ಸೋಂಕಿತನ ಕೈ-ಕಾಲು ಕಟ್ಟಿ ಹಾಕಿದ್ದರಿಂದ ರೋಗಿ ಸಾವು..!

By Kannadaprabha News  |  First Published Apr 26, 2021, 9:12 AM IST

ಕೊರೋನಾಗೆ ಚಿಕಿತ್ಸೆ ನೀಡಲು ಕೈ-ಕಾಲು ಕಟ್ಟಿ ಹಾಕುವ ಪರಿಸ್ಥಿತಿ ಏನಾಗಿತ್ತು, ಹಿಂಸಿಸಿ ಚಿಕಿತ್ಸೆ ನೀಡಿರುವುದೇ ತನ್ನ ಪತಿ ಸಾವಿಗೆ ಕಾರಣ| ಸರ್ಕಾರಿ ಆಸ್ಪತ್ರೆ ವೈದ್ಯರು ಜನರ ಜೀವದ ಜೊತೆ ಆಟವಾಡುತ್ತಿದ್ದಾರೆ| ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ವಿರುದ್ಧ ಮಹಿಳೆ ಆರೋಪ| 


ಬೆಂಗಳೂರು(ಏ.26): ಕೊರೋನಾ ಸೋಂಕಿತರಾಗಿದ್ದ ತಮ್ಮ ಪತಿಗೆ ಕೈಕಾಲು ಕಟ್ಟಿ ಹಾಕಿ ಹಿಂಸಿಸಿ ಚಿಕಿತ್ಸೆ ನೀಡಿದ್ದರಿಂದಲೇ ಸಾವನ್ನಪ್ಪಿದ್ದಾರೆ ಎಂದು ಮೃತಪಟ್ಟ ವ್ಯಕ್ತಿಯ ಪತ್ನಿ ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ವಿರುದ್ಧ ದೂರಿದ್ದಾರೆ.

ಇತ್ತೀಚೆಗಷ್ಟೇ ತುಮಕೂರು ರಸ್ತೆಯಲ್ಲಿರುವ ಪೀಪಿಲ್‌ ಟ್ರೀ ಆಸ್ಪತ್ರೆಯಲ್ಲಿ ಪಾಸಿಟಿವ್‌ ವರದಿ ನೀಡಿದ್ದರು. ಸಾಕಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಸುತ್ತಾಡಿದರೂ ಬೆಡ್‌ ಸಿಗದೆ ಕೊನೆಗೆ ಮೂರು ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದರೂ ನಮಗೆ ಯಾವುದೇ ಮಾಹಿತಿ ನೀಡಲಿಲ್ಲ. ನಿನ್ನೆ ಕರೆ ಮಾಡಿ ಕೇಳಿದರೂ ವೈದ್ಯರಿ ಸರಿಯಾಗಿ ಸ್ಪಂದಿಸಲಿಲ್ಲ ಎಂದು ಪತ್ನಿ ಅಳಲು ತೋಡಿಕೊಂಡರು.

Latest Videos

undefined

ಕೊರೋನಾ ಇದೆಯಾ? ಇವರನ್ನು ಸಂಪರ್ಕಿಸಿ

ಆಸ್ಪತ್ರೆಯಲ್ಲಿ ಸ್ಮಾರ್ಟ್‌ ಫೋನ್‌ ಬಳಸಲು ಅನುಮತಿ ನೀಡಲಿಲ್ಲ. ಕೊನೆಗೆ ಕೀ ಪ್ಯಾಡ್‌ ಮೊಬೈಲ್‌ ನೀಡಲಾಯಿತು. ಈ ಫೋನ್‌ಗೆ ಕರೆ ಮಾಡಿದರೆ, ಫೋನ್‌ ರಿಸೀವ್‌ ಆಗುತ್ತಿದೆಯೇ ವಿನಾ ಆ ಕಡೆಯಿಂದ ಯಾರು ಮಾತನಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿರಲಿಲ್ಲ. ಬಾಯಿ ಅಲ್ಸರ್‌ ಇದ್ದ ಕಾರಣ ಸರಿಯಾಗಿ ಮಾತನಾಡಲೂ ಸಹ ಆಗುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವೈದ್ಯರು ಏಕೆ ಕೈ-ಕಾಲುಗಳನ್ನು ಏಕೆ ಕಟ್ಟಿ ಹಾಕಿದ್ದರು ಎಂಬುದೇ ತಿಳಿಯುತ್ತಿಲ್ಲ ಎಂದರು.

ಇನ್ನು ಕೊರೋನಾಗೆ ಚಿಕಿತ್ಸೆ ನೀಡಲು ಕೈ-ಕಾಲು ಕಟ್ಟಿ ಹಾಕುವ ಪರಿಸ್ಥಿತಿ ಏನಾಗಿತ್ತು. ಹಿಂಸಿಸಿ ಚಿಕಿತ್ಸೆ ನೀಡಿರುವುದೇ ತನ್ನ ಪತಿ ಸಾವಿಗೆ ಕಾರಣವಾಗಿದೆ. ಸರ್ಕಾರಿ ಆಸ್ಪತ್ರೆ ವೈದ್ಯರು ಜನರ ಜೀವದ ಜೊತೆ ಆಟವಾಡುತ್ತಿದ್ದಾರೆ. ತಮಗಿರುವ ಇಬ್ಬರು ಮಕ್ಕಳಿಗೆ ಯಾರು ಹೊಣೆ ಎಂದು ನೋವಿನಿಂದ ನುಡಿದರು.
 

click me!