ಮದುವೆಯ ಮರುದಿನವೇ ಮದುಮಗನ ಬಲಿಪಡೆದ ಮಹಾಮಾರಿ!

Kannadaprabha News   | Asianet News
Published : May 02, 2021, 07:37 AM IST
ಮದುವೆಯ ಮರುದಿನವೇ  ಮದುಮಗನ  ಬಲಿಪಡೆದ ಮಹಾಮಾರಿ!

ಸಾರಾಂಶ

ಮದುವೆಯಾದ ಮರುದಿನವೇ ಮದುಮಗ ಕೋವಿಡ್‌ಗೆ ಬಲಿಯಾದ ದುರ್ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ. ಉಸಿರಾಟದ ಸಮಸ್ಯೆಯಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲು ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. 

ಹೂವಿನಹಡಗಲಿ (ಮೇ.02): ಮದುವೆಯಾದ ಮರುದಿನವೇ ಮದುಮಗ ಕೋವಿಡ್‌ಗೆ ಬಲಿಯಾಗಿರುವ ಘಟನೆ ವಿಜಯನಗರ ಜಿಲ್ಲೆ ಹೂವಿನಹಡಗಲಿ ಪಟ್ಟಣದ ರಾಮಸ್ವಾಮಿ ಪ್ಲಾಟ್‌ (ಕಾಲನಿ)ನಲ್ಲಿ ಸಂಭವಿಸಿದೆ.

ಬಸವರಾಜ್‌ ಭಜಂತ್ರಿ(31) ಮೃತಪಟ್ಟವರು. ಗುರುವಾರ ಇವರ ವಿವಾಹವಾಗಿದ್ದು ಮರುದಿನ ಶುಕ್ರವಾರ ಉಸಿರಾಟದ ಸಮಸ್ಯೆ ಕಂಡು ಬಂದಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲು ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಬಳಿಕ ಕೊರೋನಾ ಪರೀಕ್ಷೆ ಮಾಡಲಾಗಿದ್ದು, ಪಾಸಿಟಿವ್‌ ಇರುವುದು ದೃಢಪಟ್ಟಿದೆ. 

ಒಂದೇ ಗ್ರಾಮದ 15 ಜನ ಸಾವು : ಹೆಚ್ಚಿದ ಆತಂಕ ...

ಬೆಂಗಳೂರಿನ ಖಾಸಗಿ ಕಂಪನಿಯ ನೌಕರನಾಗಿದ್ದ ಬಸವರಾಜ್‌ ಮದುವೆ ಹಿನ್ನೆಲೆಯಲ್ಲಿ ರಜೆ ಪಡೆದು ಹಡಗಲಿಗೆ ಬಂದಿದ್ದರು. ಮದುವೆಗೆ ಆಗಮಿಸಿದ್ದವರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಯಾವುದೇ ಪ್ರಕರಣಗಳು ಇನ್ನು ಪತ್ತೆಯಾಗಿಲ್ಲ. ಮದುವೆ ಸಂಭ್ರಮದಲ್ಲಿದ್ದ ಬಸವರಾಜ್‌ ಕುಟುಂಬದಲ್ಲೀಗ ಸೂತಕ ಆವರಿಸಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!