ಕೋವಿಡ್‌ ಸೋಂಕಿತ ಪತಿ, ಪತ್ನಿ ಒಂದೇ ದಿನ ಸಾವು

Kannadaprabha News   | Asianet News
Published : May 02, 2021, 07:26 AM IST
ಕೋವಿಡ್‌ ಸೋಂಕಿತ ಪತಿ, ಪತ್ನಿ ಒಂದೇ ದಿನ ಸಾವು

ಸಾರಾಂಶ

ಪತಿ ಹಾಗೂ ಪತ್ನಿ ಇಬ್ಬರೂ ಒಂದೇ ದಿನ ಮೃತಪಟ್ಟಿದ್ದಾರೆ. ಕೊರೋನಾದಿಂದ ಗುಣಮುಖರಾಗಿ ಮನೆಗೆ ಬಂದಿದ್ದ ಪತಿ ಸಾವಿಗೀಡಾದ ಗಂಟೆಯಲ್ಲೇ ಪತ್ನಿಯೂ ಮೃತಪಟ್ಟಿದ್ದಾರೆ. 

ಬಳ್ಳಾರಿ (ಮೇ.02): ಕೊರೋನಾ ವೈರಸ್‌ ಸೋಂಕಿತ ಪತಿ-ಪತ್ನಿ ಒಂದೇ ದಿನ ಸಾವಿಗೀಡಾದ ಘಟನೆ ಬಳ್ಳಾರಿ ತಾಲೂಕಿನ ಚರಕುಂಟೆ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.

 ಗ್ರಾಮದ ಸಣ್ಣ ಮಲ್ಲಪ್ಪ (65) ಹಾಗೂ ಪತ್ನಿ ಈರಮ್ಮಳಿಗೆ (60) ಸೋಂಕಿನಿಂದ ಮೃತಪಟ್ಟವರು. ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಗುಣಮುಖರಾಗಿ ಮೂರು ದಿನಗಳ ಹಿಂದೆ ಮನೆಗೆ ಬಂದಿದ್ದರು. 

ಕೊರೋನಾ ಅಟ್ಟಹಾಸ: ಆಕ್ಸಿಜನ್‌ ಕೊರತೆ ನೀಗಿಸಲು ಮುಂದಾದ JSW ...

ಇದಕ್ಕಿದ್ದಂತೆಯೇ ಸಣ್ಣ ಮಲ್ಲಪ್ಪ ಅವರಿಗೆ ಗಂಟಲು ನೋವು ಕಾಣಿಸಿಕೊಂಡಿದೆ. ಸೋಂಕು ಉಲ್ಬಣಗೊಂಡು ಶನಿವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಪತಿಯ ಸಾವಿನಿಂದ ಖಿನ್ನತೆಗೆ ಒಳಗಾದ ಈರಮ್ಮ ಕೆಲ ಗಂಟೆಗಳಲ್ಲಿಯೇ ಸಾವಿಗೀಡಾಗಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!