ಬಳ್ಳಾರಿ: ಮುದ್ದಾದ ಮಗುವಿಗೆ ಜನ್ಮ ನೀಡಿದ ಕೊರೋನಾ ಸೋಂಕಿತೆ

Kannadaprabha News   | Asianet News
Published : Jul 19, 2020, 10:46 AM IST
ಬಳ್ಳಾರಿ: ಮುದ್ದಾದ ಮಗುವಿಗೆ ಜನ್ಮ ನೀಡಿದ ಕೊರೋನಾ ಸೋಂಕಿತೆ

ಸಾರಾಂಶ

ಕೋವಿಡ್‌ ಆಸ್ಪತ್ರೆಯಲ್ಲಿ ಜನ್ಮನೀಡಿದ ತಾಯಿ| ಮಗು-ತಾಯಿ ಸುರಕ್ಷಿತವಾಗಿದ್ದಾರೆ-ವೈದ್ಯರ ಹೇಳಿಕೆ| ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಹೆರಿಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಅವರ ಆರೋಗ್ಯದ ಕಡೆ ವಿಶೇಷ ನಿಗಾ ಇರಿಸಲಾಗಿತ್ತು|

ಬಳ್ಳಾರಿ(ಜು.19): ಇಲ್ಲಿನ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ಮಹಿಳೆಯೊಬ್ಬರು ಗಂಡು ಮಗುವಿಗೆ ಶನಿವಾರ ಜನ್ಮ ನೀಡಿದ್ದಾರೆ.

ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಹೆರಿಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಅವರ ಆರೋಗ್ಯದ ಕಡೆ ವಿಶೇಷ ನಿಗಾ ಇರಿಸಲಾಗಿತ್ತು. ಶನಿವಾರ ಬೆಳಿಗ್ಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಯಿತು. ತಾಯಿ-ಮಗು ಆರೋಗ್ಯವಾಗಿದ್ದಾರೆ. ಮಗು 2.7 ಕೆ.ಜಿ ತೂಕವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಸದ್ಯಕ್ಕಿಲ್ಲ ಲಾಕ್‌ಡೌನ್‌: ಸಚಿವ ಆನಂದಸಿಂಗ್‌

ಸೋಂಕಿತ ಮಹಿಳೆಯ ಹೆರಿಗೆ ಮಾಡಿಸುವುದು ದೊಡ್ಡ ಸವಾಲಿನ ಕೆಲಸ. ಹೆರಿಗೆ ದಿನಗಳು ಸಮೀಪಿಸುತ್ತಿರುವುದರಿಂದ ಅವರ ಆರೈಕೆಯ ಕಡೆ ಗಮನ ಹರಿಸಲಾಗಿತ್ತು. ಶನಿವಾರ ಮಹಿಳೆಗೆ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದ್ದಂತೆಯೇ ಹೆರಿಗೆಗೆ ಸಿದ್ಧತೆ ಮಾಡಿಕೊಳ್ಳಲಾಯಿತು. ಆಸ್ಪತ್ರೆಯಲ್ಲಿ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸರೆಡ್ಡಿ ತಿಳಿಸಿದ್ದಾರೆ.
 

PREV
click me!

Recommended Stories

ಆಧುನಿಕ ಆರೋಗ್ಯ ರಕ್ಷಣಾ ವ್ಯವಸ್ಥೆಗೆ ಎಐ ಬಳಕೆ: ಸಚಿವ ಡಾ. ಶರಣ ಪ್ರಕಾಶ್‌ ಪಾಟೀಲ್‌
ಸಚಿವ ಸಂಪುಟ ಪುನರ್ ರಚಿಸಿ ಹೊಸಬರಿಗೆ ಅವಕಾಶ ಕೇಳುವುದು ತಪ್ಪಲ್ಲ: ಶಾಸಕ ಎ.ಎಸ್. ಪೊನ್ನಣ್ಣ