
ಮೈಸೂರು (ಮಾ.15): ಕರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಮೈಸೂರು ಜಿಲ್ಲಾಡಳಿತ ಅಲರ್ಟ್ ಆಗಿದೆ.
ಮೈಸೂರು ನಗರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಮಾ.16ರಿಂದಲೇ ಜನ ಸೇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಮೈಸೂರು ಜಿಲ್ಲಾಧಿಕಾರಿ
ರೋಹಿಣಿ ಸಿಂಧೂರಿ ಮಾಹಿತಿ ನೀಡಿದ್ದಾರೆ.
ಮೈಸೂರಿನಲ್ಲೂ ಕರೊನಾ ಕೇಸ್ ಹೆಚ್ಚಾಗುತ್ತಿವೆ. ಮೊದಲು 10 ಸಾವಿರದವರೆಗೂ ಟೆಸ್ಟಿಂಗ್ ನಡೆಯುತ್ತಿತ್ತು. ಈಗ 3- 4 ಸಾವಿರ ಟೆಸ್ಟ್ ಆಗುತ್ತಿದೆ. ಹಂತ ಹಂತವಾಗಿ ಟೆಸ್ಟಿಂಗ್ ಹೆಚ್ಚಿಗೆ ಮಾಡಲಾಗುವುದು. ಸರ್ಕಾರ ಹೊಸದಾಗಿ ಹೊರಡಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತೇವೆ. ಮದುವೆ, ಸಾವು, ಸಭೆ ಸಮಾರಂಭಕ್ಕೂ ಜನರ ಮಿತಿ ಜಾರಿ ಆಗಲಿದೆ ಎಂದು ಡೀಸಿ ಹೆಳಿದರು.
ಹೊರ ರಾಜ್ಯದವರಿಂದ ಕೊರೋನಾ ಹೆಚ್ಚಳ: ಸಚಿವ ಆನಂದ್ ಸಿಂಗ್
ಜಾತ್ರೆಗೂ ಕರಿನೆರಳು : ಮಾರ್ಚ್ 26ರಂದು ನಂಜನಗೂಡು ರಥೋತ್ಸವ ನಡೆಯುತ್ತಿದ್ದು, ದೊಡ್ಡ ಜಾತ್ರೆ ಮೇಲೆ ಮತ್ತೆ ಕರೊನಾ ಕರಿನೆರಳು ಬೀಳುತ್ತಿದ್ದು, ಜಾತ್ರೆ ಉಂಟು, ಗುಂಪು ಸೇರುವಂತಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.
ಜಾತ್ರೆಗೆ ಈಗಾಗಲೇ ಅನುಮತಿ ನೀಡಲಾಗಿದೆ. ಶಿವರಾತ್ರಿ ದಿನ ನಾನೂ ನಂಜನಗೂಡಿಗೆ ಹೋಗಿದ್ದೆ. ಜನ ಕರೊನಾ ಇಲ್ಲವೇ ಇಲ್ಲ ಅನ್ನುವ ರೀತಿ ವರ್ತಿಸುತ್ತಿದ್ದಾರೆ. ಸರ್ಕಾರದ ಹೊಸ ಮಾರ್ಗಸೂಚಿ ಅನ್ವಯ 500 ಜನರಿಗಿಂತ ಹೆಚ್ಚು ಜನ ಸೇರಲು ಅವಕಾಶ ಇಲ್ಲ ಎಂದರು.
ಈ ನಿಯಮ ನಂಜನಗೂಡು ರಥೋತ್ಸವಕ್ಕೂ ಅನ್ವಯ ಆಗಲಿದೆ. ಜನ ಸೇರಿದಂತೆ ಕ್ರಮ ವಹಿಸುತ್ತೇವೆ. ಭಕ್ತರು ತಾವಾಗಿಯೇ ಅರ್ಥ ಮಾಡಿಕೊಂಡು ಜಾತ್ರೆಗೆ ಬರಬಾರದು.
ಡಿಸಿ ರೋಣಿಸಿ ಸಿಂಧೂರಿ ಮನವಿ ಮಾಡಿದರು.