ಗಂಗಾವತಿ: ಬೆಡ್‌ ಸಿಗದೆ ಆಸ್ಪತ್ರೆ ದ್ವಾರ​ದಲ್ಲೇ ಸೋಂಕಿತ ಸಾವು

By Kannadaprabha NewsFirst Published May 12, 2021, 7:58 AM IST
Highlights

* ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ  ನಡೆದ ಘಟನೆ
* ಸರಕಾರಿ ಆಸ್ಪತ್ರೆಯಲ್ಲಿ ಎಲ್ಲ ಬೆಡ್‌ಗಳು ಭರ್ತಿ
*  ಸರಿಯಾದ ಸಮಯಕ್ಕೆ ಬೆಡ್‌ ಮತ್ತು ಚಿಕಿತ್ಸೆ ದೊರೆಯದೆ ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ಮೃತಪಟ್ಟ ರೋಗಿ
 

ಗಂಗಾವತಿ(ಮೇ.12): ಉಸಿರಾಟದ ತೊಂದರೆಯಿಂದ ತೀವ್ರ ಅಸ್ವಸ್ಥನಾಗಿದ್ದ ವ್ಯಕ್ತಿ ಉಪ ವಿಭಾಗ ಆಸ್ಪತ್ರೆಯಲ್ಲಿ ಬೆಡ್‌ ಸಿಗದೆ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ. ಬಳ್ಳಾರಿ ಜಿಲ್ಲೆಯ ದೇವಲಾಪುರ ಗ್ರಾಮದ ಸಿದ್ದಪ್ಪ ದೇವಲಾಪುರ (50) ಮೃತ ವ್ಯಕ್ತಿ.

ಈತನಿಗೆ ಕೊರೋನಾ ಸೋಂಕು ದೃ​ಢವಾಗಿದ್ದು, ನಗರದ ಎಲ್ಲ ಆಸ್ಪತ್ರೆಗಳಿಗೆ ಹೋಗಿ ಕೊನೆಗೆ ಇಲ್ಲಿಯ ಸರಕಾರಿ ಆಸ್ಪತ್ರೆಗೆ ಆಗಮಿಸಿದ್ದರು. ಉಪ ವಿಭಾಗದ ಸರಕಾರಿ ಆಸ್ಪತ್ರೆಯಲ್ಲಿ ಎಲ್ಲ ಬೆಡ್‌ಗಳು ಭರ್ತಿಯಾಗಿದ್ದರಿಂದ ಸರಿಯಾದ ಸಮಯಕ್ಕೆ ಬೆಡ್‌ ಮತ್ತು ಚಿಕಿತ್ಸೆ ದೊರೆಯದೆ ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ಮೃತಪಟ್ಟಿದ್ದಾನೆ.

"

ಕೊಪ್ಪಳ: ನಕಲಿ ವೈದ್ಯರ ಮೇಲೆ ದಾಳಿ, ಹಲವು ಆಸ್ಪತ್ರೆಗಳು ಸೀಜ್‌

ಇದಕ್ಕೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಈಶ್ವರ ಸವಡಿ, ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ಇರುವ 160 ಬೆಡ್‌ಗಳು ಭರ್ತಿಯಾಗಿವೆ. ಬರುವಂತ ರೋಗಿಗಳಿಗೆ ಯಾವುದೇ ರೀತಿಯಿಂದ ತಾತ್ಸಾರ ಮಾಡುತ್ತಿಲ್ಲ. ಸಿಬ್ಬಂದಿ ತಮ್ಮ ಜೀವವನ್ನು ಕೈಯಲ್ಲಿಟ್ಟು ಕೊಂಡು ಕೆಲಸ ಮಾಡುತ್ತಿದ್ದಾರೆ. ವೈದ್ಯರು ಸೇರಿದಂತೆ ಸಿಬ್ಬಂದಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ವಿಳಂಬ ಮಾಡಿಲ್ಲ. ಬೆಡ್‌ ಖಾಲಿ ಇದ್ದರೆ ತಕ್ಷಣ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೇ ಬರುವ ರೋಗಿಗಳಿಗೂ ಅನುಕೂಲ ಮಾಡಿಕೊಟ್ಟಿದೆ. ಸೋಂಕಿತರು ಕೊನೆಯ ಹಂತದಲ್ಲಿ ಚಿಕಿತ್ಸೆ ಪಡೆಯುತ್ತಿರುವು​ದರಿಂದ ತೀವ್ರ ಅಸ್ವಸ್ಥರಾಗುವದಕ್ಕೆ ಕಾರಣರಾಗುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!