ನ್ಯಾಯಬೆಲೆ ಆಂಗಡಿಗಳಿಂದ ಅಕ್ಕಿ ಸಂಗ್ರಹ| ಗ್ರಾಹಕರಿಗೆ ಉಚಿತವಾಗಿ ವಿತರಿಸುವ ಅನ್ನಭಾಗ್ಯ ಯೋಜನೆಯ ಅಕ್ಕಿ| ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಕಳ್ಳತನ ಅಕ್ಕಿ ಖರೀದಿಸುವರಿಗೆ ಸಾಗಿಸಲು ಯತ್ನ|
ಗಂಗಾವತಿ(ಜೂ.26): ನಗರದ ಚಂದ್ರಹಾಸ ಚಿತ್ರಮಂದಿರದ ಹತ್ತಿರದ ಮನೆ ಮೇಲೆ ದಾಳಿ ಮಾಡಿದ ಆಹಾರ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ 200 ಪಾಕಿಟ್ ಅಕ್ಕಿಯನ್ನು ಜಪ್ತಿ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಕಿಲ್ಲಾ ಏರಿಯಾ ವಾರ್ಡ್ ನಮ 5 ರಲ್ಲಿ ಪೀರಸಾಬ್ ಎಂಬುವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 25 ಕೆಜಿ ತೂಕದ ಸುಮಾರು 200 ಕ್ಕೂ ಹೆಚ್ಚು ಅಕ್ಕಿ ಪಾಕೆಟ್‌ಗಳನ್ನು ಆಹಾರ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕುಷ್ಟಗಿ: ಯುವಕನಿಗೆ ಕೊರೋನಾ ಸೋಂಕು, ಮಾರುತಿ ನಗರ ಸೀಲ್‌ಡೌನ್
ಬಡವರಿಗೆ ಉಚಿತವಾಗಿ ವಿತರಿಸಲು ಇರುವ ಪಡಿತರ ದಾಸ್ತಾನನ್ನು ಜಪ್ತಿ ಮಾಡಿದ್ದಾರೆ. ಉಪವಿಭಾಗಾಧಿಕಾರಿ ನಾರಾಯಣ ರೆಡ್ಡಿ ಕೊಪ್ಪಳ ಇವರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ದಾಳಿಯಲ್ಲಿ ತಹಸೀಲಾದಾರ ಚಂದ್ರಕಾಂತ, ಆಹಾರ ಇಲಾಖೆಯ ನೀರಿಕ್ಷಕ ಬಗಲಿ ಇದ್ದರು. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.