ಇನ್ಮುಂದೆ ವಾಹನ ತೆಗೆದುಕೊಂಡು ರಸ್ತೆಗಿಳಿಯುವ ಮುನ್ನ ಈ ಸುದ್ದಿ ಓದಿ..!

By Suvarna NewsFirst Published Apr 14, 2020, 4:14 PM IST
Highlights
ಲಾಕ್‌ಡೌನ್ ಇದ್ರೂ ಸಹ ಕೆಲವರು ವಾಹನ ತೆಗೆದುಕೊಂಡು ರೋಡ್-ರೋಡ್ ಸುತ್ತುತ್ತಿದ್ದಾರೆ. ಇನ್ಮುಂದೆ ವಾಹನ ತೆಗೆದುಕೊಂಡು ರಸ್ತೆಗಿಳಿಯುವ ಮುನ್ನ ಈ ಸುದ್ದಿ ಓದಿ...
ಬೆಂಗಳೂರು, (ಏ.14):  ಕೊರೋನಾ ಸೋಂಕು ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರ್ಕಾರ ಲಾಕ್‌ಡೌನ್ ಘೋಷಿಸಿದೆ. ಆದರೂ ಕೆಲವರು ಬೈಕ್ ತೆಗೆದುಕೊಂಡು ಜಾಲಿ ರೈಡು ಮಾಡುತ್ತಿದ್ದಾರೆ. 

ಇದರಿಂದ ಬೆಂಗಳೂರು ಪೆಟ್ರೋಲ್ ಬಂಕ್ ಅಸೋಸಿಯೇಷನ್ ಒಂದು ಕಠಿಣ ಕ್ರಮಕೈಗೊಂಡಿದೆ. ಮಾಸ್ಕ್​ ಧರಿಸಿದ್ದರಷ್ಟೇ ವಾಹನಕ್ಕೆ ಪೆಟ್ರೋಲ್,ಡೀಸೆಲ್ ಹಾಕುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಜತೆಗೆ ಸಾವಿನ ಸಂಖ್ಯೆಯಲ್ಲೂ ಏರಿಕೆ...! 

ಹೌದು.. ರಾಜಧಾನಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗ್ತಿರೋ ಹಿನ್ನೆಲೆಯಲ್ಲಿ ಬೆಂಗಳೂರು ಪೆಟ್ರೋಲ್ ಬಂಕ್ ಮಾಲೀಕರು ಇಂಥದ್ದೊಂದು ತೀರ್ಮಾನಕ್ಕೆ ಬಂದಿದ್ದಾರೆ.

ವಾಹನ ಸವಾರರು ಮಾಸ್ಕ್ ಹಾಕಿದ್ರೆ ಮಾತ್ರ ಪೆಟ್ರೋಲ್ ಬಂಕ್ ಗಳಲ್ಲಿ ತೈಲ ಸಿಗಲಿದೆ. ಕೊರೋನಾ ಪಾಸಿಟಿವ್ ಕೇಸ್ ಇರುವ ಪ್ರದೇಶಗಳಲ್ಲಿ ಕ್ರಮ ಕೈಗೊಳ್ಳಲು ಬೆಂಗಳೂರು ಪೆಟ್ರೋಲ್ ಬಂಕ್ ಮಾಲೀಕರು ಈ ಪ್ಲಾನ್ ಮಾಡಿದ್ದಾರೆ.

ಮುನ್ನೆಚ್ಚರಿಕೆ ಕ್ರಮಗಳನ್ನ ಅನುಸರಿಸದೇ ಗ್ರಾಹಕರು, ಪೆಟ್ರೋಲ್ ಬಂಕ್ ಗಳಿಗೆ ಬಂದ್ರೆ ಪೆಟ್ರೋಲ್, ಡೀಸೆಲ್‌ ಕೊಡುವುದಿಲ್ಲ. ಮಾಸ್ಕ್ ಇದ್ರೆ ಮಾತ್ರ ತೈಲ ಹಾಕಲಾಗುವುದು ಎಂದಿದ್ದಾರೆ.

ವಾಹನ ಸವಾರರು ಇನ್ಮುಂದೆ ಬೇಕಾಬಿಟ್ಟಿ ಸುತ್ತಾಡುವುದನ್ನು ನಿಲ್ಲಿಸಿ ಲಾಕ್‌ಡೌನ್ ಪಾಲಿಸಿ ಕೊರೋನಾ ನಿಯಂತ್ರಣಕ್ಕೆ ಕೈಜೋಡಿಸಬೇಕೆನ್ನುವುದು ನಮ್ಮ ಮನವಿ.
click me!