ಮೈಸೂರು : ಆತ್ಮಹತ್ಯೆಗೆ ಶರಣಾದ ಕೋವಿಡ್ ಸೆಂಟರ್ ಸ್ಟಾಫ್ ನರ್ಸ್

By Suvarna NewsFirst Published May 23, 2021, 2:58 PM IST
Highlights
  •   ಆತ್ಮಹತ್ಯೆಗೆ ಶರಣಾದ ಕೋವಿಡ್ ಸೆಂಟರ್ ಸ್ಟಾಫ್ ನರ್ಸ್
  • ಮೇಟಗಳ್ಳಿ ಕೋವಿಡ್ ಸೆಂಟರ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನರ್ಸ್
  • ಸ್ಟಾಫ್ ನರ್ಸ್ ಆತ್ಮಹತ್ಯೆಗೆ ತಿಳಿಯದ ನಿಖರ ಕಾರಣ

ಮೈಸೂರು (ಮೇ.23): ಮೈಸೂರು ಮೇಟಗಳ್ಳಿ ಕೋವಿಡ್ ಕೇಂದ್ರದ ಸ್ಟಾಫ್ ನರ್ಸ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಮೈಸೂರು ಮೇಟಗಳ್ಳಿ ಕೋವಿಡ್ ಕೇಂದ್ರದ ಸ್ಟಾಫ್ ನರ್ಸ್ ಚೇತನ್ ಕುಮಾರ್(35) ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಂದಾಯನಗರ ಬಡಾವಣೆಯಲ್ಲಿ ಇಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಕೋವಿಡ್‌ ಅನುಮಾನ : ಸಾರಿಗೆ ನೌಕರ ಆತ್ಮಹತ್ಯೆ ...

ಗುತ್ತಿಗೆ ಆಧಾರದ ಮೇಲೆ ಕೋವಿಡ್ ಕೇಂದ್ರದಲ್ಲಿ  ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಚೇತನ್ ಕುಮಾರ್, ಜೆ.ಎಸ್.ಎಸ್. ಕಾನೂನು ಕಾಲೇಜಿನಲ್ಲಿ ಇಂಗ್ಲಿಷ್  ಉಪನ್ಯಾಸಕಿಯಾಗಿರುವ ಸೌಮ್ಯಾ  ಎಂಬವರನ್ನ ಪ್ರೀತಿಸಿ  ವಿವಾಹವಾಗಿದ್ದರು. ಮೈಸೂರಿನ ಕಂದಾಯನಗರ ಬಡಾವಣೆಯಲ್ಲಿ ದಂಪತಿ ವಾಸವಾಗಿದ್ದರು. 

ಚೇತನ್ ಕುಮಾರ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಈ ಸಂಬಂಧ  ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!