ಹುಬ್ಬಳ್ಳಿ ಸೋಂಕಿತನ ಬೆಚ್ಚಿಬೀಳಿಸುವ ಟ್ರಾವೆಲ್ ಹಿಸ್ಟರಿ, ಯಲ್ಲಾಪುರದಲ್ಲಿಯೂ ಆತಂಕ

By Suvarna NewsFirst Published Apr 14, 2020, 3:24 PM IST
Highlights
ಹುಬ್ಬಳ್ಳಿ ಮತ್ತು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ಕೊರೋನಾ ಸೋಂಕಿತನ ಸುತ್ತಾಟ/ ಫುಟ್ ವೇರ್ ಅಂಗಡಿ ಓಪನ್ ಮಾಡಿದ್ದ ಸೋಂಕಿತ/ ಸಂಪರ್ಕದಲ್ಲಿದ್ದವರು ಪರೀಕ್ಷೆ ಮಾಡಿಸಿಕೊಳ್ಳಲು ಜಿಲ್ಲಾಡಳಿತದಿಂದ ಮನವಿ
ಹುಬ್ಬಳ್ಳಿ/ ಯಲ್ಲಾಪುರ(ಏ. 14)  ಹುಬ್ಬಳ್ಳಿಯ ಮುಲ್ಲಾ ಓಣಿಯ ಕೊರೋನಾ ಸೋಂಕಿತನ  ಟ್ರಾವೆಲ್ ಹಿಸ್ಟರಿಯನ್ನು ಜಿಲ್ಲಾಡಳಿತ ಬಿಡುಗಡೆಗೊಳಿಸಿದ್ದು, ಸಂಪರ್ಕದಲ್ಲಿರುವವರು ಕೂಡಲೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಮನವಿ ಮಾಡಿಕೊಳ್ಳಲಾಗಿದೆ.

ಇಡೀ ಹುಬ್ಬಳ್ಳಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕನ್ನು ಸೋಂಕಿತ ಸುತ್ತಾಡಿದ್ದಾನೆ. ಮಾರ್ಚ್ 23ರಂದು ವಾಹನ ಚಾಲಕನ ಸಮೇತ ಯಲ್ಲಾಪುರಕ್ಕೆ ಪ್ರಯಾಣ ಬೆಳೆಸಿ, ಅಲ್ಲಿಂದ ತನ್ನ ಫುಟ್ ವೇರ್ ಅಂಗಡಿ ಓಪನ್ ಮಾಡಿದ್ದಾನೆ.

ಅಂದೇ ಭಾರತ ಲಾಕ್‍ಡೌನ್ ಮೊದಲ ದಿನವಾದ್ದರಿಂದ ವ್ಯಾಪಾರ ನಡೆಸಿದ್ದ. ವ್ಯಾಪಾರ ಮುಗಿಸಿ ಎಲ್‍ಐಸಿ ಕಚೇರಿಗೆ ತೆರಳಿ ಪ್ರೀಮಿಯಂ ಭರ್ತಿ ಮಾಡಿದ್ದಾನೆ. ಅಲ್ಲಿಂದ ರಾತ್ರಿ 8 ಗಂಟೆಗೆ ಹುಬ್ಬಳ್ಳಿಗೆ ಪ್ರಯಾಣ ಮಾಡಿದ್ದಾನೆ. ಮಾರ್ಚ್ 24ರಂದು ಬೆಳಗ್ಗೆ ಹುಬ್ಬಳ್ಳಿಯ ವಿವಿಧ ಪ್ರದೇಶಗಳಲ್ಲಿ ಪ್ರಯಾಣ ಮಾಡಿದ್ದಾನೆ. ಹಳೇ ಹುಬ್ಬಳ್ಳಿಯಲ್ಲಿ ದಿನಸಿ, ಹಣ್ಣು, ಕಿರಾಣಿ ಸಾಮಾನು ಖರೀದಿಸಿ ಬಳಿಕ ಇಂಡಿಪಂಪ್, ಕೇಶ್ವಾಪುರ, ದುರ್ಗದಬೈಲ್ ಮಾರ್ಕೆಟ್ ಪ್ರದೇಶದಲ್ಲಿ ವಿವಿಧ ವಸ್ತುಗಳ ಖರೀದಿಗೆ ಸುತ್ತಾಡಿದ್ದಾನೆ.

3 ನೇ ಸ್ಥಾನದಲ್ಲಿದ್ದ ರಾಜ್ಯ ಈಗ 13ಕ್ಕೆ, ಕಟ್ಟುನಿಟ್ಟಿನ ಕ್ರಮವೇ ಕಾರಣ

ಮಾ.23ರಂದು ವಾಹನ ಚಾಲಕನ ಸಮೇತ ಯಲ್ಲಾಪುರಕ್ಕೆ ಪ್ರಯಾಣ ಮಾಡಿದ್ದು  ಅಲ್ಲಿ ತನ್ನ‌ ಫುಟ್ ವೇರ ಅಂಗಡಿ ಓಪನ್ ಮಾಡಿದ್ದಾನೆ. ಸಂಜೆಯವರೆಗೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಪಟ್ಟಣದಲ್ಲಿರುವ ಅಂಗಡಿಯಲ್ಲಿ ವ್ಯಾಪಾರ ನಡೆಸಿದ್ದವ  ವ್ಯಾಪಾರ ಮುಗಿಸಿ ಯಲ್ಲಾಪುರ ಪಟ್ಟದಲ್ಲಿದ್ದ LIC ಕಚೇರಿಗೆ ತೆರಳಿ ಪ್ರೀಮಿಯಂ ಹಣ ಕಟ್ಟಿದ್ದ.

ಅಲ್ಲಿಂದ ರಾತ್ರಿ 8ಗಂಟೆಗೆ ಹುಬ್ಬಳ್ಳಿಗೆ ಪ್ರಯಾಣ ಮಾಡಿದ್ದಾನೆ.  24ರಂದು ಬೆಳಗ್ಗೆ ಹುಬ್ಬಳ್ಳಿಯ ವಿವಿಧ ಪ್ರದೇಶಗಳಲ್ಲಿ ಸುತ್ತಾಟ ನಡೆಸಿದ್ದಾನೆ. ಹಳೇ ಹುಬ್ಬಳ್ಳಿಯಲ್ಲಿ ದಿನಸಿ, ಹಣ್ಣು, ಕಿರಾಣಿ ಸಾಮಾನು ಖರೀದಿ ಮಾಡಿರುವುದು ಬೆಳಕಿಗೆ ಬಂದಿದೆ. ಬಳಿಕ ಇಂಡಿಪಂಪ್, ಕೇಶ್ವಾಪುರ, ದುರ್ಗದಬೈಲ್ ಮಾರ್ಕೆಟ್ ಪ್ರದೇಶದಲ್ಲಿ ವಿವಿಧ ವಸ್ತುಗಳ ಖರೀದಿಗೆ ಸುತ್ತಾಡಿದ್ದ ಎನ್ನುವುದು ಗೊತ್ತಾಗಿದ್ದು ಈ ದಿನಗಳಲ್ಲಿ ಸಂಪರ್ಕಕ್ಕೆ ಸಿಕ್ಕವರು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
click me!