ಬಳ್ಳಾರಿ: ವಿಮ್ಸ್‌ನಲ್ಲಿ ವೈದ್ಯ ಸೇರಿ 19 ಜನರಿಗೆ ಕೊರೋನಾ ಸೋಂಕು

By Kannadaprabha News  |  First Published Jul 5, 2020, 10:03 AM IST

ವೈದ್ಯಕೀಯ ಸಿಬ್ಬಂದಿಗೆ ಹಬ್ಬಿದ ಕೊರೋನಾ ವೈರಾಣು| 20 ಜನರ ಕ್ವಾರಂಟೈನ್‌, 60 ಜನರು ಪ್ರಥಮ ಸಂಪರ್ಕಿತರು| ವಿಮ್ಸ್‌ನಲ್ಲಿ ಸೋಂಕು ನಿವಾರಕ ಔಷಧ ಸಿಂಪಡಣೆ| ವೈರಸ್‌ ತಾಣವಾಗಿ ಬದಲಾಗುತ್ತಿರುವ ವಿಮ್ಸ್‌ ಆಸ್ಪತ್ರೆ|


ಬಳ್ಳಾರಿ(ಜು. 06): ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆರೋಗ್ಯ ಸೇವೆ ಒದಗಿಸುತ್ತಿರುವ ವೈದ್ಯರು, ಸ್ಟಾಪ್‌ ನರ್ಸ್‌, ಲ್ಯಾಬ್‌ ಟೆಕ್ನಿಷಿಯನ್‌, ಪಿಜಿ ವಿದ್ಯಾರ್ಥಿಗಳು ಸೇರಿದಂತೆ 19 ಜನ ಕೊರೋನಾ ವಾರಿಯರ್ಸ್‌ಗೆ ಕೋವಿಡ್‌-19 ಕಾಯಿಲೆ ಇರುವುದು ದೃಢಪಟ್ಟಿದ್ದು ವಿಮ್ಸ್‌ ವೈರಸ್‌ ತಾಣವಾಗಿ ಬದಲಾಗುತ್ತಿದೆ.

ಕಳೆದ ಮೂರು ದಿನಗಳಲ್ಲಿ 19 ಜನರಿಗೆ ವೈರಸ್‌ ಇರುವುದು ಖಚಿತವಾಗಿದ್ದು, ಹೆಚ್ಚಿನ ಸಂಖ್ಯೆಯ ವಾರಿಯರ್ಸ್‌ಗೆ ವೈರಾಣು ಹಬ್ಬುತ್ತಿರುವುದು ಆತಂಕ ಮೂಡಿಸಿದೆ. ಈ ಸಂಬಂಧ 20 ಜನರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದ್ದು, 60 ಜನರನ್ನು ಪ್ರಥಮ ಸಂಪರ್ಕಿತರೆಂದು ಗುರುತಿಸಲಾಗಿದೆ ಎಂದು ವಿಮ್ಸ್‌ ನಿರ್ದೇಶಕ ಡಾ. ದೇವಾನಂದ ತಿಳಿಸಿದ್ದಾರೆ.

Tap to resize

Latest Videos

ವಿಮ್ಸ್‌ನಲ್ಲಿ 19 ಜನರಿಗೆ ಕೊರೋನಾ ವೈರಾಣು ಇರುವುದು ಖಚಿತವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರ ಸೂಚನೆ ಮೇರೆಗೆ ವಿಮ್ಸ್‌ನ ಇಡೀ ಆವರಣದಲ್ಲಿ ಹಾಗೂ ಒಳಗಡೆ ಸಂಪೂರ್ಣ ಸೋಂಕು ನಿವಾರಕ ಔಷಧ ಸಿಂಪಡಣೆ ಕಾರ್ಯ ಶನಿವಾರ ನಡೆಯಿತು.

ಬಳ್ಳಾರಿ: ಕೊರೋನಾ ಅಟ್ಟಹಾಸ, ಅರ್ಧಶತಕದ ಸನಿಹವಾಗುತ್ತಿದೆ ಸಾವಿನ ಸಂಖ್ಯೆ!

ಶನಿವಾರ ಬೆಳಗ್ಗೆಯಿಂದಲೇ ವಿಮ್ಸ್‌ನಲ್ಲಿ ಸೋಂಕು ನಿವಾರಕ ಔಷಧ ಸಿಂಪಡಣೆ ಮಾಡಲಾಗುತ್ತಿದೆ. ವಿಮ್ಸ್‌ಗೆ ಆರೋಗ್ಯ ಸೇವೆ ಪಡೆಯಲು ಆಗಮಿಸುತ್ತಿರುವ ತೀವ್ರ ಉಸಿರಾಟದ ಸಮಸ್ಯೆ, ಲಘುಶೀತ ಜ್ವರ(ಐಎಲ್‌ಐ)ದಂತಹ ರೋಗಿಗಳ ಮೂಲಕ ಆರೋಗ್ಯ ಸೇವೆ ಒದಗಿಸುತ್ತಿರುವವರಿಗೆ ಈ ಸೊಂಕು ಹರಡಿದೆ.

ಜು. 10ರೊಳಗೆ ಟ್ರಾಮಾಕೇರ್‌ ರೆಡಿ ಮಾಡಿ

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಸಿಗೆಗಳ ಕೊರತೆ ಕಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಟ್ರಾಮಾಕೇರ್‌ ಸೆಂಟರ್‌ನಲ್ಲಿ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಜು. 10ರೊಳಗೆ ಕಲ್ಪಿಸಿ, ಒದಗಿಸುವುದಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರು ಗುತ್ತಿಗೆದಾರರಿಗೆ ಖಡಕ್‌ ಸೂಚನೆ ನೀಡಿದರು.

ಟ್ರಾಮಾಕೇರ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಇನ್ನೂ ಒಂದು ವಾರದೊಳಗೆ ಒದಗಿಸುವದಕ್ಕೆ ಮುಂದಾಗಬೇಕು. ನಿಗದಿಪಡಿಸಿದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸೂಚಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿ ವಿಮ್ಸ್‌ನ ವೈದ್ಯ ಸೇರಿದಂತೆ ಅನೇಕ ವೈದ್ಯಕೀಯ ಸಿಬ್ಬಂದಿ ಸೇರಿ ಒಟ್ಟು 19 ಜನರಿಗೆ ಸೋಂಕು ಹರಡಿದೆ ಎಂದು ವಿಮ್ಸ್‌ ನಿರ್ದೇಶಕ ಡಾ. ಬಿ. ದೇವಾನಂದ್‌ ಅವರು ಹೇಳಿದ್ದಾರೆ.
 

click me!