ಮೂರನೇ ಅಲೆಯ ನಿಯಂತ್ರಣದಲ್ಲಿ ದೇಶದ ಭವಿಷ್ಯ ಅಡಗಿದೆ

Kannadaprabha News   | Asianet News
Published : Aug 19, 2021, 01:59 PM IST
ಮೂರನೇ ಅಲೆಯ ನಿಯಂತ್ರಣದಲ್ಲಿ ದೇಶದ ಭವಿಷ್ಯ ಅಡಗಿದೆ

ಸಾರಾಂಶ

ಕೋವಿಡ್‌ ನಿಯಂತ್ರಣ ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಎಲ್ಲಾ ಸಿಬ್ಬಂದಿ  ಅವಿರತ ಶ್ರಮ ಎರಡು ಅಲೆಗಳಿಂದ ಸಾಕಷ್ಟುಸಾವು-ನೋವುಗಳಾಗಿದ್ದು, ಮೂರನೇ ಅಲೆಯ ನಿಯಂತ್ರಣದಲ್ಲಿ ದೇಶದ ಭವಿಷ್ಯ ಅಡಗಿದೆ

ಡಾ.ಎಚ್‌.ಎಂ.ಚಂದ್ರಕಲಾ - ವೈದ್ಯಾಧಿಕಾರಿ
 
ಮೈಸೂರು (ಆ.19):
 ಕೋವಿಡ್‌ ನಿಯಂತ್ರಣ ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಎಲ್ಲಾ ಸಿಬ್ಬಂದಿ ವರ್ಗದವರು,ಆಶಾ ಕಾರ್ಯಕರ್ತೆಯರು ಅವಿರತವಾಗಿ ಶ್ರಮಿಸಿದ್ದಾರೆ . ಲಸಿಕೆ ಹಾಕಿಸಲು, ಪರೀಕ್ಷೆ ಮಾಡಿಸಲು ಮನೆಮನೆ ಸುತ್ತಿ ಮನವೊಲಿಸಿದ್ದಾರೆ. ಆರೋಗ್ಯಇಲಾಖೆಯ ಘನತೆ ಹೆಚ್ಚಿಸಿದ್ದಾರೆ . ಹೀಗಾಗಿ ಎರಡು ಅಲೆಗಳಿಂದ ಸಾಕಷ್ಟುಸಾವು-ನೋವುಗಳಾಗಿದ್ದು, ಮೂರನೇ ಅಲೆಯ ನಿಯಂತ್ರಣದಲ್ಲಿ ದೇಶದ ಭವಿಷ್ಯ ಅಡಗಿದೆ.

ಮಕ್ಕಳ ಮೇಲೆ ಕಣ್ಗಾವಲು

ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿರುವ ಮೂರನೇಅಲೆಯನ್ನು ತಡೆಗಟ್ಟಲು ಕಡಿಮೆ ತೂಕದ ಮಕ್ಕಳು ಹಾಗೂ ಅನಾರೋಗ್ಯಉಂಟಾಗಿರುವ ಎಲ್ಲಾ ಮಕ್ಕಳಿಗೆ ಸೂಕ್ತಚಿಕಿತ್ಸೆ ನೀಡಲಾಗಿದೆ. ಪ್ರತಿ ಮಗುವಿನ ಆರೋಗ್ಯದ ಬಗ್ಗೆ ನಿಗಾ, ತಂದೆತಾಯಂದಿರಿಗೆ ಹಾಗೂ ಕುಟುಂಬದವರಿಗೆ ಕಡ್ಡಾಯ ಲಸಿಕೆ ಹಾಕಿಸಲು ಕ್ರಮ, ಯಾರಿಗೆ ಅನಾರೋಗ್ಯಉಂಟಾದರೂ ಕಡ್ಡಾಯ ಪ್ರತ್ಯೇಕಿಸಿ,ಚಿಕಿತ್ಸೆ ನೀಡಲಾಗುತ್ತಿದೆ . ಕೋವಿಡ್‌ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ. ಮಕ್ಕಳಿಗೆ ವಿಟಮಿನ್‌ ಸಿರಪ್‌, ಜಿಂಕ್  ಔಷಧಿ ನೀಡುವಿಕೆ, ರೋಗನಿರೋಧಕಶಕ್ತಿ ಹೆಚ್ಚಿಸಲು ಪೌಷ್ಟಿಕ ಆಹಾರ ನೀಡಲು ತಾಯಿಗೆ ಆರೋಗ್ಯಶಿಕ್ಷಣ ನೀಡಲಾಗುತ್ತಿದೆ.

ಆರು ತಿಂಗಳವರೆಗೂ ಕಡ್ಡಾಯವಾಗಿ ತಾಯಿಯ ಹಾಲು ಕುಡಿಸಲು ಪ್ರೇರೇಪಿಸಲಾಗುತ್ತಿದೆ. ನಂತರ ನೀಡುವ ಪೂರಕ ಆಹಾರ ಬಗ್ಗೆ ಮಾಹಿತಿ ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡಲು ಕುಟುಂಬದವರಿಗೆ ಆರೋಗ್ಯಶಿಕ್ಷಣ ನೀಡಲಾಗಿದೆ. ಕುಟುಂಬದ ಎಲ್ಲರಿಗೂ ಮಾಸ್ಕ್‌ ಧರಿಸುವಿಕೆ ,ಕೋವಿಡ್‌ ಲಿಸಿಕೆ ಹಾಸಿಕಿವುದು, ಕೈತೊಳೆಯುವ ಬಗ್ಗೆ ಮಾಹಿತಿ ನೀಡಲಾಗಿದೆ.

ಕೋವಿಡ್‌ ಲಸಿಕೆ ದೇಣಿಗೆ ನೀಡಿ: ಕಂಪನಿಗಳಿಗೆ ಸುಧಾಕರ್‌ ಮನವಿ

ತಾಯಂದಿರು ಕಡ್ಡಾಯವಾಗಿ ಸೋಪಿನಿಂದ ಕೈತೊಳೆಯಬೇಕು. ಆಹಾರ ನೀಡುವ ತಟ್ಟೆ,ಲೋಟಗಳನ್ನು ಬಿಸಿನೀರಿನಲ್ಲಿ ತೊಳೆಯಬೇಕು

ಮಕ್ಕಳಿಗೆ ಕುಡಿಯಲು ಬಿಸಿನೀರು ಕೊಡಬೇಕು.ಇಲ್ಲದವರು ಶೌಚಾಲಯ ನಿರ್ಮಾಣ ಮಾಡಿಸಬೇಕು .ಆರೋಗ್ಯ ಕೇಂದ್ರದವತಿಯಿಂದ ನೀಡುವ ಜಂತುಹುಳುಮಾತ್ರೆಗಳನ್ನುಮಕ್ಕಳಿಗೆ ನೀಡಬೇಕು .ಜನಸಂದಣಿ ಇರುವ ಪ್ರದೇಶಗಳಿ, ಜಾತ್ರೆ,ಸಮಾರಂಭಗಳಿಗೆ ಕುಟುಂಬದವರು ಹೋಗಬಾರದು , ಮಕ್ಕಳನ್ನು ಕರೆದುಕೋಡು ಹೋಗಬಾರದು. ಮಕ್ಕಳಿಗೆ ಅನಾರೋಗ್ಯ ಉಂಟಾದ ತಕ್ಷಣ ವೈದ್ಯರಬಳಿ ಚಿಕಿತ್ಸೆಪಡೆಯಬೇಕು . ಮನೆಯ ಪ್ರತಿಸದಸ್ಯರೂ ಹೊರಗೆಹೋದಾಗ ಮಾಸ್ಕ್‌ ಧರಿಸಬೇಕು .

ಕೋವಿಡ್‌ ನಿಯಂತ್ರಣಕ್ಕೆ ಬಂದಿದ್ದು ಹೇಗೆ? :  ಕೋವಿಡ್‌ ಸೋಂಕಿನ ಎರಡನೇ ಅಲೆಯು ಆಗತಾನೇ ನಿಧಾನವಾಗಿ ಹಳ್ಳಿಗಳಲ್ಲಿ ತನ್ನ ಕಬಂಧಬಾಹುವನ್ನುಚಾಚುತ್ತಿತ್ತು. ರೋಗಿಗಳ ಸಂಖ್ಯೆ ಹೆಚ್ಚಾಗಿ ಆತಂಕ ಮೂಡಿಸಿತ್ತು. ಆಗ ಪ್ರತಿ ಪ್ರಾಥಮಿಕ ಆರೋಗ್ಯಕೇಂದ್ರಗಳ ವೈದ್ಯಾಧಿಕಾರಿಗಳು ಮಹತ್ವವಾದ ಜವಾಬ್ದಾರಿ ನಿರ್ವಹಿಸಿದರು.ಎಲ್ಲರ ಸತತಪರಿಶ್ರಮದಿಂದಾಗಿ ಇಂದು ಕೋವಿಡ್‌ ನಿಯಂತ್ರಣಕ್ಕೆ ಬಂದಿದೆ.

ಕೋವಿಡ್ ಎರಡನೇ ಅಲೆಯಲ್ಲಿ ಮೊದಲಿಗೆ ಪಾಸಿಟಿವ್‌ ಮಾದಾಪುರದಲ್ಲಿ ಕಂಡು ಬಂದಿತು .ಆಗ ವೈದ್ಯರು , ಗ್ರಾಮಲೆಕ್ಕಿಗರು , ಗ್ರಾಮಪಂಚಾಯ್ತಿ ಸಿಬ್ಬಂಧಿ (ಮಾದಾಪುರ , ಹೈರಿಗೆ) , ಅಧ್ಯಕ್ಷರು , ಉಪಾಧ್ಯಕ್ಷರು , ಸದಸ್ಯರು , ಎಲ್ಲರ ಸಹಕಾರ ಪಡೆದು ಪ್ರತಿದಿನ ರೋಗಿಯನ್ನು ಕಡ್ಡಾಯ ಪ್ರತ್ಯೇಕಿಸುವಿಕೆ , ಅವರ ಕುಟುಂಬದವರಿಗೂ ಕೋವಿಡ್‌ ಬಗ್ಗೆ ಮಾಹಿತಿ , ಆರೋಗ್ಯಶಿಕ್ಷಣ ಪೌಷ್ಟಿಕಾಂಶದಆಹಾರ ನೀಡುವಿಕೆ , ವಿಶ್ರಾಂತಿ ತೆಗೆದುಕೊಳ್ಳಬೇಕಾದಕ್ರಮಗಳು , ಎಲ್ಲರೂ ಕಡ್ಡಾಯ ಮಾಸ್ಕ್‌ ಧರಿಸುವಿಕೆ , ಹಾಗೂ ಪ್ರತಿರೋಗಿಗೂ ಧೈರ್ಯ ತುಂಬಲಾಯಿತು . ಮಾತ್ರೆಗಳನ್ನುರೋಗಿ ಹಾಗೂ ಕುಟುಂಬದವರಿಗೂನೀಡಲಾಯಿತು . ಪ್ರತಿದಿನ ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಲಾಯಿತು . ಸುತ್ತಮುತ್ತಲು ವಾಸಿಸುವ ಜನರಿಗೂ ಮುನ್ನೆಚ್ಚರಿಕೆ ಕ್ರಮವಾಗಿ ಮಾತ್ರೆಗಳನ್ನು ವಿತರಿಸಲಾಯಿತು . ಅವರಿಗೆ ಕಡ್ಡಾಯ ಮಾಸ್ಕ್‌ ಧರಿಸುವಿಕೆ , ಆರೋಗ್ಯಶಿಕ್ಷಣ ನೀಡಲಾಯಿತು . ಕೋರೋನಾ ರೋಗಿಯ ಸುತ್ತಮುತ್ತಲಿನ ಕುಟುಂಬದ ಎಲ್ಲಾ ಸದಸ್ಯರಿಗೂ ಯಾವುದೇ ಅನಾರೋಗ್ಯದ ಸಮಸ್ಯೆಯಿದ್ದರೆ ತಕ್ಷಣ ಚಿಕಿತ್ಸೆನೀಡಲಾಯಿತು .ಇದರಿಂದ ಪಾಸಿಟಿವ್‌ ಬಂದ ರೋಗಿಗಳು ಸಂಪೂರ್ಣ ಗುಣಮುಖರಾದರು .

ಕಡ್ಡಾಯ ಲಸಿಕೆ ಕಾರ್ಯಕ್ರಮ: 45 ವರ್ಷ ಮೇಲ್ಪಟ್ಟು ಹಾಗೂ 18 ವರ್ಷ ಮೇಲ್ಪಟ್ಟು ಎಲ್ಲರಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸಲು ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಆರೋಗ್ಯಶಿಕ್ಷಣ ನಡೆಸಲಾಯಿತು . ಮೊದಲ ಡೋಸ್‌ ಪಡೆದಿರುವಎಲ್ಲರಿಗೂ ಎರಡನೇ ಡೋಸ್‌ ನೀಡಲು ಸಂಕಲ್ಪಮಾಡಲಾಯಿತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

PREV
click me!

Recommended Stories

ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?
ಬೆಂಗಳೂರಿನ ಗುಲಾಬಿ ಮೆಟ್ರೋ ಮಾರ್ಗಕ್ಕೆ ಶೀಘ್ರ ಪ್ರೊಟೊಟೈಪ್‌ ರೈಲು