ಬಳ್ಳಾರಿ ಉತ್ಸವಕ್ಕೆ ಕ್ಷಣಗಣನೆ, ಮುಖ್ಯ ಬೀದಿಗಳಲ್ಲಿ ರಂಗೋಲಿ ಚಿತ್ತಾರ

By Suvarna News  |  First Published Jan 20, 2023, 4:42 PM IST

ಜನವರಿ 21 ಮತ್ತು 22ರಂದು ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವಕ್ಕೆ ಕ್ಷಣಗಣನೆ ಬಾಕಿಯಿದ್ದು, ಜನರಲ್ಲಿ ದಿನದಿಂದ ದಿನಕ್ಕೆ ಉತ್ಸುಕತೆ ಹೆಚ್ಚಾಗುತ್ತಿದೆ.  ಉತ್ಸವದ ಭಾಗವಾಗಿ ಆಯೋಜಿಸಿದ ರಂಗೋಲಿ ಸ್ಪರ್ಧೆ ಹಿನ್ನೆಲೆ ಬಳ್ಳಾರಿ ರಸ್ತೆಗಳು, ಜಿಲ್ಲಾಧಿಕಾರಿ ಕಚೇರಿ ಆವರಣ ಕಲರ್ ಪುಲ್ ರಂಗೋಲಿಗಳಿಂದ ಕಂಗೊಳಿಸುತ್ತಿತ್ತು.


ವರದಿ ; ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್

ಬಳ್ಳಾರಿ (ಜ.20): ಸದಾ ಕೆಂದೂಳಿನಿಂದ ಕಂಗೊಳಿಸುತ್ತಿದ್ದ ಬಳ್ಳಾರಿ ರಸ್ತೆಗಳಿಂದು ಕಲರ್ ಫುಲ್ ಆಗಿ ಕಾಣಿಸುತ್ತಿದ್ದವು.  ಕರ್ಕಶ ಶಬ್ದದ ರಸ್ತೆಗಳು, ಸರ್ಕಾರಿ ಕೆಲಸದ ಧಾವಂತದಲ್ಲಿ ಓಡಾಡುತ್ತ ಸದಾ ಬಿಜಿ ಯಾಗಿರೋ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಹಿಳೆಯರ ಮಾತಿನ ಕಲರವ,  ಬಳೆಗಳ ಶಬ್ದ ಕೇಳುತ್ತಿತ್ತು. ಇದೇ ಮೊದಲ ಬಾರಿಗೆ ಜನವರಿ 21 ಮತ್ತು 22ರಂದು ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವಕ್ಕೆ ಕ್ಷಣಗಣನೆ ಬಾಕಿಯಿದ್ದು, ಜನರಲ್ಲಿ ದಿನದಿಂದ ದಿನಕ್ಕೆ ಉತ್ಸುಕತೆ ಹೆಚ್ಚಾಗುತ್ತಿದೆ.  ಉತ್ಸವದ ಭಾಗವಾಗಿ ಆಯೋಜಿಸಿದ ರಂಗೋಲಿ ಸ್ಪರ್ಧೆ ಹಿನ್ನೆಲೆ ಬಳ್ಳಾರಿ ರಸ್ತೆಗಳು, ಜಿಲ್ಲಾಧಿಕಾರಿ ಕಚೇರಿ ಆವರಣ ಕಲರ್ ಪುಲ್ ರಂಗೋಲಿಗಳಿಂದ ಕಂಗೊಳಿಸುತ್ತಿತ್ತು. ಕಚೇರಿ ಆವರಣದಲ್ಲಿ ಮತ್ತು ರಸ್ತೆಗಳ ಮೇಲೆ ವಿವಿಧ ಬಗೆ ಬಗೆಯ ರಂಗೋಲಿ  ಹಾಕೋ‌ ಮೂಲಕ ಮಹಿಳೆಯರು ಉತ್ಸವದ ಸಂಭ್ರಮ ಇಮ್ಮಡಿಗೊಳಿಸಿದರು.

Tap to resize

Latest Videos

undefined

ಶಿವಮೊಗ್ಗದಲ್ಲಿ ತಯಾರಾದ 23 ಅಡಿ ಎತ್ತರದ ಅಪ್ಪು ಪ್ರತಿಮೆ ಬಳ್ಳಾರಿಯಲ್ಲಿ ಜ.21ರಂದು ಅನಾವರಣ

ಮುಖ್ಯ ರಸ್ತೆಗಳಲ್ಲಿ ರಂಗೋಲಿ‌ ಕಲರವ:
ಬಳ್ಳಾರಿ ಉತ್ಸವದ ಹಿನ್ನಲೆ ಬೆಳಗಿನ ಜಾವದಿಂದಲೇ ಯುವತಿಯರು ಮತ್ತು ಮಹಿಳೆಯರು ಕೈಯಲ್ಲಿ ರಂಗೋಲಿ ಹಿಡಿದು  ನಗರದ ಮುಖ್ಯ ರಸ್ತೆಗಳಲ್ಲಿ ರಂಗೋಲಿ ಹಾಕುತ್ತಿರುವದು, ವಿಶೇಷವಾಗಿತ್ತು. ಮೊದಲ ಸುತ್ತಿನ ರಂಗೋಲಿ ಸ್ಪರ್ಧೆಗೆ ಮಹಾನಗರ ಪಾಲಿಕೆಯ ಮಹಾಪೌರರಾದ ಎಂ.ರಾಜೇಶ್ವರಿ ಅವರು ರಂಗೋಲಿ ಹಾಕುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆ ವಿಭಜನೆಯಾದ ನಂತರ ಮೊದಲ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದ ಬಗ್ಗೆ ಎಲ್ಲರಲ್ಲೂ ಉತ್ಸಾಹ ಹೆಚ್ಚಾಗಿದೆ. ಅದರಲ್ಲೂ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿರುವ ರಂಗೋಲಿ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಯ ಮತ್ತು ನಗರ ವಾಸಿಗಳು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಮಹಿಳೆಯರಲ್ಲಿ ಇನ್ನಷ್ಟು ಆಸಕ್ತಿಯನ್ನು ಹೆಚ್ಚಿಸಿದೆ ಎಂದು ಹೇಳಿ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಮತ್ತು ಯುವತಿಯರಿಗೆ ಶುಭ ಹಾರೈಸಿದರು.

 

ಬಳ್ಳಾರಿಯಲ್ಲಿ ಭರ್ಜರಿ ಗಿಫ್ಟ್ ಪಾಲಿಟಿಕ್ಸ್ ಮಾಡ್ತಿರೋ ನಾಯಕರು!

ಎರಡು ಸುತ್ತಿನ ಸ್ಪರ್ಧೆ: ಇನ್ನೂ ಇದು  ಎರಡು ಸುತ್ತಿನ ಸ್ಪರ್ಧೆ ಇದಾಗಿದ್ದು, ಸಾಂಪ್ರದಾಯಿಕ ಚುಕ್ಕಿ ಮತ್ತು ಕಲಾಕೃತಿ ಆಧಾರದ ಮೇಲೆ ಎರಡನೇಯ ಸುತ್ತಿಗೆ ಆಯ್ಕೆ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದರು. ಮೊದಲ ಸುತ್ತಿನಲ್ಲಿ ಒಟ್ಟು 160 ಮಹಿಳೆಯರು ಹಾಗೂ ಯುವತಿಯರು ಭಾಗವಹಿಸಿದ್ದಾರೆ. 50ರಿಂದ 60 ಜನರ ಸುಂದರವಾಗಿ ಮೂಡಿಬಂದ ರಂಗೋಲಿಯನ್ನು  ಆಯ್ಕೆ ಮಾಡಲಾಗಿದೆ. ಎರಡನೇ ಸುತ್ತಿಗೆ ಆಯ್ಕೆಯಾದವರು ಜನವರಿ 21ರಂದು ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಅಂತಿಮ ಸುತ್ತಿನಲ್ಲಿ ಸ್ಪರ್ಧೆ ಮಾಡುತ್ತಾರೆ. ಅಂತಿಮ ಸುತ್ತಿನಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನ ಪಡೆದವರಿಗೆ ರೂ.3000, ಎರಡನೇ ಬಹುಮಾನ ರೂ.2000 ಹಾಗೂ ತೃತೀಯ ಬಹುಮಾನವಾಗಿ ರೂ.1000 ಗಳನ್ನು ನಗದು ಬಹುಮಾನದ ಜೊತೆಗೆ 4 ಸಮಾಧನಕರ ಬಹುಮಾನದ ಮತ್ತು ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.

click me!