ತುಮಕೂರು (ಮೇ.14): ಜಿಲ್ಲೆಯಲ್ಲಿ ರಾಕೆಟ್ ವೇಗದಲ್ಲಿ ಏರಿದ್ದ ಕೊರೋನಾ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಂಡು ಬಂದಿದೆ. ಗುರುವಾರ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿದೆ.
ಗುರುವಾರ ತುಮಕೂರಿನಲ್ಲಿ 1702 ಮಂದಿಗೆ ಕೋವಿಡ್ ಸೋಂಕು ತಗುಲಿದರೆ ಗುಣಮುಖರಾದವರ ಸಂಖ್ಯೆ 2111 ಇದೆ.
ಜೀವರಕ್ಷಕ ಔಷಧಗಳನ್ನು ನೀಡಿ ಸೋಂಕಿತರ ನೆರವಿಗೆ ಧಾವಿಸಿದ ಮಸಾಲಾ ಜಯರಾಮ್ ...
ಇದುವರೆಗೆ ಜಿಲ್ಲೆಯಲ್ಲಿ 52 ಸಾವಿರ ಮಂದಿ ಗುಣಮುಖರಾಗಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 56, ಗುಬ್ಬಿ 232, ಕೊರಟಗೆರೆ ತಾಲೂಕಿನಲ್ಲಿ 140, ಕುಣಿಗಲ್ ತಾಲೂಕಿನಲ್ಲಿ 68 ಪಾವಗಡದಲ್ಲಿ 115,. ಶಿರಾ 267, ತಿಪಟೂರು 146, ತುಮಕೂರು 430. ತುರುವೇಕೆರೆ 71 ಮಂದಿಯಲ್ಲಿ ಸೋಂಕು ದೃಢಟ್ಟಿದೆ. ಇನ್ನು ಜಿಲ್ಲೆಯಲ್ಲಿ 17 ಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಗುರುವಾರ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ 11 ಮಂದಿ ಸಾವಿಗೀಡಾಗಿದ್ದು, 696 ಒಟ್ಟು ಮೃತ ಸೋಂಕಿತರ ಸಂಖ್ಯೆಯಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona