ಒಂದೇ ಆಸ್ಪತ್ರೆಯಲ್ಲಿ ವೈದ್ಯರು ಸೇರಿ 17 ಮಂದಿಗೆ ಸೋಂಕು

Kannadaprabha News   | Asianet News
Published : May 02, 2021, 07:18 AM IST
ಒಂದೇ ಆಸ್ಪತ್ರೆಯಲ್ಲಿ ವೈದ್ಯರು ಸೇರಿ 17 ಮಂದಿಗೆ ಸೋಂಕು

ಸಾರಾಂಶ

ಒಂದೇ ಆಸ್ಪತ್ರೆಯ ವೈದ್ಯರು ಸೇರಿ 17 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಇದರಿಂದ ಆಸ್ಪತ್ರೆಗೆ ಬರಲು ಜನರು ಹೆದರುವಂತಾಗಿದೆ. 

ಬಂಗಾರಪೇಟೆ (ಮೇ.02): ಒಂದೇ ಆಸ್ಪತ್ರೆಯ ವೈದ್ಯರು, ನರ್ಸ್‌ ಸೇರಿದಂತೆ 17 ಮಂದಿಗೆ ಸೋಂಕು ದೃಢವಾಗಿರುವುದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕಂಡುಬಂದಿದೆ. ಹೀಗಾಗಿ ಇತರೆ ಸಿಬ್ಬಂದಿ ಕೆಲಸ ಮಾಡಲು ಹಿಂಜರಿಯುತ್ತಿದ್ದು, ಇದರಿಂದ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. 

ಮೂವರು ವೈದ್ಯರು, ಮೂರು ನರ್ಸ್‌, 6 ಸಿಬ್ಬಂದಿ, 5 ಮಂದಿ ಡಿ ಗ್ರೂಪ್‌ ನೌಕರರು ಸೇರಿದಂತೆ ಒಟ್ಟು 17 ಮಂದಿಗೆ ಸೋಂಕು ದೃಢಪಟ್ಟಿದೆ. ಎಲ್ಲರೂ ಈಗ ಹೋಂ ಕ್ವಾರಂಟೈನ್‌ ಆಗಿದ್ದಾರೆ.

ಒಂದೇ ತಿಂಗಳಲ್ಲಿ 3 ಲಕ್ಷ ಮಂದಿಗೆ ಸೋಂಕು: ಬೆಚ್ಚಿ ಬಿದ್ದ ಬೆಂಗ್ಳೂರು..!

 ಇವರೆಲ್ಲರೂ ಡೋವಿಡ್‌ ಲಸಿಕೆ ಪಡೆದಿದ್ದರು ಎಂದು ತಿಳಿದುಬಂದಿದೆ. ಇದೀಗ ಆಸ್ಪತ್ರೆಯಲ್ಲಿ ಲಭ್ಯವಿರುವ ವೈದ್ಯರು, ಸಿಬ್ಬಂದಿ ಸಾರ್ವಜನಿಕರ ಸೇವೆಯಲ್ಲಿ ತೊಡಗಿದ್ದಾರೆ. ಕೊರೋನಾ ನಿಯಂತ್ರಿಸುವ ಆಸ್ಪತ್ರೆಯಲ್ಲೇ ವೈದ್ಯರಿಗೆ ಸೋಂಕು ಹರಡಿರುವುದರಿಂದ ಇತರೆ ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆ ಮತ್ತು ತಪಾಸಣೆಗೆ ಬರಲು ಹೆದರುವಂತಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

ಉತ್ತರಕನ್ನಡ: ನೀರು ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಎಗರಿಸಿ ಖದೀಮರು ಎಸ್ಕೇಪ್!
ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!