ಬಳ್ಳಾರಿ: ಮನೆಗೆ ಹಾಲು ಹಾಕುತ್ತಿದ್ದವನಿಗೆ ಕೊರೋನಾ ಸೋಂಕು

By Kannadaprabha News  |  First Published Jun 13, 2020, 9:57 AM IST

45 ವರ್ಷದ ವ್ಯಕ್ತಿ ನಿತ್ಯ ಜಿಂದಾಲ್‌ ನೌಕರರ ಸುಮಾರು 120 ಮನೆಗಳಿಗೆ ಹಾಲು ಹಾಕುತ್ತಿದ್ದ| ನಿತ್ಯ ಬೈಕ್‌ ಮೇಲೆ ತಿಮ್ಮಲಾಪುರದಿಂದ ಜಿಂದಾಲ್‌ಗೆ ಹೋಗಿ ಬರುತ್ತಿದ್ದ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ತಿಮ್ಮಲಾಪುರ ಗ್ರಾಮದ ಸೋಂಕಿತ ವ್ಯಕ್ತಿ| 


ಬಳ್ಳಾರಿ(ಜೂ.13): ಜಿಂದಾಲ್‌ ನೌಕರರ ವಸತಿ ಸಮುಚ್ಚಯ ಇರುವ ವಿವಿ ನಗರ, ವಿದ್ಯಾನಗರ, ಶಂಕರಗುಡ್ಡ ಕಾಲೋನಿಗಳಿಗೆ ನಿತ್ಯ ಹಾಲು ಹಾಕುತ್ತಿದ್ದ ವ್ಯಕ್ತಿಗೆ ಕೊರೋನಾ ಸೋಂಕು ಹರಡಿರುವುದು ದೃಢಪಟ್ಟಿದೆ.

ಕುರುಗೋಡು ತಾಲೂಕಿನ ತಿಮ್ಮಲಾಪುರ ಗ್ರಾಮದ 45 ವರ್ಷದ ವ್ಯಕ್ತಿ ನಿತ್ಯ ಜಿಂದಾಲ್‌ ನೌಕರರ ಸುಮಾರು 120 ಮನೆಗಳಿಗೆ ಹಾಲು ಹಾಕುತ್ತಿದ್ದ. ನಿತ್ಯ ಬೈಕ್‌ ಮೇಲೆ ತಿಮ್ಮಲಾಪುರದಿಂದ ಜಿಂದಾಲ್‌ಗೆ ಹೋಗಿ ಬರುತ್ತಿದ್ದ. ಗುರುವಾರ ರಾತ್ರಿ ಈತನ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿದೆ. ಜ್ವರ ಹಾಗೂ ಗಂಟಲುನೋವು ಕಾಣಿಸಿಕೊಳ್ಳುತ್ತಿದ್ದಂತೆಯೇ ಆರೋಗ್ಯ ತಪಾಸಣೆ ಮಾಡಿಸಿ, ಗಂಟಲುದ್ರವ ಪರೀಕ್ಷೆಗೆ ಕಳಿಸಿದ ಬಳಿಕ ಸೋಂಕು ಇರುವುದು ಖಚಿತವಾಗಿದೆ.

Tap to resize

Latest Videos

ಜಿಂದಾಲ್‌ ಕಾರ್ಖಾನೆ ಸೀಲ್‌ಡೌನ್? ಸುಳಿವು ಬಿಟ್ಟು ಕೊಟ್ಟ ಆನಂದ್‌ ಸಿಂಗ್ 

ಈತನನ್ನು ಕೂಡಲೇ ನಗರದ ಜಿಲ್ಲಾ ಕೊರೋನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈತ ವಾಸವಾಗಿರುವ ತಿಮ್ಮಲಾಪುರ ಗ್ರಾಮದ ನಿವಾಸ ಪ್ರದೇಶವನ್ನು ಕಂಟೈನ್ಮೆಂಟ್‌ ಮಾಡಲಾಗಿದೆ.
 

click me!