ಗಂಗಾವತಿ: ಆರಾಧನೆಯಲ್ಲಿ ಭಾಗವಹಿಸಿದ್ದ ಭಕ್ತನಿಗೆ ವಕ್ಕರಿಸಿದ ಕೊರೋನಾ

By Kannadaprabha News  |  First Published Jul 20, 2020, 8:48 AM IST

ಭಕ್ತಗೆ ಸೋಂಕು: ಆನೆ​ಗೊಂದಿ ಬೃಂದಾವನ ಪ್ರವೇಶ ನಿಷೇಧ| ನವ ಬೃಂದಾವನ ಗಡ್ಡೆಗೆ ದಿನನಿತ್ಯ ಪೂಜೆಗೆ ಹೋಗುವ ಉತ್ತರಾದಿ ಮಠ ಮತ್ತು ಮಂತ್ರಾಲಯ ಮಠದ ಅರ್ಚಕರು ಸೇರಿದಂತೆ ಸಿಬ್ಬಂದಿ ಕ್ವಾರಂಟೈನಲ್ಲಿರುವಂತೆ ಬಳ್ಳಾರಿ ಜಿಲ್ಲಾಡಳಿತ ಸೂಚನೆ| ನವಬೃಂದಾವನಗಡ್ಡೆಗೆ ತೆರಳುತ್ತಿದ್ದ ಭಕ್ತರಿಗೆ ತೆಪ್ಪ ಸಂಚಾರ ರದ್ದು|


ಗಂಗಾವತಿ(ಜು.20):  ಒಂಬತ್ತು ಯತಿವರಣ್ಯರ ಬೃಂದಾವನವಿರುವ ಪುಣ್ಯಕ್ಷೇತ್ರ ತಾಲೂಕಿನ ಆನೆಗೊಂದಿಯ ನವ ಬೃಂದಾವನಗಡ್ಡೆಯಲ್ಲಿ ಈಚೆಗೆ ಜರುಗಿದ ಶ್ರೀಜಯತೀರ್ಥರ ಆರಾಧನಾ ಮಹೋತ್ಸವಕ್ಕೆ ಆಗಮಿಸಿದ್ದ ಬೆಂಗಳೂರು ಮೂಲದ ಭಕ್ತರೊಬ್ಬರಿಗೆ ಕೊರೋನಾ ಸೋಂಕು ತಗುಲಿದ್ದರಿಂದ ಗಡ್ಡೆಗೆ ಭಕ್ತರು ಹೋಗುವುದಕ್ಕೆ ನಿಷೇಧಿಸಲಾಗಿದೆ. ಜುಲೈ 10ರಂದು ಮಹೋತ್ಸವ ನಡೆ​ದಿತ್ತು.

ನಡೆದ ಆರಾಧನಾ ಮಹೋತ್ಸವಕ್ಕೆ ಬೆಂಗಳೂರಿನಿಂದ ಭಕ್ತರೊಬ್ಬರು ಆಗಮಿಸಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ್ದರು. ನಂತರ ಬೆಂಗಳೂರಿಗೆ ತೆರಳಿದ್ದ ಭಕ್ತ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಿಸಿದಾಗ ಕೊರೋನಾ ಸೋಂಕು ದೃಢಪಟ್ಟಿದೆ. 

Latest Videos

undefined

 

ಗಂಗಾವತಿ: ನವ ವೃಂದಾವನ ಗಡ್ಡೆಯಲ್ಲಿ ಜಯತೀರ್ಥರ ಆರಾಧನೆ

ಈ ಕಾರಣಕ್ಕೆ ನವ ಬೃಂದಾವನ ಗಡ್ಡೆಗೆ ದಿನನಿತ್ಯ ಪೂಜೆಗೆ ಹೋಗುವ ಉತ್ತರಾದಿ ಮಠ ಮತ್ತು ಮಂತ್ರಾಲಯ ಮಠದ ಅರ್ಚಕರು ಸೇರಿದಂತೆ ಸಿಬ್ಬಂದಿ ಕ್ವಾರಂಟೈನಲ್ಲಿರುವಂತೆ ಬಳ್ಳಾರಿ ಜಿಲ್ಲಾಡಳಿತ ಸೂಚನೆ ನೀಡಿದೆ. ಜೊತೆಗೆ ನವಬೃಂದಾವನಗಡ್ಡೆಗೆ ತೆರಳುತ್ತಿದ್ದ ಭಕ್ತರಿಗೆ ತೆಪ್ಪ ಸಂಚಾರ ರದ್ದುಗೊಳಿಸಲಾಗಿದೆ.
 

click me!