ಕೇರಳದಲ್ಲಿ ಕೊರೋನಾ ಭಾರಿ ಏರಿಕೆ : ಕರ್ನಾಟದಲ್ಲಿ ಹೈ ಅಲರ್ಟ್

By Suvarna News  |  First Published Jul 30, 2021, 12:04 PM IST
  • ಕೇರಳದಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ
  • ಈ ನಿಟ್ಟನಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ
  • ಕೊಡಗು-ಕೇರಳ-ಮಂಗಳೂರು ಗಡಿಯಲ್ಲಿ ಹೆಚ್ಚಿನ ಅಲರ್ಟ್ 

ಕೊಡಗು (ಜು.30): ಕೇರಳದಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ದಿನದಿನವೂ ಕೇರಳದಲ್ಲಿ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲೇ ಸಾಗುತ್ತಿದೆ. ಈ ನಿಟ್ಟನಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೊಡಗು-ಕೇರಳ-ಮಂಗಳೂರು ಗಡಿಯಲ್ಲಿ ಹೆಚ್ಚಿನ ಅಲರ್ಟ್ ಮಾಡಲಾಗಿದೆ. 

ಕೇರಳ ಹಾಗೂ ಕರ್ನಾಟಕ ಗಡ ಪ್ರದೇಶದ ಮಡಿಕೇರಿ ತಾಲೂಕಿನ ಕರಿಕೆ ಚೆಕ್‌ಪೋಸ್ಟ್‌ಗೆ ಇಂದು ಕೊಡಗು ಡಿಸಿ ಚಾರುಲತಾ ಸೋಮಲ್ ಭೇಟಿ ನೀಡಿ ತಪಾಸಭೆ ನಡೆಸಿದ್ದಾರೆ.  ಕಟ್ಟುನಿಟ್ಟಿನ ತಪಾಸಣೆಗೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. 
 
ಆರ್‌ಟಿಪಿಸಿಆರ್ ನೆಗೆಟಿವ್ ಸರ್ಟಿಫಿಕೇಟ್ ಅಥವಾ ಎರಡು ಬಾರಿ ವ್ಯಾಕ್ಸಿನ್ ಆದವರಿಗೆ ಮಾತ್ರ ಕೊಡಗು ಎಂಟ್ರಿಗೆ ಅವಕಾಶ ನೀಡಬೇಕು. ಸದ್ಯ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣದಲ್ಲಿದ್ದು, ಕೇರಳದಲ್ಲಿ ಉಲ್ಬಣದಿಂದ ಕೊಡಗಿನಲ್ಲೂ ಆತಂಕ ಶುರುವಾಗಿದೆ. ಕೇರಳದಿಂದ ಕೊಡಗಿಗೆ ಹರಡದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ. 

Tap to resize

Latest Videos

undefined

ರಾಜ್ಯದಲ್ಲಿ ಕೊರೋನಾ 3ನೇ ಅಲೆ ಎಚ್ಚರಿಕೆ : ವಕ್ಕರಿಸಲಿದೆ ಮಾರಿ

ಮಂಗಳೂರು ಗಡಿಯಲ್ಲಿ ಕಟ್ಟೆಚ್ಚರ :  ಇನ್ನು ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಬೆನ್ನಲ್ಲೇ ಮಂಗಳೂರು ಗಡಿಯಲ್ಲಿ ಮತ್ತಷ್ಟು ಬಿಗಿ ಭದ್ರತೆ ಕೈಗೊಳ್ಳಲಾಗಿದೆ.  ಮಂಗಳೂರಿನ ಕರ್ನಾಟಕ-ಕೇರಳ ಗಡಿ ತಲಪಾಡಿಯಲ್ಲಿ ಟೈಟ್ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ. 

ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ಮೂಲಕ ತಪಾಸಣೆ ಚುರುಕು ಮಾಡಲಾಗಿದ್ದು, ಕೇರಳದಿಂದ ಬರುವ ಕಾರು, ಬೈಕ್, ಬಸ್ಸು ಸೇರಿ ಎಲ್ಲಾ ರೀತಿಯ ವಾಹನಗಳ ತಪಾಸಣೆ ಮಾಡಲಾಗುತ್ತಿದೆ.  

ಒಂದು ಡೋಸ್ ಕೋವಿಡ್ ಲಸಿಕೆ ಅಥವಾ ನೆಗೆಟಿವ್ ರಿಪೋರ್ಟ್ ಇದ್ದವರಿಗಷ್ಟೇ ಎಂಟ್ರಿ ಕೊಡಲಾಗುತ್ತಿದೆ. ಯಾವುದೂ ಇಲ್ಲದೇ ಬರುವ ಪ್ರಯಾಣಿಕರಿಗೆ ಗಡಿಯಲ್ಲೇ ಆರ್ ಟಿಪಿಸಿಆರ್ ಟೆಸ್ಟ್ ನಡೆಸಲಾಗುತ್ತದೆ.  ಆರೋಗ್ಯ ಇಲಾಖೆಯ ನಾಲ್ವರು ಸಿಬ್ಬಂದಿ ನೇಮಿಸಿದ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇರಳದಿಂದ ಬರುವ ಬಸ್ ಪ್ರಯಾಣಿಕರನ್ನು ಗಡಿಯಲ್ಲಿ ಇಳಿಸಿ ತಪಾಸಣೆ ಮಾಡುವಂತೆ ಸೂಚಿಸಿದೆ. 

ಸಮರ್ಪಕ ವರದಿ ಇದ್ದರಷ್ಟೇ ಮತ್ತೆ ಮಂಗಳೂರು ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತಿದೆ. ಕೇರಳದಲ್ಲಿ ನಿನ್ನೆಯೂ 22 ಸಾವಿರ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಕಾಸರಗೋಡಿನಲ್ಲಿ 650ಕ್ಕೂ ಅಧಿಕ ಕೇಸ್ ವರದಿಯಾಗಿವೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

click me!