ಗದಗ: ಕೊರೋನಾ ಸೋಂಕಿತನ ನರಳಾಟ ವಿಡಿಯೋ ವೈರಲ್‌

By Kannadaprabha NewsFirst Published Jul 8, 2020, 9:49 AM IST
Highlights

ಸಹೋದರ ಅನುಭಸುತ್ತಿರುವ ಯಾತನೆ ಕುರಿತು ಹೇಳಿಕೊಂಡ ಮಹಿಳೆ| ಗದಗ ಜಿಲ್ಲೆಯ ನರಗುಂದ ಪಟ್ಟಣದ ಗಾಡಿ ಓಣಿಯ ನಿವಾಸಿ ಕಂಡಕ್ಟರ್ 39 ವರ್ಷದ ಪಿ-15320 ಕೆಮ್ಮು, ಜ್ವರ, ನೆಗಡಿಯಿಂದ ಬಳಲುತ್ತಿದ್ದರು, ಈ ಹಿನ್ನೆಲೆಯಲ್ಲಿ ಕೊರೋನಾ ತಪಾಸಣೆಗೆ ಒಳಪಡಿಸಿದಾಗ ಜುಲೈ 1 ರಂದು ಸೋಂಕು ಖಚಿತ|

ಗದಗ(ಜು.08): ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಓರ್ವ ಕೊರೋನಾ ಸೋಂಕಿತ ತೀವ್ರ ಉಸಿರಾಟದ ತೊಂದರೆಯಿಂದ ನರಳಾಡುತ್ತಿದ್ದು, ಈ ಕುರಿತು ಅಂಗನವಾಡಿ ಕಾರ್ಯಕರ್ತೆಯೂ ಆಗಿರುವ ಸೋಂಕಿತನ ಸಹೋದರಿ (36 ವರ್ಷದ ಪಿ-18277) ತನ್ನ ಅಣ್ಣ ಅನುಭವಿಸುತ್ತಿರುವ ಯಾತನೆಯ ಕುರಿತು ಹೇಳಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಜಿಲ್ಲೆಯ ನರಗುಂದ ಪಟ್ಟಣದ ಗಾಡಿ ಓಣಿಯ ನಿವಾಸಿ ಕಂಡಕ್ಟರ್ 39 ವರ್ಷದ ಪಿ-15320 ಕೆಮ್ಮು, ಜ್ವರ, ನೆಗಡಿಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೊರೋನಾ ತಪಾಸಣೆಗೆ ಒಳಪಡಿಸಿದಾಗ ಜುಲೈ 1 ರಂದು ಸೋಂಕು ಖಚಿತವಾಗಿದ್ದು, ತಕ್ಷಣ ಚಿಕಿತ್ಸೆಗೆ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಳೆದ ಮೂರು ದಿನದಿಂದ ಉಸಿರಾಟದ ತೊಂದರೆಯಿಂದ ತೀವ್ರ ಬಳಲುತ್ತಿದ್ದಾರೆ. ಜಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜೆನ್ ಕೊರತೆಯಿಂದಾಗಿ ಸೂಕ್ತ ಚಿಕಿತ್ಸೆ ಸಿಗದೇ ಮಾತನಾಡಲೂ ಆಗದೇ ಗೋಳಾಡುತ್ತಿದ್ದಾರೆ ಎಂದು ಸಹೋಧರಿ ತನ್ನ ಅಣ್ಣನ ನೋವನ್ನು ಹಂಚಿಕೊಂಡಿದ್ದು, ಆಕ್ಸಿಜನ್ ವ್ಯವಸ್ಥೆ ಮಾಡುವಂತೆ ವೈದ್ಯರಲ್ಲಿ ಮನವಿ ಮಾಡಿಕೊಂಡಿದ್ದಾಳೆ. 

ಅಮ್ಮನಿಗೆ ಕೊರೊನಾ, ಮಗು ICU ನಲ್ಲಿ; ಮನಕಲಕುತ್ತಿದೆ ಬಾಣಂತಿಯ ಮೂಕರೋದನೆ

ಈ ಸೋಂಕಿತನ ಮೂರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಜನರಿಗೆ ಸೋಂಕು ದೃಡಪಟ್ಟಿದ್ದು, ಕೊರೋನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆ ಕೊರೋನಾ ಯಾವುದೇ ಅಂಗನವಾಡಿ, ಆಶಾ ಕಾರ್ಯಕರ್ತೆಯವರು ಭಯ ಪಡುವ ಅವಶ್ಯಕತೆ ಇಲ್ಲ. ಸೂಕ್ತ ಸಂದರ್ಭದಲ್ಲಿ ವೈದ್ಯಕೀಯ ಸೇವೆ ದೊರೆತಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ, 14 ದಿನದಲ್ಲಿ ಕಾಯಿಲೆ ವಾಸಿಯಾಗುತ್ತದೆ. ಹಾಗಂತಾ ಕೊರೋನಾ ಬಗ್ಗೆ ನಿರ್ಲಕ್ಷ ಬೇಡ ಎಂದು ಮನವಿಯನ್ನೂ ಸಹ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
 

click me!