ಕೊರೋನಾ ಭೀತಿ: ಕೇರಳ-ಕರ್ನಾಟಕ ಬಾರ್ಡರ್‌ನಲ್ಲಿ ದಿನಪೂರ್ತಿ ತಪಾಸಣೆ

By Kannadaprabha News  |  First Published Mar 20, 2020, 10:16 AM IST

ಕೇರಳ- ಕರ್ನಾಟಕ ಗಡಿಭಾಗ ತಲಪಾಡಿಯಲ್ಲಿ ಕಳೆದ ಮೂರು ದಿನಗಳಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೆಶನದಂತೆ ನಡೆಸಲಾಗುತ್ತಿರುವ ತಪಾಸಣೆ 24 ಗಂಟೆಯೂ ನಡೆಯುತ್ತಿದೆ.


ಮಂಗಳೂರು[ಮಾ.20]: ಕೇರಳ- ಕರ್ನಾಟಕ ಗಡಿಭಾಗ ತಲಪಾಡಿಯಲ್ಲಿ ಕಳೆದ ಮೂರು ದಿನಗಳಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೆಶನದಂತೆ ನಡೆಸಲಾಗುತ್ತಿರುವ ತಪಾಸಣೆ 24 ಗಂಟೆಯೂ ನಡೆಯುತ್ತಿದೆ. ರಾಷ್ಟ್ರೀಯ ಬಲ ಸ್ವಾಸ್ಥ್ಯ ಕಾರ್ಯಕ್ರಮ್‌ (ಆರ್‌ಬಿಎಸ್‌ ಕೆ) 10 ಮಂದಿ ವೈದ್ಯಾಧಿಕಾರಿಗಳು ನಿರಂತರ ತಪಾಸಣೆಯಲ್ಲಿ ಭಾಗಿಯಾಗಿದ್ದಾರೆ.

ತಲಪಾಡಿ ಟೋಲ್‌ ಗೇಟ್‌ ಸಮೀಪ ನಿಂತಿರುವ ವೈದ್ಯಾಧಿಕಾರಿಗಳ ತಂಡ ಕೇರಳದಿಂದ ಬರುವ ಮತ್ತು ಹೋಗುವ ವಾಹನಗಳಲ್ಲಿರುವ ಪ್ರಯಾಣಿಕರನ್ನು ತಪಾಸಣೆ ನಡೆಸುತ್ತಿದೆ. ಪ್ರತಿಯೊಂದು ವಾಹನಗಳಲ್ಲಿರುವ ಮಂದಿಯನ್ನು ನಿಲ್ಲಿಸಿ ಉಷ್ಣಾಂಶ ಪರಿಶೀಲಿಸುವ ಯಂತ್ರವನ್ನು ಮುಖಕ್ಕೆ ಇಟ್ಟು ಪತ್ತೆಹಚ್ಚುವ ಕಾರ್ಯ ಮಾಡಲಾಗುತ್ತಿದೆ. ಜ್ವರ, ಗಂಟಲಿನ ಸೋಂಕು ಇರುವವರನ್ನು ಕೋಟೆಕಾರು, ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲವಾದಲ್ಲಿ ವೆನ್ಲಾಕ್‌ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ.

Latest Videos

undefined

ಮೂವರನ್ನು ಕಳುಹಿಸಿದ್ದೇವೆ:

ಕಳೆದ ನಾಲ್ಕು ದಿನಗಳಿಂದ ತಲಪಾಡಿ ಟೋಲ್‌ಗೇಟ್‌ ಬಳಿ ತಪಾಸಣೆ ನಡೆಸಲಾಗುತ್ತಿದೆ. ದೇಹದಲ್ಲಿ ಉಷ್ಣಾಂಶವಿದ್ದ ಮೂವರನ್ನು ಕೋಟೆಕಾರು ಆಸ್ಪತ್ರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಮೂವರಲ್ಲಿಯೂ ನೆಗೆಟಿವ್‌ ಕಂಡುಬಂದ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಕೋವಿಡ್‌ -19 ಸ್ಕ್ರೀನಿಂಗ್‌ ಕಾರ್ಯದಲ್ಲಿ 10 ಮಂದಿ ಸಿಬ್ಬಂದಿ ಪಾಲ್ಗೊಳ್ಳುತ್ತಿದ್ದೇವೆ.

ಕೊರೋನಾ ಭೀತಿ: ಪಬ್ಲಿಕ್‌ನಲ್ಲಿ ಸೀನಿದ್ದಕ್ಕೆ ಬಿತ್ತು ಗೂಸಾ..!

ಜ್ವರ, ಗಂಟಲು ಸೋಂಕು, ಶೀತ ಕಂಡುಬಂದಲ್ಲಿ ರಾಷ್ಟ್ರೀಯ ಹೆದ್ದಾರಿಯ ಆ್ಯಂಬುಲೆಸ್ಸ್‌ ಮೂಲಕ ಆಸ್ಪತ್ರೆಗೆ ಕಳುಹಿಸುತ್ತಿದ್ದೇವೆ. ಕಫ ಮತ್ತು ಶೀತ ಇದ್ದವರ ಕುರಿತು ಮೊಬೈಲ್‌ ಸಂಖ್ಯೆ ಹಾಗೂ ವಿಳಾಸವನ್ನು ಪಡೆಯಲಾಗುತ್ತಿದೆ. ಸಂಜೆ 6ರ ಬಳಿಕ ಪುರುಷ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ತಮ್ಮ ಸುರಕ್ಷತೆಗೆ ಗ್ಲೌಸ್‌, ಸರ್ಜಿಕಲ್‌ ಮಾಸ್ಕ್‌ನ್ನು ಆರೋಗ್ಯ ಇಲಾಖೆ ನೀಡಿದೆ ಎಂದು ರಾಷ್ಟ್ರೀಯ ಬಲ ಸ್ವಾಸ್ಥ್ಯ ಕಾರ್ಯಕ್ರಮ್‌ ವೈದ್ಯಕೀಯ ಅಧಿಕಾರಿ ಡಾ. ಶಶಿರೇಖಾ ಹೇಳಿದ್ದಾರೆ.

click me!