ಮಂಗಳವಾರ ಮೃತಪಟ್ಟವರಲ್ಲಿ ಬಳ್ಳಾರಿಯ ಕೋಳೂರಿನ 31 ವರ್ಷದ ಮಹಿಳೆ, ಹೊಸಪೇಟೆಯ ಎನ್‌ಸಿ ಕಾಲೋನಿಯ 63 ವರ್ಷದ ಪುರುಷ, ಬಳ್ಳಾರಿಯ ಸಾಲಗೊಂಡ ಪ್ರದೇಶದ 55 ವರ್ಷದ ಮಹಿಳೆ ಹಾಗೂ ಕೆಎಚ್‌ಬಿ ಕಾಲನಿಯ 58 ವರ್ಷದ ವೃದ್ಧೆ| ಇನ್ನಿಬ್ಬರ ಮೃತರ ಮಾಹಿತಿಯನ್ನು ಜಿಲ್ಲಾಡಳಿತ ನೀಡಿಲ್ಲ|
ಬಳ್ಳಾರಿ(ಜು. 01): ಗಣಿನಾಡು ಬಳ್ಳಾರಿಯಲ್ಲಿ ಕೊರೋನಾ ಮರಣ ಮೃದಂಗ ಬಾರಿಸುತ್ತಿದ್ದು, ಮಂಗಳವಾರ ಮತ್ತೆ ಆರು ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಕಳೆದ ಕಳೆದ ನಾಲ್ಕು ದಿನಗಳಲ್ಲಿ 20 ಮಂದಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 29ಕ್ಕೇರಿದೆ.
ಮಂಗಳವಾರ ಮೃತಪಟ್ಟವರಲ್ಲಿ ಬಳ್ಳಾರಿಯ ಕೋಳೂರಿನ 31 ವರ್ಷದ ಮಹಿಳೆ, ಹೊಸಪೇಟೆಯ ಎನ್‌ಸಿ ಕಾಲೋನಿಯ 63 ವರ್ಷದ ಪುರುಷ, ಬಳ್ಳಾರಿಯ ಸಾಲಗೊಂಡ ಪ್ರದೇಶದ 55 ವರ್ಷದ ಮಹಿಳೆ ಹಾಗೂ ಕೆಎಚ್‌ಬಿ ಕಾಲನಿಯ 58 ವರ್ಷದ ವೃದ್ಧೆಯಾಗಿದ್ದು, ಇನ್ನಿಬ್ಬರು ಮೃತರ ಮಾಹಿತಿಯನ್ನು ಜಿಲ್ಲಾಡಳಿತ ನೀಡಿಲ್ಲ.
ಸೋಂಕಿತರ ಶವ ಗುಂಡಿಗೆಸೆದರು: ಒಂದೇ ಗುಂಡಿಗೆ 8 ಶವ!
ಮೃತರೆಲ್ಲರೂ ಮಧುಮೇಹ, ಅಧಿಕ ರಕ್ತದೊತ್ತಡ, ಶ್ವಾಸಕೋಶ ತೊಂದರೆ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.