ಹೆರಿಗೆ ಆಸ್ಪತ್ರೆಗೆ ಗರ್ಭಿಣಿಯರು ಚಿಕಿತ್ಸೆಗೆಂದು ಹೋದರೆ, ಸರಿಯಾಗಿ ಮಾತನಾಡದೇ, ಕಿಂಚಿತ್ತೂ ಪರಿಶೀಲಿಸದೇ ನೇರವಾಗಿ ಜಿಲ್ಲಾಸ್ಪತ್ರೆಗೆ ಒತ್ತಾಯಪೂರ್ವಕವಾಗಿ ರವಾನಿಸುತ್ತಿದ್ದಾರೆ| ಇನ್ನು ಜಿಮ್ಸ್ ಆಸ್ಪತ್ರೆಗೆ ಹೋಗುವುದು ಗರ್ಭಿಣಿಯರಿಗೆ ಅನಾನುಕೂಲವಾಗಿದೆ. ಈ ಹಿನ್ನೆಲೆಯಲ್ಲಿ ಹೆರಿಗೆ ಆಸ್ಪತ್ರೆಯಲ್ಲಿಯೇ ಗರ್ಭಿಣಿಯರಿಗೆ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದ ಆಶ್ರಯ ಹಿತರಕ್ಷಣಾ ಸೇವಾ ಸಮಿತಿ|
ಗದಗ(ಜು. 01): ನಗರದಲ್ಲಿರುವ ಹೆರಿಗೆ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಮಾಡಲು ಹೊರಟಿರುವುದು ಸರಿಯಾದ ಕ್ರಮವಲ್ಲ ಎಂದು ಆಶ್ರಯ ಹಿತರಕ್ಷಣಾ ಸೇವಾ ಸಮಿತಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹೆರಿಗೆ ಆಸ್ಪತ್ರೆಗೆ ಗರ್ಭಿಣಿಯರು ಚಿಕಿತ್ಸೆಗೆಂದು ಹೋದರೆ, ಸರಿಯಾಗಿ ಮಾತನಾಡದೇ, ಕಿಂಚಿತ್ತೂ ಪರಿಶೀಲಿಸದೇ ನೇರವಾಗಿ ಜಿಲ್ಲಾಸ್ಪತ್ರೆಗೆ ಒತ್ತಾಯಪೂರ್ವಕವಾಗಿ ರವಾನಿಸುತ್ತಿದ್ದಾರೆ. ಇನ್ನು ಜಿಮ್ಸ್ ಆಸ್ಪತ್ರೆಗೆ ಹೋಗುವುದು ಗರ್ಭಿಣಿಯರಿಗೆ ಅನಾನುಕೂಲವಾಗಿದೆ.ಈ ಹಿನ್ನೆಲೆಯಲ್ಲಿ ಹೆರಿಗೆ ಆಸ್ಪತ್ರೆಯಲ್ಲಿಯೇ ಗರ್ಭಿಣಿಯರಿಗೆ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದ್ದಾರೆ.
ಮುಂಡರಗಿ: ಹಣ ಕೊಡುವ ವಿಚಾರ, ಟೋಲ್‌ನಾಕಾ ಸಿಬ್ಬಂದಿ ಜೊತೆ ವಾಹನ ಸವಾರರ ಮಾರಾಮಾರಿ
ಇನ್ನು ಹೆರಿಗೆ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿಸುವ ಯೋಚನೆಯನ್ನು ಬಿಡಬೇಕು ಎಂದು ಸಮಿತಿ ಪದಾಧಿಕಾರಿಗಳಾದ ಶಾಕೀರ ಅಹ್ಮದ ಕಾತರಕಿ, ಶರಣಪ್ಪ ಭಜಂತ್ರಿ, ಮಂಜುನಾಥ ಬಂಕದಮನಿ, ಖಮರಅಲಿ ಬೇಗ, ರಮೇಶ ಕಬಾಡಿ, ರಾಜು ಭಜಂತ್ರಿ, ದಾವಲಸಾಬ ತಟ್ಟಿಮನಿ, ಮಲಿಕ ಮದ್ಲಿವಾಲೆ, ರವಿ ಹರಿಜನ ಆಗ್ರಹಿಸಿದ್ದಾರೆ.