ಹೊಸ ವರ್ಷ ಸ್ವಾಗತಕ್ಕೆ ಕ್ಷಣಗಣನೆ; ಕಾರವಾರ ಕಡಲತೀರಕ್ಕೆ ಪ್ರವಾಸಿಗರ ದಂಡು

By Kannadaprabha NewsFirst Published Dec 31, 2022, 11:09 AM IST
Highlights

ಜಿಲ್ಲೆಯಾದ್ಯಂತ ಹೊಸವರ್ಷದ ಸ್ವಾಗತಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರಾಜ್ಯ ಸರ್ಕಾರ ನೀಡಿರುವ ಕೋವಿಡ್‌ ಮಾರ್ಗಸೂಚಿ ಪಾಲನೆಗೆ ಪೊಲೀಸ್‌ ಇಲಾಖೆ ಕ್ರಮ ವಹಿಸಿದೆ. ದಾಂಡೇಲಿ, ಜೋಯಿಡಾ, ಮುರುಡೇಶ್ವರ, ಗೋಕರ್ಣ ಒಳಗೊಂಡು ಹಲವಾರು ಕಡೆ ಹೊಸವರ್ಷಾಚರಣೆಯ ಸಂಭ್ರಮ ಮನೆ ಮಾಡಿದೆ.

ಕಾರವಾರ (ಡಿ.31) : ಜಿಲ್ಲೆಯಾದ್ಯಂತ ಹೊಸವರ್ಷದ ಸ್ವಾಗತಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರಾಜ್ಯ ಸರ್ಕಾರ ನೀಡಿರುವ ಕೋವಿಡ್‌ ಮಾರ್ಗಸೂಚಿ ಪಾಲನೆಗೆ ಪೊಲೀಸ್‌ ಇಲಾಖೆ ಕ್ರಮ ವಹಿಸಿದೆ. ದಾಂಡೇಲಿ, ಜೋಯಿಡಾ, ಮುರುಡೇಶ್ವರ, ಗೋಕರ್ಣ ಒಳಗೊಂಡು ಹಲವಾರು ಕಡೆ ಹೊಸವರ್ಷಾಚರಣೆಯ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಸಾಕಷ್ಟುಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಆಗಮಿಸಿದ್ದಾರೆ. ದಾಂಡೇಲಿ, ಜೋಯಿಡಾ ಭಾಗದ ರೆಸಾರ್ಚ್‌ಗಳಲ್ಲಿ, ಕರಾವಳಿಯ ಕಡಲ ತೀರಗಳಲ್ಲಿ ಕುಟುಂಬಸ್ಥರೊಂದಿಗೆ, ಸ್ನೇಹಿತರೊಂದಿಗೆ ಹೊಸವರ್ಷವನ್ನು ಸ್ವಾಗತಿಸಲು ಜನರು ಸಿದ್ಧರಾಗಿದ್ದಾರೆ.

ಗೋವಾ(Goa) ರಾಜ್ಯದಲ್ಲಿ ಇರುವ ಬೋಟ್‌ಹೌಸ್‌(Boat house), ಕಾಟೇಜ್‌, ಪೋರ್ಜುಗೀಸ್‌ ವಿಲ್ಲಾ(Portuguese villa), ಲಾಡ್ಜ್‌ಗಳು ಈಗಾಗಲೇ ಭರ್ತಿಯಾಗಿದೆ. ಹೀಗಾಗಿ ಹೊರಗಿನಿಂದ ಆಗಮಿಸಿದ ಕೆಲವು ಪ್ರವಾಸಿಗರು ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದು, ಶನಿವಾರ ಹೊಸ ವರ್ಷಾಚರಣೆಗೆ ಗೋವಾಕ್ಕೆ ತೆರಳುತ್ತಾರೆ. ಗೋವಾ ಕಡಲ ತೀರಗಳಲ್ಲಿ ಜನಜಂಗುಳಿ ಹೆಚ್ಚಿರುವುದರಿಂದ ಇನ್ನು ಕೆಲವರು ಜಿಲ್ಲೆಯ ವಿವಿಧೆಡೆ ಹೊಸವರ್ಷದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

Uttara Kannada News: ವರ್ಷದ ಹಿನ್ನೋಟ; ಭತ್ತ ಆಪೋಶನ ಪಡೆದ ಅಡಕೆ

ಕಳೆದ ವರ್ಷ ಒಮಿಕ್ರೋನ್‌ ಸೋಂಕಿ(Omicron virus)ನ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಜಿಲ್ಲಾಡಳಿತ ಬ್ರೇಕ್‌ ಹಾಕಿತ್ತು. 2021ರ ಡಿ.31ರಂದು ರಾತ್ರಿ 8 ಗಂಟೆಯಿಂದ 2022ರ ಜ.1ರಂದು ಬೆಳಗ್ಗೆ 5 ಗಂಟೆವರೆಗೆ ಕರಾವಳಿ ತಾಲೂಕುಗಳಲ್ಲಿ ರಾತ್ರಿ ನೈಟ್‌ ಕಫä್ರ್ಯ ಹೇರಲಾಗಿತ್ತು. ಇದರಿಂದಾಗಿ ಸಾರ್ವಜನಿಕರಿಗೆ ಕಡಲ ತೀರಗಳಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ಇರಲಿಲ್ಲ. ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರು ಪ್ರವೇಶಿಸದಂತೆ ಪೊಲೀಸ್‌ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಕಾನೂನು ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಡಳಿತ ಎಚ್ಚರಿಕೆ ನೀಡಿತ್ತು. ಆದರೆ ಪ್ರಸಕ್ತ ವರ್ಷ ಕೋವಿಡ್‌ ಆತಂಕ ಕಡಿಮೆ ಇರುವುದರಿಂದ ಕಡಲತೀರ ಒಳಗೊಂಡು ವಿವಿಧೆಡೆ ಹೊಸ ವರ್ಷಾಚರಣೆಗೆ ಅವಕಾಶ ನೀಡಲಾಗಿದ್ದು, ಜನತೆ ಕಾತುರದಿಂದ ಕಾಯುತ್ತಿದ್ದಾರೆ.

ಕಡಲ ತೀರಗಳಲ್ಲಿ ರಾತ್ರಿ 12 ಗಂಟೆ ಆಗುತ್ತಿದ್ದಂತೆ ಪಟಾಕಿ ಸಿಡಿಸಿ ಹೊಸವರ್ಷವನ್ನು ಸ್ವಾಗತಿಸಲಾಗುತ್ತಿದೆ. ಪ್ರತಿವರ್ಷವೂ ಸಂಭ್ರಮಾಚರಣೆ ಮಾಡುವ ಸ್ಥಳಗಳಲ್ಲಿ, ಜನ ಸಂದಣಿ ಇರುವ ಪೊಲೀಸ್‌ ಸಿಬ್ಬಂದಿ ನಿಯೋಜನೆಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದು, ರೆಸಾರ್ಚ್‌, ಹೋಮ್‌ ಸ್ಟೇ ಮಾಲೀಕರೊಂದಿಗೆ ಸಭೆ ಮಾಡಲಾಗಿದೆ. ರಾಜ್ಯ ಸರ್ಕಾರ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹೊರಡಿಸಿದ ಕೋವಿಡ್‌ ಮಾರ್ಗಸೂಚಿ ಪಾಲನೆಗೆ ಸೂಚನೆ ನೀಡಲಾಗಿದೆ.

New Year 2023: ಕರ್ನಾಟಕದ ಪ್ರವಾಸಿತಾಣದ ಲಾಡ್ಜ್‌ಗಳು ಈಗಲೇ ಭರ್ತಿ..!

ಸಂಭ್ರಮಾಚರಣೆ ನಡೆಯುವ ಸ್ಥಳಗಳಲ್ಲಿ ಅಗತ್ಯದಷ್ಟುಸಿಬ್ಬಂದಿ ನಿಯೋಜಿಸಲಾಗುತ್ತಿದೆ. ರೆಸಾರ್ಚ್‌, ಹೋಮ್‌ ಸ್ಟೇ ಮಾಲೀಕರ ಜತೆಗೆ ಪೊಲೀಸ್‌ ಅಧಿಕಾರಿಗಳು ಸಭೆ ನಡೆಸಿದ್ದಾರೆ. ರಾಜ್ಯ ಸರ್ಕಾರದ ಕೋವಿಡ್‌ ಮಾರ್ಗಸೂಚಿ ಪಾಲನೆಗೆ, ಡಿಜೆ ಬಳಕೆಗೆ ನ್ಯಾಯಾಲಯದ ಮಾರ್ಗಸೂಚಿ ಪಾಲನೆಗೆ ತಿಳಿಸಲಾಗಿದೆ. ಜಿಲ್ಲೆಯಲ್ಲಿ ಇರುವ ಅಧಿಕಾರಿಗಳನ್ನು, ಸಿಬ್ಬಂದಿಯನ್ನು ಬಳಕೆ ಮಾಡಿಕೊಂಡು ಬಂದೋಬಸ್‌್ತ ಒದಗಿಸಲಾಗುತ್ತದೆ. ಹೊಸವರ್ಷಾಚರಣೆ ಸ್ವಾಗತಕ್ಕೆ ಸಾರ್ವಜನಿಕ ಸ್ಥಳದಲ್ಲಿ ಸೇರುವವರು ಕಾನೂನು ಪಾಲನೆ ಮಾಡಬೇಕು.

ವಿಷ್ಣುವರ್ಧನ್‌ ಎನ್‌. ಜಿಲ್ಲಾ ಪೊಲೀಸ್‌ ವರಿಷ್ಠ

click me!