಿ ಸೋಂಕಿತರೇ ಆಸ್ಪತ್ರೆ ಗೆ ಹೋಗಬೇಕಾದ ಸ್ಥಿತಿ ಇದೆ.  ಔಷಧಿ ನೀಡಲು ಒಮ್ಮೆ ಆಂಬುಲೆನ್ಸ್ ನಲ್ಲಿ ಕರೆದೊಯ್ದು ಆರೋಗ್ಯ ಇಲಾಖೆ ಮತ್ತೆ ಅವರೆಡೆ ಗಮನವನ್ನೂ ಹರಿಸುತ್ತಿಲ್ಲ. ಇಲ್ಲಿನ ಸೋಂಕಿತರೆಲ್ಲರೂ ತಮ್ಮ ಹೊಣೆಯನ್ನು ತಾವೆ ಹೊರಬೇಕಾದ ಸ್ಥಿತಿಗತಿಗಳಿದೆ.  

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 
 

click me!