ಕಾರಾಗೃಹ ಸಿಬ್ಬಂದಿಗೆ ಅಂಟಿದ ಕೊರೋನಾ: ರಸ್ತೆಗೆ ಹಾಲು ಸುರಿದ ಗ್ರಾಮಸ್ಥರು

By Kannadaprabha News  |  First Published Jun 8, 2020, 2:41 PM IST

ಸೋಂಕಿತ ವಾಸಿಸುವ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಶಾನುಭೋಗನಹಳ್ಳಿಯ ಹಾಲು ಉತ್ಪಾದಕರ ಸಂಘದಿಂದ ಬೆಂಗಳೂರು ಹಾಲು ಒಕ್ಕೂಟ ಹಾಲು ಸ್ವೀಕಾರ ಸ್ಥಗಿತ| ಈ ಡೇರಿಗೆ ಪ್ರತಿನಿತ್ಯ ಸಾವಿರಾರು ಲೀಟರ್‌ ಹಾಲು ಪೂರೈಕೆಯಾಗುತ್ತಿತ್ತು| ಸೋಂಕಿತ ವಾಸವಿರುವ ಗ್ರಾಮದೊಂದಿಗೆ ಡೇರಿಯೂ ಸೀಲ್‌ಡೌನ್‌|


ಚನ್ನಪಟ್ಟಣ(ಜೂ.08): ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಸಿಬ್ಬಂದಿಯೊಬ್ಬರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಂಕಿತ ವಾಸಿಸುವ ಚನ್ನಪಟ್ಟಣ ತಾಲೂಕಿನ ಶಾನುಭೋಗನಹಳ್ಳಿಯ ಹಾಲು ಉತ್ಪಾದಕರ ಸಂಘದಿಂದ ಬೆಂಗಳೂರು ಹಾಲು ಒಕ್ಕೂಟ ಹಾಲು ಸ್ವೀಕರಿಸುವುದನ್ನು ಸ್ಥಗಿತಗೊಳಿಸಿದೆ.

ಹಾಲು ಒಕ್ಕೂಟದ ಈ ನಿರ್ಧಾರದಿಂದ ಗ್ರಾಮದ ರೈತರು ಹಾಲನ್ನು ಬೀದಿಗೆ ಸುರಿಯುವ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಹೈನುಗಾರಿಕೆಯನ್ನೇ ನೆಚ್ಚಿರುವ ಬಹುತೇಕ ರೈತರ ಕುಟುಂಬಗಳಿಗೆ ದಿಕ್ಕೇ ತೋಚದಂತಾಗಿದೆ. 

Tap to resize

Latest Videos

ಟ್ರಾಕ್ಟರ್ ಚಾಲನೆ ಮಾಡಿ ಗಮನಸೆಳೆದ ಕುಮಾರಸ್ವಾಮಿ, ಆದ್ರೆ ಒಂದು ಮರೆತ್ರು..!

ಈ ಡೇರಿಗೆ ಪ್ರತಿನಿತ್ಯ ಸಾವಿರಾರು ಲೀಟರ್‌ ಹಾಲು ಪೂರೈಕೆಯಾಗುತ್ತಿತ್ತು. ಇದೀಗ ಸೋಂಕಿತ ವಾಸವಿರುವ ಗ್ರಾಮದೊಂದಿಗೆ ಡೇರಿಯೂ ಸೀಲ್‌ಡೌನ್‌ ಆಗಿರುವುದರಿಂದ ರೈತರು ಹಾಲನ್ನು ಬೀದಿಗೆ ಎಸೆಯುವಂತಾಗಿದೆ. ಗ್ರಾಮದ ಮಹಿಳೆಯರೊಬ್ಬರು ಹಾಲನ್ನು ಬೀದಿಗೆ ಸುರಿಯುತ್ತಿರುವ ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಒಕ್ಕೂಟ ರೈತರ ನೆರವಿಗೆ ಬರಬೇಕೆಂಬ ಒತ್ತಾಯ ಕೇಳಿಬಂದಿದೆ.
 

click me!