ಕೊರೋನಾ ವೈರಸ್ ಭೀತಿ: KIMSನಲ್ಲಿ ನಾಲ್ವರಿಗೆ ಪರೀಕ್ಷೆ

Kannadaprabha News   | Asianet News
Published : Mar 06, 2020, 08:34 AM IST
ಕೊರೋನಾ ವೈರಸ್ ಭೀತಿ: KIMSನಲ್ಲಿ ನಾಲ್ವರಿಗೆ ಪರೀಕ್ಷೆ

ಸಾರಾಂಶ

ನಾಲ್ಕು ಮಂದಿಗೆ ಕೊರೋನಾ ವೈರಸ್ ಟೆಸ್ಟ್| ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಪರೀಕ್ಷೆ| ಕೊರೋನಾದ ಯಾವುದೇ ಲಕ್ಷಣಗಳು ಈ ನಾಲ್ವರಿಗೂ ಕಂಡುಬಂದಿಲ್ಲ| ಈ ಕಾರಣದಿಂದ ಬುಧವಾರ ರಾತ್ರಿಯೇ ಇವರೆಲ್ಲರನ್ನು ಡಿಸ್ಚಾರ್ಜ್ ಮಾಡಲಾಗಿದೆ|  

ಹುಬ್ಬಳ್ಳಿ(ಮಾ.06): ದುಬೈಯಿಂದ ಆಗಮಿಸಿದ್ದ ನಾಲ್ವರು ಕೊರೋನಾ ವೈರಸ್ ಭೀತಿಯಿಂದ ಇಲ್ಲಿನ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದರೆ ಇವರ್ಯಾರಿಗೂ ಆ ರೋಗದ ಲಕ್ಷಣಗಳು ಕಾಣಿಸಿಲ್ಲ. ಹೀಗಾಗಿ ಭಯಪಡುವ ಅಗತ್ಯವಿಲ್ಲ ಎಂದು ಕಿಮ್ಸ್ ವೈದ್ಯಾಧಿಕಾರಿಗಳು ಈ ನಾಲ್ವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದಾರೆ. 

ಕಳೆದ ಹದಿನೈದು ದಿನಗಳ ಹಿಂದೆ ದುಬೈದಿಂದ ಹುಬ್ಬಳ್ಳಿ ಮೂಲದ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಆಗಮಿಸಿದ್ದರು. ಇವರೆಲ್ಲರೂ ಪ್ರಯಾಣಿಸಿದ್ದ ವಿಮಾನದಲ್ಲೇ ಹೈದ್ರಾಬಾದ್ ಮೂಲದ ಕೊರೋನಾ ಪೀಡಿತ ವ್ಯಕ್ತಿ ಪ್ರಯಾಣಿಸಿದ್ದ. ಇವರೆಲ್ಲರೂ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದರು. ಈ ನಡುವೆ ಇದೀಗ ಸ್ವಲ್ಪ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಹಿನ್ನೆಲೆ ನಾಲ್ವರು ಬುಧವಾರ ಸಂಜೆ ವೇಳೆ ಕಿಮ್ಸ್‌ಗೆ ದಾಖಲಾಗಿದ್ದರು. ತಕ್ಷಣವೇ ಕೊರೋನಾ ಸಂಬಂಧ ತೆರೆಯಲಾದ ವಿಶೇಷ ನಿಗಾ ಘಟಕದಲ್ಲಿ ಇವರನ್ನು ತಪಾಸಣೆ ಮಾಡಲಾಯಿತು. ಕೊರೋನಾದ ಯಾವುದೇ ಲಕ್ಷಣಗಳು ಈ ನಾಲ್ವರಿಗೂ ಕಂಡುಬಂದಿಲ್ಲ. ಈ ಕಾರಣದಿಂದ ಬುಧವಾರ ರಾತ್ರಿಯೇ ಇವರೆಲ್ಲರನ್ನು ಡಿಸ್ಚಾರ್ಜ್ ಮಾಡಿದ್ದಾರೆ. ಈ ಕುರಿತು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಕೊರೋನಾ ಕುರಿತಂತೆ ನಾಲ್ವರನ್ನು ತಪಾಸಣೆಗೆ ಒಳಪಡಿಸಿದ್ದೇವೆ. ಆದರೆ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.
 

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ