ಉಸಿರಾಟದ ತೊಂದರೆ, ಮೂಲವ್ಯಾಧಿ ರೋಗಕ್ಕೆ ತುತ್ತಾಗಿದ್ದ ಮಹಿಳೆ| ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿ ಮಹಿಳೆಗೆ ಚಿಕಿತ್ಸೆ| ರೋಗಿಯ ಗಂಟಲು ದ್ರವ ಪರೀಕ್ಷೆ ವೇಳೆಗೆ ಮಹಿಳೆಗೆ ಕೊರೋನಾ ಸೋಂಕು ತಗುಲಿದ್ದು ದೃಢ|
ಶಿವಮೊಗ್ಗ(ಜೂ.17): ನಗರದ ಕೋವಿಡ್ ಆಸ್ಪತ್ರೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಕೊರೋನಾ ಸೋಂಕಿತ ಮಹಿಳೆ ಸಾವು ಇಂದು(ಬುಧವಾರ) ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಮೃತ ರೋಗಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಕುಂಬಾರ ಬೀದಿಯ ನಿವಾಸಿ 56 ವರ್ಷದ ಮಹಿಳೆಯಾಗಿದ್ದಾರೆ.
ಉಸಿರಾಟದ ತೊಂದರೆ, ಮೂಲವ್ಯಾಧಿ ರೋಗಕ್ಕೆ ತುತ್ತಾದ ಮಹಿಳೆಯನ್ನು ಜೂ. 13 ರಂದು ನಗರದ ಮೆಗ್ಗಾನ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ರೋಗಿಯ ಗಂಟಲು ದ್ರವ ಪರೀಕ್ಷೆ ವೇಳೆಗೆ ಮಹಿಳೆಗೆ ಕೊರೋನಾ ಸೋಂಕು ತಗುಲಿದ್ದು ದೃಢಪಟ್ಟಿತ್ತು.
ಮಾನ್ಸೂನ್ ಮುಗಿವ ತನಕ ಮರಳುಗಾರಿಕೆ ಸ್ಥಗಿತ: ಶಿವಮೊಗ್ಗ ಡಿಸಿ
ವೃದ್ಧೆಯ ಶವವನ್ನ ಆರೋಗ್ಯ ಇಲಾಖೆ ಮೆಗ್ಗಾನ್ ಆಸ್ಪತ್ರೆಯಿಂದ ಚನ್ನಗಿರಿಗೆ ಕಳುಹಿಸಲಾಗಿದೆ. ಹೀಗಾಗಿ ಶಿವಮೊಗ್ಗ ಜಿಲ್ಲಾಡಳಿತ ದಾವಣಗೆರೆ ಜಿಲ್ಲೆಯ ಚನ್ನಗಿರಿಗೆ ತಹಶಿಲ್ದಾರ್‌ಗೆ ಹಾಗೂ ದಾವಣಗೆರೆ ಜಿಲ್ಲಾಧಿಕಾರಿಗೂ ಮಾಹಿತಿ ನೀಡಿದೆ. ಮಹಾಮಾರಿ ಕೊರೋನಾಗೆ ಬಲಿಯಾದ ಮಹಿಳೆಯ ಕುಟುಂಬದ ನಾಲ್ವರು ಸದಸ್ಯರನ್ನ ಕ್ವಾರಂಟೈನ್ ಮಾಡಲು ಸೂಚನೆ ನೀಡಲಾಗಿದೆ. ಮಹಿಳೆಯ ಸಾವಿನಿಂದ ಜಿಲ್ಲೆಯ ಜನತೆ ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ.
#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್