ನೆಂಟರು ಬಂದರೆ ಮನೆಮಂದಿಯ ಕೋವಿಡ್‌ ಪರೀಕ್ಷೆ!

By Kannadaprabha NewsFirst Published Aug 3, 2021, 7:39 AM IST
Highlights
  • ದ.ಕ. ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ
  • ಕಾಸರಗೋಡಿನಿಂದ ಪುತ್ತೂರಿನ ನೆಂಟರ ಮನೆಗೆ ಯಾರಾದರೂ ಭೇಟಿ ನೀಡಿದ್ದಲ್ಲಿ ಆ ಮನೆಯ ಸದಸ್ಯರೆಲ್ಲರ ಕೊರೋನಾ ಪರೀಕ್ಷೆ

ಪುತ್ತೂರು (ಜು.03):  ದ.ಕ. ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಪ್ರದೇಶ ಕೇರಳದ ಕಾಸರಗೋಡಿನಿಂದ ಪುತ್ತೂರಿನ ನೆಂಟರ ಮನೆಗೆ ಯಾರಾದರೂ ಭೇಟಿ ನೀಡಿದ್ದಲ್ಲಿ ಆ ಮನೆಯ ಸದಸ್ಯರೆಲ್ಲರನ್ನೂ ಕೊರೋನಾ ಪರೀಕ್ಷೆಗೆ ಒಳಪಡಿಸುವ ಚಿಂತನೆಗೆ ಅಧಿಕಾರಿಗಳು ಮುಂದಾಗಿದ್ದಾರೆ.

ಕಾಸರಗೋಡು ತಾಲೂಕಿನ ಅಡೂರು, ಮುಳ್ಳೇರಿಯ, ಬದಿಯಡ್ಕ, ಪೆರ್ಲ, ನೆಟ್ಟಣಿಗೆ, ಪಡ್ರೆ ಮತ್ತಿತರ ಕಡೆಗಳಿಂದ ಪುತ್ತೂರಿಗೆ ನಿರಂತರ ಜನ ಸಂಪರ್ಕವಿದೆ. ಬಸ್‌ ಸೌಲಭ್ಯ ಇಲ್ಲದಿದ್ದರೂ ಖಾಸಗಿ ವಾಹನಗಳಲ್ಲಿ ಅಲ್ಲಿನ ಜನರು ಪುತ್ತೂರು ತಾಲೂಕಿನ ವಿವಿಧ ಭಾಗಗಳಿಗೆ ಭೇಟಿ ಕೊಡುತ್ತಿದ್ದಾರೆ. ಕಾಸರಗೋಡು ತಾಲೂಕಿನಿಂದ ಪ್ರತಿನಿತ್ಯ ಪುತ್ತೂರು ತಾಲೂಕನ್ನು ಸಂಪರ್ಕಿಸುವ ಕೇರಳ ನೋಂದಣಿಯ ವಾಹನಗಳ ಪಟ್ಟಿಇಲಾಖೆಯ ಬಳಿ ಇದೆ. ಕಾಸರಗೋಡಿನ ಸಂಪರ್ಕವನ್ನು ಕಡಿತಗೊಳಿಸದಿದ್ದರೆ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲೂ ಕೊರೋನಾ ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆಗಳಿವೆ.

ಪಂಚಾಯಿತಿ ಅಧಿಕಾರಿ, ಸಿಬ್ಬಂದಿ ಕೂಡ ಕೊರೋನಾ ವಾರಿಯ​ರ್ಸ್

ಕಾಸರಗೋಡು ತಾಲೂಕಿನಲ್ಲಿ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿರುವುದರ ನೇರ ಪರಿಣಾಮ ಪುತ್ತೂರು ಮತ್ತು ಕಡಬ ತಾಲೂಕುಗಳ ಮೇಲೆ ಬಿದ್ದಿದೆ. ಆದ ಕಾರಣ ಕಾಸರಗೋಡಿನಿಂದ ಪುತ್ತೂರು ತಾಲೂಕಿಗೆ ಪ್ರವೇಶಿಸುವವರ ನೆಗೆಟಿವ್‌ ವರದಿ ಕಡ್ಡಾಯದ ಜೊತೆಗೆ ಇಲ್ಲಿ ಅವರು ಭೇಟಿ ಮಾಡಿದ ಮನೆಯವರನ್ನು ಕೂಡಾ ಕೊರೋನಾ ತಪಾಸಣೆಗೆ ಒಳ ಪಡಿಸಲು ಚಿಂತನೆ ನಡೆಸಲಾಗಿದೆ.

-ರಮೇಶ್‌ ಬಾಬು, ಪುತ್ತೂರು ತಹಸೀಲ್ದಾರ್‌.

click me!