ಒಂದೇ ತಿಂಗಳಲ್ಲಿ 3 ಲಕ್ಷ ಮಂದಿಗೆ ಸೋಂಕು: ಬೆಚ್ಚಿ ಬಿದ್ದ ಬೆಂಗ್ಳೂರು..!

By Kannadaprabha News  |  First Published May 2, 2021, 7:08 AM IST

ಕಳೆದ ಏಪ್ರಿಲ್‌ನಲ್ಲಿ ಕೊರೋನಾ ರುದ್ರನರ್ತನ| 1756 ಮಂದಿ ಸೋಂಕಿನಿಂದ ಸಾವು| ಸೋಂಕಿತರ ಸಂಖ್ಯೆ 7.56 ಲಕ್ಷಕ್ಕೆ ಏರಿಕೆ| 22 ಲಕ್ಷಕ್ಕೂ ಅಧಿಕ ಕೋವಿಡ್‌ ಪರೀಕ್ಷೆ| ಮೇ ತಿಂಗಳಲ್ಲಿ ಎರಡನೇ ಅಲೆಯು ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ| 


ಸಂಪತ್‌ ತರೀಕೆರೆ

ಬೆಂಗಳೂರು(ಮೇ.02): ಕೋವಿಡ್‌-19 ಎರಡನೇ ಅಲೆಗೆ ರಾಜ್ಯದ ರಾಜಧಾನಿ ತತ್ತರಿಸಿದ್ದು, ಕೇವಲ ಒಂದು ತಿಂಗಳಲ್ಲಿ ಬರೋಬ್ಬರಿ 3,21,913 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಹಾಗೆಯೇ ಬರೋಬ್ಬರಿ 1,756 ಸೋಂಕಿತರು ಮೃತಪಟ್ಟಿದ್ದು, ಇಡೀ ನಗರವನ್ನೇ ಆತಂಕಕ್ಕೆ ದೂಡಿದೆ.

Tap to resize

Latest Videos

undefined

ಏಪ್ರಿಲ್‌ ಆರಂಭದಲ್ಲಿ ಎರಡ್ಮೂರು ಸಾವಿರ ದಾಖಲಾಗುತ್ತಿದ್ದ ಹೊಸ ಪ್ರಕರಣಗಳು ಸಂಖ್ಯೆ ಈಗ 20 ಸಾವಿರಕ್ಕೂ ಅಧಿಕಗೊಂಡಿದೆ. ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಆರೋಗ್ಯ ಇಲಾಖೆ ಮಾಹಿತಿಯಂತೆ ಮಾಚ್‌ರ್‍ ಅಂತ್ಯಕ್ಕೆ ಒಟ್ಟು ಸೋಂಕಿತರ ಸಂಖ್ಯೆ 4,34,827 ಇದ್ದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 19,613 ಇತ್ತು. ಏಪ್ರಿಲ್‌ ಅಂತ್ಯಕ್ಕೆ ಒಟ್ಟು ಸೋಂಕಿತರ ಸಂಖ್ಯೆ 7,56,740ಕ್ಕೆ ಏರಿಕೆಯಾಗಿದ್ದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 2,59,058ಕ್ಕೆ ಹೆಚ್ಚಳವಾಗಿದೆ.

"

ಮಾರ್ಚ್‌ ತಿಂಗಳ ಅಂತ್ಯಕ್ಕೆ ಒಟ್ಟು ಬಿಡುಗಡೆಯಾದವರ ಸಂಖ್ಯೆ 4,10,594 ಇದ್ದರೆ ಏಪ್ರಿಲ್‌ ಅಂತ್ಯಕ್ಕೆ 4,91,306ಕ್ಕೆ ತಲುಪಿದೆ. ಅಂದರೆ ಏಪ್ರಿಲ್‌ ತಿಂಗಳಲ್ಲಿ 80,712 ಮಂದಿ ಮಾತ್ರ ಕೋವಿಡ್‌ನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಆರೋಗ್ಯ ಇಲಾಖೆ ಮಾಹಿತಿಯಂತೆ ಮೇ ತಿಂಗಳಲ್ಲಿ ಎರಡನೇ ಅಲೆಯು ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ರಾಜ್ಯದಲ್ಲಿ ಮೇ 10ರವರೆಗೆ ಜನತಾ ಕಫ್ರ್ಯೂ ಜಾರಿಗೊಳಿಸಿದರೂ ಕೂಡ ಸೋಂಕು ಹರಡುವುದು ಕಡಿಮೆಯಾಗುತ್ತಿಲ್ಲ. ಇದಕ್ಕೆ ಜನರ ನಿರ್ಲಕ್ಷ್ಯ ಕಾರಣ. ಜೊತೆಗೆ ಸೋಂಕಿತರ ನಿರ್ವಹಣೆಯಲ್ಲೂ ವಿಫಲವಾಗುತ್ತಿರುವುದೇ ಸೋಂಕು ಉಲ್ಬಣಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕೊರೋನಾ ಕರ್ಫ್ಯೂ ನಡುವೆ ಸುಮ್ಮನೆ ತಿರುಗಾಟ ಯಾಕೆ? ಎಚ್ಚರ ಇರಲಿ ಜೋಕೆ!

22 ಲಕ್ಷಕ್ಕೂ ಅಧಿಕ ಕೋವಿಡ್‌ ಪರೀಕ್ಷೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕು ಹೆಚ್ಚಿದಂತೆ ಕೋವಿಡ್‌-19 ಪರೀಕ್ಷೆಯನ್ನು ಹೆಚ್ಚಿಸಲಾಗಿದೆ. ಏ.2ರಿಂದ 8ರ ವರೆಗೆ 4,47,068 (ಶೇ.6), ಏ.9ರಿಂದ 15ರವರೆಗೆ 5,15,516(ಶೇ.9.54), ಏ.16ರಿಂದ 22ರವರೆಗೆ 6,94,694(ಶೇ.12.45), ಏ.23ರಿಂದ 30ರ ವರೆಗೆ 5,82,500(ಶೇ.23.33) ಮಂದಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿದೆ. ಹೀಗೆ ಒಟ್ಟು 22,39,778 ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ಬಿಬಿಎಂಪಿ ವರದಿ ತಿಳಿಸಿದೆ.

ಮೃತಪಟ್ಟವರಲ್ಲಿ ಪುರುಷರೇ ಹೆಚ್ಚು

ಬೆಂಗಳೂರಿನಲ್ಲಿ ಕೋವಿಡ್‌ ಸೋಂಕಿಗೆ ಮೃತಪಟ್ಟವರ ಸಂಖ್ಯೆ 6378. ಅವರಲ್ಲಿ ಸೋಂಕಿನಿಂದ ಮೃತಪಟ್ಟವರಲ್ಲಿ ಪುರುಷರೇ ಹೆಚ್ಚು. 4241 ಪುರುಷರು ಮತ್ತು 2137 ಮಹಿಳೆಯರು ಮೃತಪಟ್ಟಿದ್ದಾರೆ. ಕೋವಿಡ್‌ ಆರಂಭದಿಂದ ಇಲ್ಲಿಯವರೆಗೆ ಸಾವಿಗೀಡಾದ ಮಹಿಳೆ ಮತ್ತು ಪುರುಷರು ಅಂಕಿ-ಸಂಖ್ಯೆ ಇಂತಿದೆ.

ವಯಸ್ಸು ಪುರುಷರು ಮಹಿಳೆಯರು

0-9 10 06
10-19 15 05
20-29 82 42
30-39 214 109
40-49 505 222
50-59 835 486
60-69 1102 601
70 ಮೇಲ್ಪಟ್ಟು 1478 666

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!