ಕೊಪ್ಪಳ: ಕೊರೋನಾ ಆಸ್ಪತ್ರೆ ವಾರ್ಡ್‌ನಲ್ಲೇ ರೋಗಿ ನೇಣು ಬಿಗಿದು ಆತ್ಮಹತ್ಯೆ

By Kannadaprabha News  |  First Published Sep 19, 2020, 12:39 PM IST

ಆಸ್ಪತ್ರೆಯ ಬಾತ್‌ ರೂಮ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ರೋಗಿ| ಕೊಪ್ಪಳ ನಗರದ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ನಡೆದ ಘಟನೆ| ಈ ಸಂಬಂಧ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು|


ಕೊಪ್ಪಳ(ಸೆ.19): ಕೋವಿಡ್‌-19 ಆತಂಕದಿಂದ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಶುಕ್ರವಾರ ಕೊಪ್ಪಳ ನಗರದ ಕೋವಿಡ್‌ ಆಸ್ಪತ್ರೆಯ ಬಾತ್‌ ರೂಮ್‌ನಲ್ಲಿ ನೇಣು ಬಿಗಿದುಕೊಂಡು ರೋಗಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಯಲಬುರ್ಗಾ ತಾಲೂಕಿನ ಚಿಕ್ಕಬಿಡನಾಳ ಗ್ರಾಮದ ಮಾರುತಿ ಕುಕನೂರು(26) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ. ಇವರಿಗೆ ಕೋವಿಡ್‌-19 ಪಾಸಿಟಿವ್‌ ಬಂದಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್‌ನಿಂದಾ​ಗಿ ಎದೆಗುಂದಿದ್ದ ಅವರು ವಿಚಿತ್ರ ವರ್ತನೆ ಮಾಡುತ್ತಿದ್ದರು ಎನ್ನಲಾಗಿದೆ. 

Tap to resize

Latest Videos

ಕನ್ನಡಪ್ರಭ-ಸುವರ್ಣ ನ್ಯೂಸ್.ಕಾಂ ವರದಿ ಫಲ​ಶೃ​ತಿ: ಅಕ್ರಮ ಗಣಿ​ಗಾ​ರಿಕೆ ಪ್ರದೇ​ಶದ ಮೇಲೆ ಅಧಿ​ಕಾ​ರಿ​ಗಳ ದಾಳಿ

ಇದರಿಂದ ಡಿಪ್ರೆಶನ್‌ಗೆ ಹೋಗಿ, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯ ನಂತರವೇ ಪ್ರಕರಣ ಬೆಳಕಿಗೆ ಬರಬೇಕಾಗಿದೆ. 
 

click me!