ದಕ್ಷಿಣ ಕನ್ನಡ ಸಂಪೂರ್ಣ ನಿಯಂತ್ರಣ ರೇಖೆಯಲ್ಲಿದೆ ಕೊರೋನಾ ಮಹಾಮಾರಿ

Kannadaprabha News   | Asianet News
Published : Oct 25, 2021, 02:27 PM IST
ದಕ್ಷಿಣ ಕನ್ನಡ ಸಂಪೂರ್ಣ ನಿಯಂತ್ರಣ ರೇಖೆಯಲ್ಲಿದೆ ಕೊರೋನಾ ಮಹಾಮಾರಿ

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ವಾರಗಳಿಂದ ಪ್ರತಿದಿನದ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಕೆ ಆಗಸ್ಟ್‌ನಲ್ಲಿ ಪಾಸಿಟಿವಿಟಿ ದರ ಶೇ.5ರಷ್ಟುಇತ್ತು. ಅ.24ರಂದು ಇದು ಶೇ.0.41ಕ್ಕೆ ಇಳಿದಿರುವುದು ಆಶಾದಾಯಕ

ಮಂಗಳೂರು (ಅ.25):  ದಕ್ಷಿಣ ಕನ್ನಡ (Dakshina kannada) ಜಿಲ್ಲೆಯಲ್ಲಿ ಕಳೆದೆರಡು ವಾರಗಳಿಂದ ಪ್ರತಿದಿನದ ಕೊರೋನಾ (Corona) ಪ್ರಕರಣಗಳ ಸಂಖ್ಯೆ 50ಕ್ಕಿಂತ ಕಡಿಮೆ ದಾಖಲಾಗುತ್ತಿದ್ದು, ಬಹುತೇಕರು ಚೇತರಿಸಿಕೊಂಡಿದ್ದಾರೆ. ಸೆಪ್ಟೆಂಬರ್‌ ಮೊದಲ ವಾರದಲ್ಲಿ 2,200 ಸಕ್ರಿಯ ಪ್ರಕರಣಗಳು ಇದ್ದದ್ದು, ಇದೀಗ 286ಕ್ಕೆ ಇಳಿದಿದೆ.

ಆಗಸ್ಟ್‌ನಲ್ಲಿ ಪಾಸಿಟಿವಿಟಿ ದರ (positivity Rate) ಶೇ.5ರಷ್ಟುಇತ್ತು. ಅ.24ರಂದು ಇದು ಶೇ.0.41ಕ್ಕೆ ಇಳಿದಿರುವುದು ಆಶಾದಾಯಕವಾಗಿದೆ. ಕೊರೋನಾ ಪ್ರಕರಣಗಳು ತೀರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ (School) ಭೌತಿಕ ತರಗತಿಗಳು ಅ.25ರಿಂದ ಪುನಾರಂಭವಾಗಲಿವೆ.

ಸದ್ಯಕ್ಕೆ ಭಾರತದಲ್ಲಿ ಬೂಸ್ಟರ್ ಡೋಸ್ ಇಲ್ಲ

ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 7-8 ಸಾವಿರ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ. ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳನ್ನು ಪತ್ತೆ ಹಚ್ಚಿ ಪರೀಕ್ಷಿಸಲಾಗುತ್ತಿದೆ.

ಶೇ.30ರಷ್ಟುಮಾತ್ರ ಆಸ್ಪತ್ರೆಯಲ್ಲಿ: ಆರೋಗ್ಯ ಇಲಾಖೆಯ (Health Department) ಅಂಕಿಅಂಶಗಳ ಪ್ರಕಾರ ಪ್ರಸ್ತುತ ಕೇವಲ ಶೇ.30ರಷ್ಟುಮಂದಿ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ (Treatment) ಪಡೆಯುತ್ತಿದ್ದರೆ, ಉಳಿದ ಶೇ.70ರಷ್ಟುಮಂದಿ ಮನೆಗಳಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ. ಹಲವು ದಿನಗಳ ಹಿಂದೆ ಪ್ರತಿದಿನದ ಸಾವಿನ ಸಂಖ್ಯೆ ಹೆಚ್ಚಿತ್ತು. ಅದೂ ಕೂಡ ಇದೀಗ ನಿಯಂತ್ರಣಕ್ಕೆ ಬಂದಿದೆ.

16326 ಕೇಸ್‌, 666 ಸಾವು: ಸಕ್ರಿಯ ಕೇಸ್‌ 1.73 ಲಕ್ಷಕ್ಕೆ ಇಳಿಕೆ

ಶೇ.98 ಚೇತರಿಕೆ: ಜಿಲ್ಲೆಯಲ್ಲಿ ಚೇತರಿಕೆ ಪ್ರಮಾಣ ಶೇ.98ಕ್ಕಿಂತ ಹೆಚ್ಚಿದೆ. ಇದೀಗ ಸೋಂಕು ವರದಿಯಾಗುತ್ತಿರುವ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ಪರೀಕ್ಷೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕೋವಿಡ್‌-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶಾಲೆಗಳು ಮತ್ತು ಕಾಲೇಜುಗಳಿಗೆ (College) ನಿರ್ದೇಶನ ನೀಡಲಾಗಿದೆ.

15.07 ಲಕ್ಷ ಮಂದಿಗೆ ಪ್ರಥಮ ಡೋಸ್‌

ಜಿಲ್ಲೆಯಲ್ಲಿ 18 ಲಕ್ಷ ಫಲಾನುಭವಿಗಳಿಗೆ ಲಸಿಕೆ ಹಾಕುವ ಗುರಿ ಹಾಕಿಕೊಳ್ಳಲಾಗಿದ್ದು, ಅ. 22ಕ್ಕೆ ಅನ್ವಯಿಸುವಂತೆ ದಕ್ಷಿಣ ಕನ್ನಡದಲ್ಲಿ ಒಟ್ಟು 15,07,136 ಫಲಾನುಭವಿಗಳಿಗೆ ಮೊದಲ ಡೋಸ್‌ ಲಸಿಕೆ ನೀಡಲಾಗಿದ್ದು, 8,05,349 ಮಂದಿಗೆ ಎರಡು ಡೋಸ್‌ ಲಸಿಕೆಗಳನ್ನು ಹಾಕಲಾಗಿದೆ. ದಸರಾ ಆಚರಣೆಯ ಸಮಯದಲ್ಲಿ ಕುದ್ರೋಳಿಯ ಗೋಕರ್ಣನಾಥ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಲಸಿಕೆ ಕೇಂದ್ರಗಳನ್ನು ಸ್ಥಾಪಿಸಿದ್ದು, ಸಾರ್ವಜನಿಕರು ಪ್ರಯೋಜನ ಪಡೆದುಕೊಂಡಿದ್ದಾರೆ.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ