ಬಾಗಲಕೋಟೆ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌, ಸಾವಿನಲ್ಲೂ ಒಂದಾದ ದಂಪತಿ

Suvarna News   | Asianet News
Published : Jun 17, 2020, 01:42 PM ISTUpdated : Jun 17, 2020, 01:51 PM IST
ಬಾಗಲಕೋಟೆ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌, ಸಾವಿನಲ್ಲೂ ಒಂದಾದ ದಂಪತಿ

ಸಾರಾಂಶ

ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌| ಶ್ಯಾಮರಾವ್, ಸರೋಜಾ ದಂಪತಿ ಸ್ಥಳದಲ್ಲೇ ಸಾವು| ಈ ಸಂಬಂಧ ನವಗರದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು|

ಬಾಗಲಕೋಟೆ(ಜೂ.17): ಸಾವಿನಲ್ಲೂ ದಂಪತಿ ಒಂದಾದ ಅಪರೂಪದ ಘಟನೆ ನಗರದಲ್ಲಿ ಇಂದು(ಬುಧವಾರ) ನಡೆದಿದೆ. ಶ್ಯಾಮರಾವ್ (70), ಸರೋಜಾ(60) ಎಂಬ ದಂಪತಿಯೇ ಸಾವಿನಲ್ಲೂ ಒಂದಾಗಿದ್ದಾರೆ.

ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಶ್ಯಾಮರಾವ್ ಹಾಗೂ ಸರೋಜಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮನೆಯಲ್ಲಿದ್ದ ಇಬ್ಬರೂ ಹಿರಿಯರನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 

ಹುನಗುಂದ: ನವಿಲು ಹಿಂಸಿಸಿ ಟಿಕ್‌ಟಾಕ್‌ ವಿಡಿಯೋ ಮಾಡಿದ್ದ ಭೂಪ..!

ಬಾಗಲಕೋಟೆಯ ನವಗರದ ಸೆಕ್ಟರ್ ನಂ.2ರಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ನವನಗರದ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನವಗರದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

"

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!