ಇನ್ನೆರಡೇ ವರ್ಷದಲ್ಲಿ ಮಿಂಚಲಿದೆ ವಿಜಯಪುರ: ಯತ್ನಾಳ

Kannadaprabha News   | Asianet News
Published : Mar 15, 2021, 02:59 PM IST
ಇನ್ನೆರಡೇ ವರ್ಷದಲ್ಲಿ ಮಿಂಚಲಿದೆ ವಿಜಯಪುರ: ಯತ್ನಾಳ

ಸಾರಾಂಶ

ವಿಜಯಪುರ ನಗರದಲ್ಲಿ ಎಲ್ಲ ಕಡೆ ಸಿ.ಸಿ ರಸ್ತೆ, ಡ್ರೈನೇಜ್‌ ಕಾಮಗಾರಿ, 24/7 ಕುಡಿಯುವ ನೀರಿನ ಕಾಮಗಾರಿ|  ನಗರದ ತುಂಬೆಲ್ಲ ಅಭಿವೃದ್ಧಿ ಕಾಮಗಾರಿಗಳಾಗುತ್ತಿದ್ದು ಇನ್ನೇನು ಎರಡೇ ವರ್ಷದಲ್ಲಿ ವಿಜಯಪುರ ನಗರವು ಮಾದರಿ ನಗರವಾಗಿ ನಿರ್ಮಾಣವಾಗಲಿದೆ: ಬಸನಗೌಡ ಪಾಟೀಲ ಯತ್ನಾಳ| 

ವಿಜಯಪುರ(ಮಾ.15): ವಿಜಯಪುರ ನಗರ ಇನ್ನೂ ಎರಡೇ ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿಯೇ ಮಾದರಿ ನಗರವಾಗಿ ಮಿಂಚಲಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಮರಾಠಿ ವಿದ್ಯಾಲಯದ ಶಾಲಾ ಕೊಠಡಿ ನಿರ್ಮಾಣ, ಪಿಡಿಜೆ ಹೈಸ್ಕೂಲ್‌ ಶಾಲಾ ಕೊಠಡಿ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ನಮ್ಮ ದೇಶದ ಆಸ್ತಿಯಾಗಿ ರೂಪಗೊಳ್ಳಬೇಕು. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರು ಸಹ ವಿದ್ಯಾರ್ಥಿಗಳನ್ನ ಈ ನಿಟ್ಟಿನಲ್ಲಿ ತಯಾರಿಸಬೇಕು ಎಂದು ಶಿಕ್ಷಕರಿಗೆ ಕರೆ ನೀಡಿದರು.
ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸುಸಜ್ಜಿತ ಶಾಲಾ ಕೋಠಡಿಗಳು, ಮೂಲಭೂತ ಸೌಕರ್ಯಗಳು ಅತ್ಯಂತ ಅವಶ್ಯವಾಗಿದೆ. ಆದ್ದರಿಂದ ಸುಸಜ್ಜಿತ ವರ್ಗಕೋಣೆ ನಿರ್ಮಾಣದ ಮೂಲಕ ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸಬೇಕಾದ ಕೆಲಸ ಮಾಡಲಾಗುತ್ತಿದೆ ಎಂದರು.

ಹೊಸ ಬಾಂಬ್ 'ಸಿಡಿ'ಸಿದ ಯತ್ನಾಳ್: ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ..!

ನಗರದಲ್ಲಿ ಎಲ್ಲ ಕಡೆ ಸಿ.ಸಿ ರಸ್ತೆ, ಡ್ರೈನೇಜ್‌ ಕಾಮಗಾರಿ, 24/7 ಕುಡಿಯುವ ನೀರಿನ ಕಾಮಗಾರಿ ಸೇರಿದಂತೆ ನಗರದ ತುಂಬೆಲ್ಲ ಅಭಿವೃದ್ಧಿ ಕಾಮಗಾರಿಗಳಾಗುತ್ತಿದ್ದು ಇನ್ನೇನು ಎರಡೇ ವರ್ಷದಲ್ಲಿ ವಿಜಯಪುರ ನಗರವು ಮಾದರಿ ನಗರವಾಗಿ ನಿರ್ಮಾಣವಾಗಲಿದೆ ಎಂದು ಹೇಳಿದರು.

ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಎಂ.ಕೆ.ಕುಲಕರ್ಣಿ ವಿಕ್ರಮ್‌ ಗಾಯಕವಾಡ, ಪುಟ್ಟು ಸಾವಳಗಿ, ಶ್ರೀನಿವಾಸ ಬೆಟಗೆರಿ, ರಾಘವೇಂದ್ರ ಚಿಕ್ಕಲಕಿ, ಕೃಷ್ಣಾ ಕುಲಕರ್ಣಿ, ಡಿ.ಕೆ.ಕುಲಕರ್ಣಿ, ವಿಶಾಲಾಕ್ಷಿ ಹಿರೇಮಠ, ರಾಮ ಅನಗಳ, ಶ್ರೀಪಾದ ಪಟವರ್ಧನ್‌, ಆನಂದ ಜಾಧವ್‌, ನಿಲೇಶ ಶಾಹಾ, ಡಾ.ಮಿಲಿಂದ ವಾಟವೆ, ಸಂಜಯ್‌ ಪಾಟೀಲ ಕನಮಡಿ, ಸಂತೋಷ ಪಾಟೀಲ, ಭೀಮು ಮಾಶ್ಯಾಳ, ಪಾರೀಶ ಶಿರಹಟ್ಟಿ, ಬಸವರಾಜ ಬಿರಾದಾರ, ರಾಜಶೇಖರ ಭಜಂತ್ರಿ, ಶರಣು ಕಾಕಂಡಕಿ, ನಾಗರಾಜ ಮುಳವಾಡ ಮುಂತಾದವರು ಇದ್ದರು.
 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC