ಇಲ್ಲಿನ ಪ್ರಯೋಗಾಲಯದಲ್ಲಿ ಪ್ರತಿ ದಿನ ಮೂರು ಮಂದಿಯ ಗಂಟಲ ಹಾಗೂ ಮೂಗಿನ ದ್ರವವನ್ನು ಪರೀಕ್ಷೆ ಮಾಡಲಾಗುತ್ತಿದೆ. ಅದೇ ವ್ಯಕ್ತಿಯ ಮಾದರಿಯನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ. ಹೀಗೆ ಇಲ್ಲಿನ ಹಾಗೂ ಬೆಂಗಳೂರಿನ ವರದಿ ಒಂದೇ ಆಗಿದ್ದರೆ, ಚಿಕ್ಕಮಗಳೂರು ಪ್ರಯೋಗಾಲಯದಲ್ಲಿ ಮಾಡುತ್ತಿರುವ ಟೆಸ್ಟಿಂಗ್ ಸರಿಯಾಗಿದೆ ಎಂದರ್ಥ. ಈ ನಿಟ್ಟಿನಲ್ಲಿ ಪ್ರತಿದಿನ ಮೂರು ಮಂದಿಯ ಮಾದರಿ ಪರೀಕ್ಷೆ ನಡೆಸಲಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಚಿಕ್ಕಮಗಳೂರು(ಜು.27): ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ತೆರೆಯಲಾಗಿರುವ ಕೋವಿಡ್ ಪರೀಕ್ಷಾ ಪ್ರಯೋಗಾಲಯ ಸದ್ಯ ಟ್ರಯಲ್ ರನ್ ಆಗುತ್ತಿದೆ.
ಅಂದರೆ, ಇಲ್ಲಿನ ಪ್ರಯೋಗಾಲಯದಲ್ಲಿ ಪ್ರತಿ ದಿನ ಮೂರು ಮಂದಿಯ ಗಂಟಲ ಹಾಗೂ ಮೂಗಿನ ದ್ರವವನ್ನು ಪರೀಕ್ಷೆ ಮಾಡಲಾಗುತ್ತಿದೆ. ಅದೇ ವ್ಯಕ್ತಿಯ ಮಾದರಿಯನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ. ಹೀಗೆ ಇಲ್ಲಿನ ಹಾಗೂ ಬೆಂಗಳೂರಿನ ವರದಿ ಒಂದೇ ಆಗಿದ್ದರೆ, ಚಿಕ್ಕಮಗಳೂರು ಪ್ರಯೋಗಾಲಯದಲ್ಲಿ ಮಾಡುತ್ತಿರುವ ಟೆಸ್ಟಿಂಗ್ ಸರಿಯಾಗಿದೆ ಎಂದರ್ಥ. ಈ ನಿಟ್ಟಿನಲ್ಲಿ ಪ್ರತಿದಿನ ಮೂರು ಮಂದಿಯ ಮಾದರಿ ಪರೀಕ್ಷೆ ನಡೆಸಲಾಗುತ್ತಿದೆ. ಸದ್ಯ ಎರಡು ಕಡೆಯಲ್ಲೂ ಒಂದೇ ವರದಿ ಬರುತ್ತಿದೆ ಎಂದು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಹಿರಿಯ ವೈದ್ಯರು ಸುವರ್ಣ ನ್ಯೂಸ.ಕಾಂ ಸೋದರ ಸಂಸ್ಥೆ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ತರಾತುರಿ ಬೇಡ:
ಕೋವಿಡ್ ಲ್ಯಾಬ್ ತೆರೆಯಲು ಜಿಲ್ಲೆಗೆ 1.48 ಕೋಟಿ ರುಪಾಯಿ ಬಿಡುಗಡೆಯಾಗಿದೆ. ಇದರಲ್ಲಿ 1.9 ಕೋಟಿ ರು. ಲ್ಯಾಬ್‌ನ ಉಪಕರಣಗಳ ಖರೀದಿಗೆ ವಿನಿಯೋಗಿಸಲಾಗಿದೆ. ಲ್ಯಾಬ್‌ಗೆ 6 ಕೊಠಡಿಗಳನ್ನು ನಿಗದಿಪಡಿಸಲಾಗಿದ್ದು, ಇವುಗಳನ್ನು ಸುಸ್ಥಿತಿಯಲ್ಲಿಡಲು 24 ಲಕ್ಷ ರು. ಖರ್ಚು ಮಾಡಲಾಗಿದೆ.
ದೇವರಿಗೂ ಕೊರೋನಾ ಕಾಟ: ನೌಕರರ ಸಂಬಳಕ್ಕೆ ಕಾಸಿಲ್ಲ!
ಹಾಸನದ ಮೆಡಿಕಲ್ ಕಾಲೇಜಿನಿಂದ ಮೈಕ್ರೋ ಬಯಾಲಿಜಿಸ್ಟ್ ಒಬ್ಬರನ್ನು ಕರೆಸಿಕೊಳ್ಳಲಾಗಿದೆ. 10 ಮಂದಿ ಲ್ಯಾಬ್‌ಟೆಕ್ನಿಷಿಯನ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಇನ್ನು 5 ಮಂದಿ ನೇಮಕ ಮಾಡಿಕೊಳ್ಳಬೇಕಾಗಿದೆ. ಲ್ಯಾಬ್‌ನ ಎಲ್ಲ ಉಪಕರಣಗಳನ್ನು ಜೋಡಣೆ ಮಾಡಲಾಗಿದೆ. ಇಂಡಿಯನ್ ಮೆಡಿಕಲ್ ರಿಸಚ್‌ರ್ ಕಮಿಟಿಗೆ ಲ್ಯಾಬ್ ಅನುಮತಿ ಕೋರಿ ಪತ್ರವನ್ನೂ ಬರೆಯಲಾಗಿದೆ. ಅಂದರೆ, ಲ್ಯಾಬ್ ಆರಂಭಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಟ್ರಯಲ್ ರನ್ ಆಗುತ್ತಿದೆ. ಮುಂದಿನ ದಿನಗಳಲ್ಲಿ ಲ್ಯಾಬ್‌ನಲ್ಲಿ ಯಾವುದೇ ದೋಷ ಬರದಂತೆ ಪ್ರಾರಂಭದ ಹಂತದಲ್ಲೇ ಎಚ್ಚರಿಕೆ ವಹಿಸುವ ಕೆಲಸ ನಡೆಯುತ್ತಿದೆ ಎಂದು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಸರ್ಜನ್ ಡಾ.ಮೋಹನ್ ಕುಮಾರ್ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
3 ಸಾವಿರ ರಾಪಿಡ್ ಕಿಟ್:
ಜಿಲ್ಲೆಗೆ ಈ ಹಿಂದೆ 2 ಸಾವಿರ ರಾರಯಪಿಡ್ ಕಿಟ್‌ಗಳು ಬಂದಿದ್ದವು. ಅವುಗಳು ಖಾಲಿಯಾಗಿದ್ದು, ಈಗ ಮತ್ತೆ 3 ಸಾವಿರ ರಾರಯಪಿಡ್ ಕಿಟ್‌ಗಳು ಬಂದಿವೆ. ಇವುಗಳಲ್ಲಿ ಈಗಾಗಲೇ 500 ಖಾಲಿಯಾಗಿವೆ. ಇನ್ನು 2500 ಕಿಟ್‌ಗಳಿದ್ದು, ಶೀತ, ಜ್ವರ, ಉಸಿರಾಟದ ತೊಂದರೆ ಎಂದು ಬರುವವರಿಗೆ ಪರೀಕ್ಷೆ ಮಾಡಲು ಏನೂ ತೊಂದರೆ ಇಲ್ಲ. ರಾರಯಪಿಡ್‌ಕಿಟ್‌ನಲ್ಲಿ ಯಾವುದೇ ವ್ಯಕ್ತಿಗೆ ಪರೀಕ್ಷೆ ಮಾಡಿದರೆ 5 ನಿಮಿಷದಲ್ಲಿ ಫಲಿತಾಂಶ ತಿಳಿಯಲಿದೆ. ಆದ್ದರಿಂದ ಲ್ಯಾಬ್ ಕಾರ್ಯಾರಂಭ ವ್ಯವಸ್ಥಿತವಾಗಿ ಆಗಬೇಕೆಂಬುದು ಜಿಲ್ಲಾಡಳಿತದ ಉದ್ದೇಶವಾಗಿದೆ.
ಜಿಲ್ಲಾ ಕೋವಿಡ್ ಲ್ಯಾಬ್‌ನ ಟ್ರಯಲ್ ರನ್ ಆಗುತ್ತಿದೆ. ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ಗಂಟಲ ಮತ್ತು ಮೂಗಿನ ದ್ರವ ಪರೀಕ್ಷೆ ಮಾಡಲಾಗುತ್ತಿದೆ. ವರದಿಗಳು ಒಂದೇ ಬರುತ್ತಿವೆಯೇ ಎಂಬುದನ್ನು ಪರೀಕ್ಷೆ ನಡೆಸಲಾಗುತ್ತಿದೆ.