ದಟ್ಟ ಟ್ರಾಫಿಕ್‌ನಲ್ಲೂ ಕುಕ್ಕೆಯಿಂದ 4.5 ತಾಸಲ್ಲಿ ಬೆಂಗ್ಳೂರು ತಲುಪಿದ ಆ್ಯಂಬುಲೆನ್ಸ್‌!

By Kannadaprabha News  |  First Published Mar 6, 2020, 8:17 AM IST

ಮಂಗಳೂರು, ಶಿವಮೊಗ್ಗ, ಮೈಸೂರಿಂದ ಈ ಹಿಂದೆ ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ಆ್ಯಂಬುಲೆನ್ಸ್‌ ತಲುಪಿಸಿದ್ದು ಸುದ್ದಿಯಾಗಿತ್ತು. ಇದೀಗ ದಕ್ಷಿಣ ಕನ್ನಡದ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ರೋಗಿಯೊಬ್ಬರನ್ನು ಝೀರೊ ಟ್ರಾಫಿಕ್‌ ನೆರವು ಪಡೆಯದೇ ಕೇವಲ ನಾಲ್ಕುವರೆ ಗಂಟೆಯಲ್ಲೇ ಆ್ಯಂಬುಲೆನ್ಸ್‌ನಲ್ಲಿ ಕರೆ ತಂದಿರುವ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.


ಮಂಗಳೂರು(ಮಾ.06): ಮಂಗಳೂರು, ಶಿವಮೊಗ್ಗ, ಮೈಸೂರಿಂದ ಈ ಹಿಂದೆ ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ಆ್ಯಂಬುಲೆನ್ಸ್‌ ತಲುಪಿಸಿದ್ದು ಸುದ್ದಿಯಾಗಿತ್ತು. ಇದೀಗ ದಕ್ಷಿಣ ಕನ್ನಡದ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ರೋಗಿಯೊಬ್ಬರನ್ನು ಝೀರೊ ಟ್ರಾಫಿಕ್‌ ನೆರವು ಪಡೆಯದೇ ಕೇವಲ ನಾಲ್ಕುವರೆ ಗಂಟೆಯಲ್ಲೇ ಆ್ಯಂಬುಲೆನ್ಸ್‌ನಲ್ಲಿ ಕರೆ ತಂದಿರುವ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಸಕಾಲದಲ್ಲಿ ರೋಗಿಯನ್ನು ಪಂಜದ ಆ್ಯಂಬುಲೆನ್ಸ್‌ ಚಾಲಕ ಪದ್ಮ​ಕು​ಮಾರ್‌ ನಾಯ​ರ್‌​ಕೆರೆ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ನಾಲ್ಕು ದಿನಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರೊಬ್ಬರಿಗೆ ರಕ್ತದೊತ್ತಡ ಕಡಿಮೆಯಾಗಿ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದ ಹಿನ್ನೆಲೆಯಲ್ಲಿ ತಕ್ಷಣವೇ ಸುಬ್ರಹ್ಮಣ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Latest Videos

undefined

ಹೃದಯ ಚಿಕಿತ್ಸೆ, 40 ದಿನದ ಹಸುಗೂಸಿಗೆ ಮಂಗಳೂರಿಂದ- ಬೆಂಗಳೂರಿಗೆ ಝೀರೋ ಟ್ರಾಫಿಕ್

ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಅಥವಾ ಬೆಂಗಳೂರಿನ ಆಸ್ಪತ್ರೆ ಹೋಗಲೇಬೇಕಾದ ಅನಿವಾರ್ಯತೆ ಉಂಟಾಯಿತು. ರೋಗಿಯ ಕುಟುಂಬಸ್ಥರ ಬೇಡಿಕೆಯಂತೆ ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್‌ ಆಸ್ಪತ್ರೆಗೆ ಸಾಗಿಸಲು ನಿರ್ಧರಿಸಲಾಯಿತು. ರಾತ್ರಿ 8 ಗಂಟೆಗೆ ಸುಬ್ರಹ್ಮಣ್ಯ ಬಿಟ್ಟಆ್ಯಂಬು​ಲೆನ್ಸ್‌ ಮಧ್ಯರಾತ್ರಿ 12.25ಕ್ಕೆ ಬೆಂಗಳೂರು ತಲುಪಿತು.

ಸಾಮಾನ್ಯವಾಗಿ ಮಂಗಳೂರು- ಬೆಂಗಳೂರು ಸಂಪರ್ಕಿಸುವ ಅತ್ಯಂತ ಹೆಚ್ಚು ವಾಹನ ದಟ್ಟಣೆ ಹೊಂದಿರುವ ರಾ.ಹೆ. ಹೆದ್ದಾರಿಯಲ್ಲಿ ಸುಬ್ರಹ್ಮಣ್ಯದಿಂದ 318 ಕಿ.ಮೀ. ದೂರದಲ್ಲಿರುವ ಬೆಂಗಳೂರು ತಲುಪಲು 7 ಗಂಟೆ ಬೇಕು. ಹೀಗಿದ್ದರೂ ಆ್ಯಂಬುಲೆನ್ಸ್‌ ಕೇವಲ 4.30 ಗಂಟೆಗಳಲ್ಲಿ ಸುರ​ಕ್ಷಿ​ತ​ವಾಗಿ ಬೆಂಗಳೂರು ತಲುಪಿರುವುದು ಈಗ ಗಮನ ಸೆಳೆ​ದಿ​ದೆ.

click me!