ಬೆಳಗಾವಿ (ಜ.03): ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ನಿಗಾ ವಹಿಸುವ ಜತೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರವೇಶ ಮಾಡುವವರ ಮೇಲೆ ನಿಗಾ ಇಡಲಾಗಿದೆ. ಈಗಾಗಲೇ ಜಿಲ್ಲೆಯ ಗಡಿ ಭಾಗಗಳಲ್ಲಿ 23 ಚೆಕ್‌ಪೋಸ್ಟ್‌ಗಳ ನಿರ್ಮಿಸಲಾಗಿದೆ. ನೆಗೆಟಿವ್ ವರದಿ ಹೊಂದಿದವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಕೋವಿಡ್ ನಿರ್ವಹಣೆಗೆ ಎಲ್ಲ ಇಲಾಖೆಗಳ ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ ಎಂದರು.
ಹೊಸ ವರ್ಷಾಚರಣೆಗೆ ಗೋವಾಕ್ಕೆ ಹೋಗಿ ಬಂದ ಪ್ರವಾಸಿಗರ ಮೇಲೆ ನಿಗಾ ವಹಿಸಲಾಗಿದೆ. ಚೆಕ್‌ಪೋಸ್ಟ್‌ನಲ್ಲಿ ಮಾಹಿತಿ ಸಂಗ್ರಹಿಸಿ, ಗೋವಾದಿಂದ ಮರಳಿದವರನ್ನು ಪರೀಕ್ಷೆಗೆ ಒಳಪಡಿಸಲಾಗುವುದು. 2 ಡೋಸ್ ಲಸಿಕೆ ಮತ್ತು ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.
ಹೈ ಸ್ಪೀಡಲ್ಲಿ ಸೋಂಕು :
ಒಮಿಕ್ರೋನ್(Omicron) ಸೋಂಕು ಆಫ್ರಿಕಾ(Afirca), ಅಮೆರಿಕ(America), ಯುರೋಪ್(Europe) ದೇಶದಲ್ಲಿ ತೀವ್ರ ವೇಗದಲ್ಲಿ ಹಬ್ಬಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಹೊತ್ತಿನಲ್ಲೇ ರಾಜ್ಯದಲ್ಲೂ(Karnataka) ಕೊರೋನಾ ಸೋಂಕು ಅತಿ ವೇಗವಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮುನ್ನೂರರ ಆಸುಪಾಸಿನಲ್ಲಿದ್ದ ದೈನಂದಿನ ಸೋಂಕಿತರ ಸಂಖ್ಯೆ ಕೇವಲ ನಾಲ್ಕೇ ದಿನದಲ್ಲಿ ಈಗ ಸಾವಿರದ ಗಡಿ ದಾಟಿದೆ. ಪ್ರತಿದಿನ 200ರ ಅಸುಪಾಸಿಗೆ ಕುಸಿದಿದ್ದ ಕೊರೋನಾ(Coronavirus) ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ ಕಂಡಿದ್ದು ಮೊದಲೆರಡು ಅಲೆಗಳಿಗೆ ಹೋಲಿಸಿದರೆ ಕೊರೋನಾ ಸೋಂಕು ಅತ್ಯಂತ ವೇಗದಲ್ಲಿ ವ್ಯಾಪಿಸುತ್ತಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ(Bengaluru) ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿವೆ.
ಮೊದಲ ಅಲೆಗೆ ಕಾರಣವಾಗಿದ್ದ ಆಲ್ಫಾ, ಬೀಟಾ ಮತ್ತು ಎರಡನೇ ಅಲೆಯನ್ನು ಸೃಷ್ಟಿಸಿದ್ದ ಡೆಲ್ಟಾಕ್ಕಿಂತ(Delta) ಮೂರನೇ ಅಲೆಗೆ ಕಾರಣವಾಗಬಹುದಾದ ಒಮಿಕ್ರೋನ್ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ಈಗಾಗಲೇ ಸಾಂಕ್ರಾಮಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
Covid 19 Spike: 27,553 ಕೇಸ್: 2 ತಿಂಗಳ ಗರಿಷ್ಠ
ರಾಜ್ಯದಲ್ಲಿ ಸದ್ಯ 66 ಮಂದಿಯಲ್ಲಿ ಒಮಿಕ್ರೋನ್ ಪತ್ತೆಯಾಗಿದೆ. ವಿದೇಶದಿಂದ ಬಂದ ಪ್ರಯಾಣಿಕರಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಒಮಿಕ್ರೋನ್ ಪತ್ತೆ ಆಗಿದ್ದರೂ ಪ್ರಯಾಣದ ಹಿನ್ನೆಲೆಯೇ ಇಲ್ಲದವರಲ್ಲಿಯೂ ಒಮಿಕ್ರೋನ್ ಕಂಡು ಬಂದಿದೆ. ಆದರೆ ಸೋಂಕು ಹರಡುತ್ತಿರುವ ವೇಗ ಗಮನಿಸಿದರೆ ಒಮಿಕ್ರೋನ್ ರಾಜ್ಯದಲ್ಲಿ ಈಗಾಗಲೇ ದೊಡ್ಡ ಮಟ್ಟದಲ್ಲಿ ಹರಡಿರುವ ಲಕ್ಷಣಗಳು ಗೋಚರಿಸುತ್ತಿದೆ.
ರಾಜ್ಯದಲ್ಲಿ 2020ರ ಜೂನ್ ತಿಂಗಳಲ್ಲಿ ಮೊದಲ ಅಲೆ ಆರಂಭಗೊಂಡಿತ್ತು. ಜೂನ್ 23 ರಂದು 322 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಆ ಬಳಿಕ ದೈನಂದಿನ ಸೋಂಕಿತರ ಸಂಖ್ಯೆ ಎಂಟನೇ ದಿನ (ಜುಲೈ 1)ಕ್ಕೆ ಸಾವಿರದ ಗಡಿ ದಾಟಿತ್ತು.
2021ರಲ್ಲಿ ರಾಜ್ಯದಲ್ಲಿ ಎರಡನೇ ಅಲೆಯ ವೇಳೆ ಮಾರ್ಚ್ 1 ರಂದು 349 ಪ್ರಕರಣ ವರದಿಯಾಗಿತ್ತು. ಇದಾದ ಮಾರ್ಚ್ 16ಕ್ಕೆ 1135 ಪ್ರಕರಣಗಳು ದಾಖಲಾಗಿತ್ತು. ಎರಡನೇ ಅಲೆಯಲ್ಲಿ ಸೋಂಕು ಹರಡುವ ವೇಗ ಆರಂಭದಲ್ಲಿ ನಿಧಾನವಾಗಿದ್ದರೂ ಆ ಬಳಿಕ ಸೋಂಕು ವ್ಯಾಪಕವಾಗಿ ಹರಡಿ ದಿನಕ್ಕೆ 50 ಸಾವಿರದ ತನಕ ಪ್ರಕರಣಗಳು ವರದಿಯಾಗಿದ್ದವು.
ಆದರೆ ಈ ಎರಡು ಅಲೆಗಳಿಗಿಂತಲೂ ಸದ್ಯ ಸೋಂಕಿನ ಹರಡುವಿಕೆ ವೇಗವಾಗಿದೆ. ಡಿಸೆಂಬರ್ 28 ರಂದು 356 ಪ್ರಕರಣ ವರದಿಯಾಗಿದ್ದರೆ ನಾಲ್ಕೇ ದಿನದಲ್ಲಿ ಸೋಂಕಿತರ ಸಂಖ್ಯೆ ಸಾವಿರ (ಜನವರಿ 1ಕ್ಕೆ 1033) ಮೀರಿದೆ. ಈ ಪ್ರವೃತ್ತಿ ಮುಂದುವರಿದರೆ ಮುಂದಿನ ಕೆಲವೇ ದಿನಗಳಲ್ಲಿ ಅಪಾರ ಪ್ರಮಾಣದಲ್ಲಿ ಹೊಸ ಸೋಂಕಿತರು ಪತ್ತೆಯಾಗುವ ಸಾಧ್ಯತೆಗಳಿವೆ.
Karnataka Lockdown: 'ಐಸಿಯು ಶೇ.40 ಭರ್ತಿಯಾದರೆ ಲಾಕ್‌ಡೌನ್ ಮಾಡಿ'
ಬೆಂಗ್ಳೂರಲ್ಲಿ 6 ತಿಂಗಳ ಬಳಿಕ ಕೊರೋನಾ ಸ್ಫೋಟ..!
ಬೆಂಗಳೂರು ನಗರದಲ್ಲಿ ಕೊರೋನಾ(Coronavirus) ಪ್ರಕರಣಗಳ ಸಂಖ್ಯೆ ಭಾನುವಾರ ಸಹ ಏರುಗತಿಯಲ್ಲಿ ಸಾಗಿದ್ದು, 190 ದಿನಗಳ ನಂತರ ಸೋಂಕಿನ ಪ್ರಕರಣಗಳ ಸಂಖ್ಯೆ 923 ತಲುಪಿದೆ. ಮೂವರು ಮೃತಪಟ್ಟಿದ್ದಾರೆ(Death).
ಕಳೆದ ಜೂ.26ರಂದು ಒಂದೇ ದಿನ 955 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ನಂತರ ಸೋಂಕಿನ ಪ್ರಕರಣ ಕಡಿಮೆಯಾಗುತ್ತಾ ಬಂದಿತ್ತು. ಈಗ ಕಳೆದ ಕೆಲವು ದಿನಗಳಿಂದ ಪುನಃ ಸೋಂಕು ಪ್ರಕರಣ ಹೆಚ್ಚಾಗತೊಡಗಿದೆ.