ದಾವಣಗೆರೆಯಲ್ಲಿ ಕೊರೋನಾಗೆ ಮತ್ತೊಂದು ಬಲಿ, 6 ಪಾಸಿಟಿವ್‌..!

By Kannadaprabha News  |  First Published Jul 8, 2020, 9:25 AM IST

ನೆರೆಯ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಮಾರುತಿ ನಗರ 6ನೇ ಕ್ರಾಸ್‌ ವಾಸಿಯಾದ 55 ವರ್ಷದ ಪುರುಷ(ಪಿ-25830)ನು ತೀವ್ರ ಉಸಿರಾಟ(ಎಸ್‌ಎಆರ್‌ಐ) ಸಮಸ್ಯೆ, ಕೆಮ್ಮು, ಹೃದಯ ಬೇನೆ ಸಮಸ್ಯೆಯಿಂದ ಬಳಲುತ್ತಿದ್ದರು. ಇಲ್ಲಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ದಾವಣಗೆರೆ(ಜು.08): ಹಾವೇರಿ ಜಿಲ್ಲೆ ಮೂಲದ ವ್ಯಕ್ತಿಯೊಬ್ಬ ಕೊರೋನಾ ಸೋಂಕಿಗೆ ಬಲಿಯಾಗುವುದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, 6 ಹೊಸ ಪಾಸಿಟಿವ್‌ ದೃಢಪಟ್ಟಿದ್ದು, ಸಕ್ರಿಯ ಕೇಸ್‌ಗಳ ಸಂಖ್ಯೆ 41ಕ್ಕೆ ಇಳಿಕೆಯಾಗಿದೆ.

ನೆರೆಯ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಮಾರುತಿ ನಗರ 6ನೇ ಕ್ರಾಸ್‌ ವಾಸಿಯಾದ 55 ವರ್ಷದ ಪುರುಷ(ಪಿ-25830)ನು ತೀವ್ರ ಉಸಿರಾಟ(ಎಸ್‌ಎಆರ್‌ಐ) ಸಮಸ್ಯೆ, ಕೆಮ್ಮು, ಹೃದಯ ಬೇನೆ ಸಮಸ್ಯೆಯಿಂದ ಬಳಲುತ್ತಿದ್ದರು. ಇಲ್ಲಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

Tap to resize

Latest Videos

undefined

ಇಲ್ಲಿನ ಬಾಷಾ ನಗರದ 65 ವರ್ಷದ ಪುರುಷ(ಪಿ-25825), ಚೌಕಿಪೇಟೆಯ ಹೊಸ ಮಸೀದಿ ಸಮೀಪದ 46 ವರ್ಷದ ಪುರುಷ(25826) ಶೀತ ಜ್ವರ(ಐಎಲ್‌ಐ)ದಿಂದ ಸೋಂಕಿಗೆ ತುತ್ತಾಗಿದ್ದಾರೆ. ನಿಟುವಳ್ಳಿಯ ಎಚ್ಕೆಆರ್‌ ಸರ್ಕಲ್‌ನ 3ನೇ ಕ್ರಾಸ್‌ನ 43 ವರ್ಷದ ಪುರುಷ(25827) ರಾರ‍ಯಂಡಮ್‌ ಸ್ಯಾಂಪಲ್‌ ಸಂಪರ್ಕದ ವೇಳೆ ದೃಢಪಟ್ಟಿದ್ದು, ಸೋಂಕಿನ ಪತ್ತೆ ಕಾರ್ಯ ಸಾಗಿದೆ.

ಚಿತ್ರದುರ್ಗದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್

ತಮಿಳುನಾಡು ಪ್ರವಾಸ ಮಾಡಿದ್ದ ಚನ್ನಗಿರಿ ತಾ. ನಲ್ಲೂರಿನ 62 ವರ್ಷದ ಮಹಿಳೆ(25828), ದಾವಣಗೆರೆ ನಿಟುವಳ್ಳಿಯ 48 ವರ್ಷದ ಪುರುಷ(25829)ನು ತೀವ್ರ ಉಸಿರಾಟ ಸಮಸ್ಯೆ(ಎಸ್‌ಎಆರ್‌ಐ)ಯಿಂದ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿತರಿಗೆ ಇಲ್ಲಿನ ಜಿಲ್ಲಾ ನಿಗದಿತ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 365 ಪಾಸಿಟಿವ್‌ ಪ್ರಕರಣ ದಾಖಲಾಗಿವೆ. ಈ ಪೈಕಿ 13 ಜನರು ಸಾವನ್ನಪ್ಪಿದ್ದಾರೆ. 311 ಜನರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 41 ಸಕ್ರಿಯ ಕೇಸ್‌ಗಳ ರೋಗಿಗಳಿಗೆ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಮಂಗಳವಾರ ಯಾವುದೇ ರೋಗಿ ಬಿಡುಗಡೆಯಾಗಿಲ್ಲ.
 

click me!