ಒಂದೇ ಗ್ರಾಮದ 15 ಜನ ಸಾವು : ಹೆಚ್ಚಿದ ಆತಂಕ

By Kannadaprabha NewsFirst Published May 2, 2021, 7:11 AM IST
Highlights

ಒಂದೇ ಗ್ರಾಮದಲ್ಲಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು ತೀವ್ರ ಆತಂಕಕ್ಕೆ ಎಡೆ ಮಾಡಿದೆ. ಅಲ್ಲದೇ ಗ್ರಾಮಸ್ಥರು ಕೋವಿಡ್ ಪರೀಕ್ಷೆಗೆ ನಿರಾಕರಿಸುತ್ತಿದ್ದಾರೆ. 

ಕಲಬುರಗಿ (ಮೇ.02): ಸೇಡಂ ತಾಲೂಕಿನ ಹೂಡಾ (ಬಿ) (ಭೀಮನಗರ) ಗ್ರಾಮದಲ್ಲಿ ಏಪ್ರಿಲ್‌ ಒಂದೇ ತಿಂಗಳಲ್ಲೇ 15ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಗ್ರಾಮಸ್ಥರು ಕೋವಿಡ್‌ ಶಂಕೆ ವ್ಯಕ್ತಪಡಿಸಿದ್ದಾರೆ. 

ಅಕ್ಕಪಕ್ಕದ ಗ್ರಾಮದವರಿಗೂ ಸಹ ಈ ವಿಷಯ ಗೊತ್ತಾಗಿದ್ದು, ಹೂಡಾ (ಬಿ) ಗ್ರಾಮಕ್ಕೆ ತೆರಳಲು ಹಿಂಜರಿಯುತ್ತಿದ್ದಾರೆ. 

ಮಳಖೇಡದ ರಾಜಶ್ರೀ ಸಿಮೆಂಟ್‌ ಕಾರ್ಖಾನೆಗೆ ಹೊಂದಿಕೊಂಡಿರುವ ಈ ಗ್ರಾಮ 3 ಸಾವಿರಕ್ಕೂ ಹೆಚ್ಚು ಜನಸಂಖ್ಯೆಹೊಂದಿದೆ. ಇಲ್ಲಿನ ಜನರು ಉದ್ಯೋಗಕ್ಕೆ ಸಿಮೆಂಟ್‌ ಕಾರ್ಖಾನೆ ಅವಲಂಬಿಸಿದ್ದಾರೆ. 

ಕೊರೋನಾ ಕರ್ಫ್ಯೂ ನಡುವೆ ಸುಮ್ಮನೆ ತಿರುಗಾಟ ಯಾಕೆ? ಎಚ್ಚರ ಇರಲಿ ಜೋಕೆ! ..

ಗ್ರಾಮದಲ್ಲಿ ಬೆರಳೆಣಿಕೆಯಷ್ಟುಜನ ಮಾತ್ರ ಕೊರೋನಾ ಟೆಸ್ಟ್‌ ಮಾಡಿಸಿಕೊಂಡಿದ್ದಾರೆ. ಕೆಲವರು ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ, ಬಹುತೇಕ ಜನರು ಕೊರೋನಾ ಗಂಟಲು ದ್ರವದ ಪರೀಕ್ಷೆಯಿಂದ ದೂರವುಳಿದಿದ್ದಾರೆ. ಲಸಿಕೆ ಕೂಡ ಹಾಕಿಸಿಕೊಂಡಿಲ್ಲ. ಸಾವಿನ ಸರಣಿಗೆ ಕೋವಿಡ್‌ ಕಾರಣವಾಗಿರಬಹುದು ಎಂದು ಬಹುತೇಕ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

click me!