* ಅನೆ ಸಾವಿಗೆ ಕಾರಣನಾಗಿದ್ದ ರೈತ ಗುರುಶಾಂತಯ್ಯ
* ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದ ಆನೆ
* ಬೇಲಿಗೆ ವಿದ್ಯುತ್ ಸಂಪರ್ಕ ನೀಡಿರುವುದಾಗಿ ತಪ್ಪಪ್ಪಿಕೊಂಡಿದ್ದ ರೈತ
ರಾಮನಗರ(ಸೆ.11): ಟೊಮ್ಯಾಟೋ ಬೆಳೆಗೆ ಹಾಕಿದ್ದ ತಂತಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ, ಸಲಗದ ಸಾವಿಗೆ ಕಾರಣನಾದ ನಿಗೆ ಚನ್ನಪಟ್ಟಣ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕಸಬಾ ಹೋಬಳಿ ಚಿಕ್ಕ ವಿಠಲೇನ ಹಳ್ಳಿ ಗ್ರಾಮದ ಗುರುಶಾಂತಯ್ಯ (42) ವರ್ಷ ಎಂಬುವರು ಶಿವರಾಜ್ ಎಂಬುವರ ಸ.ನಂ.229/1 ಒಂದು ಎಕರೆ ಜಮೀನಿನನ್ನು ಗುತ್ತಿಗೆಗೆ ಪಡೆದುಕೊಂಡು ಟೊಮ್ಯೋಟೊ ಬೆಳೆ ಬೆಳೆದಿದ್ದು ಆನೆಗಳು ಬೆಳೆ ನಾಶ ಮಾಡುತ್ತವೆ ಎನ್ನುವ ಕಾರಣಕ್ಕೆ ಬೆಳೆಗೆ ಹಾಕಿದ್ದ ತಂತಿಗೆ ರಾತ್ರಿ ವೇಳೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದ್ದರು.
ಸೆಪ್ಟೆಂಬರ್ 10ರಂದು ಬೆಳಗಿನ ಜಾವ ಟೊಮೋಟೊ ಬೆಳೆಯನ್ನು ತಿನ್ನಲು ಬಂದ 45 ವರ್ಷದ ಗಂಡಾನೆ ಆ ತಂತಿಗೆ ಸೊಂಡಿಲು ಹಾಕಿ ವಿದ್ಯುತ್ ಸ್ಪರ್ಷಿಸಿ ಮೃತಪಟ್ಟಿತ್ತು. ಬೆಳೆ ರಕ್ಷಣೆಗಾಗಿ ತಂತಿಗೆ ವಿದ್ಯುತ್ ಸಂಪರ್ಕ ನೀಡಿದ ಕಾರಣ ಅನೆಗೆ ವಿದ್ಯುತ್ ಪ್ರವಹಿಸಿ ಆನೆಯು ಸಾವನ್ನಪ್ಪಿರುತ್ತದೆ.
ಚಿಕ್ಕಮಗಳೂರು: ವಿದ್ಯುತ್ ಬೇಲಿ ತಗುಲಿ ಕಾಡಾನೆ ಸಾವು
ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಶಂಕೆ ವ್ಯಕ್ತಪಡಿಸಿದ್ದರು. ನಂತರ ಮರಣೋತ್ತರ ಪರೀಕ್ಷೆ ನಡೆಸಿ ಸ್ಥಳದಲ್ಲಿಯೇ ಅಂತ್ಯಸಂಸ್ಕಾರ ಮಾಡಿದ್ದರು.
ಬೆಳೆ ರಕ್ಷಣೆಗಾಗಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿ ಆನೆ ಸಾವಿಗೆ ಕಾರಣರಾದ ಗುರುಶಾಂತಯ್ಯ ಎಂಬುವರ ಮೇಲೆ ಉಪ ಅರಣ್ಯಾಧಿಕಾರಿ ಶಿವಶಂಕರ್ ನೀಡಿದ ದೂರಿನ ಮೇರೆಗೆ FOC.NO. 13/2021-2022 ವನ್ಯಜೀವಿ ಸಂರಕ್ಷಣೆ ಕಾಯ್ದೆ 2.9.39.50.ಮತ್ತು 52 ./ 1972 ರಂತೆ ಪ್ರಕರಣ ದಾಖಲು ಮಾಡಿದ್ದರು.
ಆರೋಪಿ ಗುರುಶಾಂತಯ್ಯರವರು ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿರುವುದಾಗಿ ತಪ್ಪಪ್ಪಿಕೊಂಡಿದ್ದು ಅವರನ್ನು ಬಂಧಿಸಿ ಗೆ ಹಾಜರುಪಡಿಸಿದ ನಂತರ ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ.