ಬಿಸಿಲ ಝಳಕ್ಕೆ ತತ್ತರಿಸಿದ ಚಿಕ್ಕಮಗಳೂರು: ತಂಪು ಪಾನೀಯಗಳ ಮೊರೆ ಹೋದ ಜನ..!

By Girish Goudar  |  First Published Apr 29, 2022, 12:47 PM IST

*  ಉರಿ ಬಿಸಿಲು ಬಯಲುಸೀಮೆಯ ವಾತಾವರಣ ನೆನಪಿಸಿಕೊಡುವಷ್ಟು ಪ್ರಖರ
*  ತಂಪು ಪಾನೀಯ, ಹಣ್ಣುಗಳತ್ತ ಮುಖ ಮಾಡಿರುವ ಕಾಫಿನಾರಿನ ಜನತೆ
*  ಚಿಕ್ಕಮಗಳೂರಿನ ಬೇಸಿಗೆ ಬಯಲುಸೀಮೆಯ ಬಿಸಿಲನ್ನು ನೆನಪಿಸಿಕೊಡುತ್ತಿದೆ 
 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಏ.29):  ಬಿಸಿಲ ತಾಪಕ್ಕೆ ಕಾಫಿನಾಡು ಅಕ್ಷರಶಃ ತತ್ತರಿಸಿ ಹೋಗಿದೆ. ಬೆಳಗ್ಗೆ 9 ಆಗುತ್ತಿದ್ದಂತೆ ನೆತ್ತಿ ಸುಡುವ ಸೂರ್ಯನಿಗೆ ಹೆದರಿ ಜನರು ಕೊಡೆಗಳಿಗೆ ಮೊರೆ ಹೋಗಿರುವ ಚಿತ್ರಣ ಇಲ್ಲಿ ಸರ್ವೇಸಾಮಾನ್ಯವಾಗಿದೆ. ಗಂಟಲನ್ನು ಬಿಗಿ ಹಿಡಿಸುತ್ತಿರುವ ಮಹಾಬಿಸಿಲಿನಿಂದ(Summer) ತಪ್ಪಿಸಿಕೊಳ್ಳಲು ಜನರು ತಂಪು ಪಾನೀಯ ಹಾಗೂ ಹಣ್ಣುಗಳತ್ತ ಆಕರ್ಷಿತರಾಗುತ್ತಿದ್ದಾರೆ. ಬೀದಿಗಳಲ್ಲಿ ಹೆಜ್ಜೆ ಸವೆಸದಂತೆ ಮಾಡಿರುವ ಈ ಬೇಸಿಗೆ ಝಳ ಜನಸಾಮಾನ್ಯ ಹಿಡಿಶಾಪ ಹಾಕುವಂತೆ ಮಾಡಿದೆ.

Tap to resize

Latest Videos

ಕೂಲ್ ಸಿಟಿ ಈಗ ಹಾಟ್ ಸಿಟಿ

ಬೇಸಿಗೆ ಕಾಲದ ಕೂಲ್ ಸ್ಪಾರ್ಟ್‌ಗಳೆನಿಸಿದ ಮಲೆನಾಡಿನ ಭಾಗವಾದ ಚಿಕ್ಕಮಗಳೂರಿನ(Chikkamagaluru) ಹಲವು ತಾಣಗಳು ಈಗ ನಿಗಿ ನಿಗಿ ಬೆಂಕಿ ಕೆಂಡದಂತೆ ಭಾಸವಾಗುತ್ತಿದೆ. ಪ್ರತಿ ವರ್ಷದಂತೆ ತಂಪಾದ ಸ್ಥಳಗಳನ್ನು ಹುಡುಕಿಕೊಂಡು ಮಲೆನಾಡಿನ(Malenadu) ಪರಿಸರಕ್ಕೆ ಲಗ್ಗೆ ಇಡುತ್ತಿರುವ ಪ್ರವಾಸಿಗರು(Tourists) ಫ್ಯಾನ್, ಕೂಲರ್ಗಳಿಲ್ಲದೆ ದಿನ ಕಳೆಯಲು ಸಾಧ್ಯವಿಲ್ಲ ಎನ್ನುವಂತಾಗಿದೆ. ವರ್ಷ ಪೂರ್ತಿ ವಾತಾವರಣವನ್ನು ತಂಪಾಗಿರಿಸುತ್ತಿದ್ದ ಪ್ರಮುಖ ಸ್ಥಳಗಳಲ್ಲಿ ಬಿಸಿಲ ಝಳ ಹೆಚ್ಚಳವಾಗಿದೆ. ಕಾಫಿ, ಅಡಿಕೆ ತೋಟಗಳ ನಡುವಿನ ಹೋಂ ಸ್ಟೇಗಳು(Home Staty), ರೆಸಾರ್ಟ್‌ಗಳಲ್ಲೂ(Resorts) 24 ಗಂಟೆ ಫ್ಯಾನ್‌ಗಳನ್ನು ಚಾಲನೆಯಲ್ಲಿಡಬೇಕಾದ ಸ್ಥಿತಿ ಬಂದಿದೆ. ಬಿಸಿಲಿನ ಪ್ರಖರತೆಗೆ ಸಣ್ಣ ಪುಟ್ಟ ಜಲಪಾತಗಳಲ್ಲಿ ನೀರು ಹರಿಯುವುದು ನಿಂತುಹೋಗಿದೆ. ಈ ಬಾರಿಯ ಬೇಸಿಗೆ ಆರಂಭದಲ್ಲೇ ತಾಪಮಾನ ಏರಿಕೆಯಾಗಿರುವುದು ಪ್ರಾಣಿಗಳಿಗೆ ಭಾರೀ ಬಿಸಿ ತಟ್ಟಿದೆ. ನೀರಿಗೆ, ಬಿಸಿಲಿನಿಂದ ತಂಪನೆಯ ಸ್ಥಳಕ್ಕಾಗಿ ಪ್ರಾಣಿಗಳು ಪರದಾಟ ಪಡುತ್ತಿರುವ ದೃಶ್ಯ ಜಿಲ್ಲಾದ್ಯಾಂತ ಸಾಮಾನ್ಯವಾಗಿದೆ. 

Chikkamagaluru ಮೇಕೆ ಮರಿ ನುಂಗಿ ಗಡದ್ದಾಗಿ ನಿದ್ದೆ ಮಾಡಿದ್ದ ಹೆಬ್ಬಾವು ಸೆರೆ

ಬಿಸಿಲನ ಝಳಕ್ಕೆ ತತ್ತರಿಸಿದ ಕಾಫಿನಾಡು 

ಕಳೆದ ಕೆಲ ವರ್ಷಗಳ ಹೋಲಿಕೆಯಲ್ಲಿ ಈ ಬಾರಿ ಜಿಲ್ಲೆಯಲ್ಲಿ ಬಿಸಿಲು ಹೆಚ್ಚೆಂದೇ ಹೇಳಲಾಗುತ್ತಿದೆ. ಇಲ್ಲಿನ ಉರಿಬಿಸಿಲು ಬಯಲುಸೀಮೆಯ ವಾತಾವರಣವನ್ನು ನೆನಪಿಸಿಕೊಡುವಷ್ಟು ಪ್ರಖರವಾಗಿದೆ.ಜನದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಂತೂ ಜನರು ಸಾಕಪ್ಪ ಸಾಕು ಎನ್ನುತ್ತಿದ್ದಾರೆ. ಬೆಳಗ್ಗೆಯಿಂದಲೇ ಬಾಧಿಸತೊಡಗುವ ಬಿಸಿಲು ಜನರ ಮೈ ಬೆವರಿಳಿಸುತ್ತಿದೆ. ಜನರ ಜೀವನಶೈಲಿಯನ್ನೇ ಹೈರಾಣಗೊಳಿಸಿರುವ ಬಿಸಿಲಿನ ರುದ್ರಪ್ರತಾಪ ತಂಪುಪಾನೀಯ ಹಾಗೂ ಹಣ್ಣು ವ್ಯಾಪಾರಿಗಳಿಗೆ ವರದಾನವಾಗಿ ಪರಿಣಮಿಸಿದೆ. ಐಸ್ಕ್ಯಾಂಡಿ, ಕೂಲ್ಡ್ರಿಂಕ್ಸ್, ಹಣ್ಣು, ಎಳನೀರು,ಕಬ್ಬಿನ ಹಾಲಿನ ಮಾರಾಟ ಭರಾಟೆಯಿಂದ ಸಾಗಿದೆ.ಬೇಡಿಕೆ ಹೆಚ್ಚಾಗಿರುವುದನ್ನೇ ಬಂಡವಾಳವಾಗಿಸಿಕೊಂಡಿರುವ ವ್ಯಾಪಾರಿಗಳು ಬೆಲೆ ಹೆಚ್ಚಿಸಿದ್ದಾರೆ. ಮಲೆನಾಡಿನ ಪರಿಸರದಲ್ಲಿ ಈ ಪ್ರಮಾಣದ ಉಷ್ಣಾಂಶ ಏರಿಕೆಯಾಗಿರುವುದು ಇದೇ ಮೊದಲು ಎಂದ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಸದಾ ತಂಪಾಗಿರುತ್ತಿದ್ದ ತಾಣಗಳಲ್ಲೂ ತಾಪಮಾನ(Temperature) ಆಸುಪಾಸಿನಲ್ಲಿದೆ ಎಂದರೆ ನಂಬಲೇ ಅಸಾಧ್ಯ ಎನ್ನುವಂತಾಗಿದೆ.

ಸುದೀಪ್-ಅಜಯ್ ದೇವಗನ್ ಭಾಷೆ ವಾರ್ ಮಧ್ಯೆ ಸಿಟಿ ರವಿ ಎಂಟ್ರಿ

ಪರಿಸರದ ಮೇಲಾಗುತ್ತಿರುವ ವ್ಯತಿರಿಕ್ತ ಬದಲಾವಣೆಗಳೇ ಬಿಸಿಲಿನ ಪ್ರಖರತೆ ಹೆಚ್ಚಲು ಕಾರಣ 

ಬಿಸಿಲಿಂದ ಒಣಗುತ್ತಿರುವ ಗಂಟಲಿನ ದಾಹ ತೀರಿಸಿಕೊಳ್ಳುವುದಷ್ಟನ್ನೇ ಉದ್ದೇಶವಾಗಿಸಿ ಕೊಂಡಿರುವ ಗ್ರಾಹಕರು(Customers) ಬೆಲೆ ಹೆಚ್ಚಳಕ್ಕೆ ತಲೆ ಕೆಡಿಸಿಕೊಂಡಿಲ್ಲ. ಕಳೆದ ಬಾರಿಗಿಂತ ಹೆಚ್ಚಾಗಿರುವ ಬಿಸಿಲಿಂದ ಹೆಚ್ಚಿರುವ ದುಡಿಮೆಯಿಂದ ದಿಲ್ಖುಷ್ ಆಗಿರೋ ವ್ಯಾಪಾರಸ್ಥರು ಈ ಬೇಸಿಗೆ ಕಳೆಯೋದರಳೊಗೆ ನಿರೀಕ್ಷೆಗಿಂತ ಅಧಿಕ ಲಾಭದ ಲೆಕ್ಕಾಚಾರದಲ್ಲಿದ್ದಾರೆ.

33ರಿಂದ 35 ಡಿಗ್ರಿ ಉಷ್ಣಾಂಶದ ಮಿತಿಯನ್ನು ಮೀರುತ್ತಿರುವ ಚಿಕ್ಕಮಗಳೂರಿನ ಬೇಸಿಗೆ ಬಯಲುಸೀಮೆಯ ಬಿಸಿಲನ್ನು ನೆನಪಿಸಿಕೊಡುತ್ತಿದೆ. ಪರಿಸರದ ಮೇಲಾಗುತ್ತಿರುವ ವ್ಯತಿರಿಕ್ತ ಬದಲಾವಣೆಗಳೇ ಬಿಸಿಲಿನ ಪ್ರಖರತೆ ಹೆಚ್ಚಲು ಕಾರಣ ಎನ್ನಲಾಗಿದೆ. ಬಿಸಿಲಿಂದ ತಪ್ಪಿಸಿಕೊಳ್ಳಲು ಜಿಲ್ಲೆಯಲ್ಲಿ ಹೆಚ್ಚಿರುವ ಗಿರಿಧಾಮ, ಜಲಪಾತಗಳತ್ತ ಜನರು ಆಕರ್ಷಿತರಾಗುತ್ತಿದ್ದಾರೆ. ಒಟ್ನಲ್ಲಿ ಜನರು ಬೇಸಿಗೆ ಯಾವಾಗ ಮುಗಿಯುತ್ತದೋ, ಮತ್ತದೇ ತಂಪು ಯಾವಾಗ ಇಲ್ಲಿನ  ಪರಿಸರವನ್ನು ಆವರಿಸುತ್ತದೋ ಎಂಬ ನಿರೀಕ್ಷೆಯಲ್ಲಿದ್ದಾರೆ. 
 

click me!