ರಾಮನಗರ: ಮಾಜಿ ಶಾಸಕ ಬಾಲಕೃಷ್ಣ ಆಪ್ತ ಸಹಾಯಕ ಸೇರಿ ಮನೆ ಕೆಲಸದವರಿಗೆ ಕೊರೋನಾ ನೆಗೆಟಿವ್‌

Suvarna News   | Asianet News
Published : Jun 26, 2020, 10:47 AM ISTUpdated : Jun 26, 2020, 10:56 AM IST
ರಾಮನಗರ: ಮಾಜಿ ಶಾಸಕ ಬಾಲಕೃಷ್ಣ ಆಪ್ತ ಸಹಾಯಕ ಸೇರಿ ಮನೆ ಕೆಲಸದವರಿಗೆ ಕೊರೋನಾ ನೆಗೆಟಿವ್‌

ಸಾರಾಂಶ

ನಾನೇ ಖುದ್ದಾಗಿ ಖಾಸಗಿ ಪರೀಕ್ಷಾ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿದ್ದೇನೆ| ಅವರ ಪರೀಕ್ಷಾ ವರದಿ ನೆಗಟಿವ್ ಬಂದಿರುವುದು ಸಂತೋಷದ ವಿಚಾರ| ಇವರೆಲ್ಲರೂ ಕೂಡ 15 ದಿನಗಳ ಕಾಲ ಸೆಲ್ಫ್ ಕ್ವಾರಂಟೈನ್‌ನಲ್ಲಿ ಇರುತ್ತಾರೆ| ನನ್ನ ಹಿತೈಷಿಗಳ ಆರೈಕೆಯಿಂದ ಎಲ್ಲರೂ ಆರೋಗ್ಯವಾಗಿದ್ದಾರೆ, ಯಾರು ಆತಂಕಪಡುವುದು ಬೇಡ|

ರಾಮನಗರ(ಜೂ.26):  ನನ್ನ ಕುಟುಂಬದಲ್ಲಿ ಕೊರೋನಾ ಸೋಂಕು ಕಂಡು ಬಂದ ಸಂದರ್ಭದಲ್ಲಿ ನನ್ನ ನಿವಾಸದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆಪ್ತ ಸಹಾಯಕ ವೆಂಕಟೇಶ್, ಚಾಲಕರಾದ ಗೋಕುಲ್, ಕುಮಾರ್, ಅರವಿಂದ್, ಮನೆ ಕೆಲಸ ನಿರ್ವಹಿಸುತ್ತಿದ್ದ ಮಂಜುಳಾ, ಕವಿತಾ, ವೀಣಾ ಅವರಿಗೆ ಹಾಗೂ ಅವರ ಕುಟುಂಬದವರಿಗೆ ಕೋವಿಡ್‌ ಟೆಸ್ಟ್‌ ಮಾಡಿಸಿದ್ದು ಅವರಿಗೆಲ್ಲ ನೆಗೆಟಿವ್‌ ವರದಿ ಬಂದಿದೆ ಎಂದು ಜಿಲ್ಲೆಯ ಮಾಗಡಿ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ  ಹೆಚ್‌.ಸಿ. ಬಾಲಕೃಷ್ಣ ಅವರು ಸ್ಪಷ್ಟಪಡಿಸಿದ್ದಾರೆ.

 

ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡು ಅವರು, ನಾನೇ ಖುದ್ದಾಗಿ ಖಾಸಗಿ ಪರೀಕ್ಷಾ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿದ್ದೇನೆ. ಅವರ ಪರೀಕ್ಷಾ ವರದಿ ನೆಗಟಿವ್ ಬಂದಿರುವುದು ಸಂತೋಷದ ವಿಚಾರ. ಇವರೆಲ್ಲರೂ ಕೂಡ 15 ದಿನಗಳ ಕಾಲ ಸೆಲ್ಫ್ ಕ್ವಾರಂಟೈನ್‌ನಲ್ಲಿ ಇರುತ್ತಾರೆ ಎಂದು ಹೇಳಿದ್ದಾರೆ. 

 

ಕರ್ನಾಟಕ ಕಾಂಗ್ರೆಸ್ ಮಾಜಿ ಶಾಸಕರೊಬ್ಬರ ಪುತ್ರಿಗೆ ಕೊರೋನಾ ಸೋಂಕು ದೃಢ

ನನ್ನ ಹಿತೈಷಿಗಳ ಆರೈಕೆಯಿಂದ ಎಲ್ಲರೂ ಆರೋಗ್ಯವಾಗಿದ್ದಾರೆ, ಯಾರು ಆತಂಕಪಡುವುದು ಬೇಡ ಎಂದು ತಮ್ಮಲ್ಲಿ ಈ ವಿಷಯವನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. 

 

ಈ ಹಿಂದೆಯೂ ಕೂಡ ಬಾಲಕೃಷ್ಣ ಅವರು, ತಮ್ಮ ಮಗಳಿಗೆ ಕೊರೋನಾ ಸೋಂಕು ತಗುಲಿದ್ದರ ಬಗ್ಗೆ ಟ್ಟಿಟ್ಟರ್‌ ಮೂಲಕ ಬಹಿರಂಗ ಪಡಿಸಿದ್ದರು. 

 

PREV
click me!

Recommended Stories

ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!
ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!