ಮುಳಬಾಗಿಲು: ಮಗು ಕರೆತರಲು ಹೋದ ಮಹಿಳೆಗೆ ಮನಬಂದಂತೆ ಥಳಿತ

By Kannadaprabha NewsFirst Published Jun 8, 2020, 1:10 PM IST
Highlights

ಆಟವಾಡಲು ಹೋಗಿದ್ದ ಮಗು ಮಾರಾಕಾಸ್ತ್ರಗಳಿಂದ ಮಹಿಳೆಗೆ ಹಲ್ಲೆ| ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೆ.ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದ ಘಟನೆ| ಗಾಯಾಳು ಮಹಿಳೆ ಅಸ್ಪತ್ರೆಗೆ ದಾಖಲು|

ಮುಳಬಾಗಿಲು(ಜೂ.08): ಮನೆಯ ಹಿಂದೆ ಆಟವಾಡಲು ಹೋದ ಮಗುವನ್ನು ಕರೆ ತರಲು ಹೋದ ಮಹಿಳೆಯ ಮೇಲೆ ಕ್ಷುಲ್ಲಕ ಕಾರಣಕ್ಕೆ ಒಂದೇ ಕುಟುಂಬದ ಮೂವರು ವ್ಯಕ್ತಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹನುಮನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೆ.ಶೆಟ್ಟಿಹಳ್ಳಿ ಗ್ರಾಮದ ಪುಷ್ಪಮ್ಮ ಗಾಯಗೊಂಡ ಮಹಿಳೆಯಾಗಿದ್ದು, ಮುಂಜಾನೆ ತಮ್ಮ ಮನೆಯ ಹಿಂದೆ ಆಟವಾಡಲು ಹೋದ ಮಗುವನ್ನು ಕರೆತರಲು ಹೋದಾಗ ಅದೇ ಗ್ರಾಮದ ಪತ್ರಕರ್ತನೆಂದು ಹೇಳಿಕೊಳ್ಳುವ ಪತ್ರಕರ್ತನಲ್ಲದ ಆನಂದ್‌, ಅವನ ಅಣ್ಣ ರಮೇಶ್‌ ಮತ್ತು ತಂದೆ ಮುನಿವೆಂಕಟಪ್ಪ ಇವರು ಲಾಂಗ್‌, ಕಬ್ಬಿಣದ ರಾಡ್‌ ಮತ್ತು ದೊಣ್ಣೆಗಳಿಂದ ಪುಷ್ಪಮ್ಮನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿರುತ್ತಾರೆ.

ಎಂಟಿಬಿ‌, ಆರ್‌.ಶಂಕರ್‌,ಎಚ್‌.ವಿಶ್ವನಾಥ್‌ಗೆ ಎಂಎಲ್ಸಿ ಟಿಕೆಟ್..?‌

ಹೊಲದಿಂದ ಬಂದ ಆಕೆಯ ಪತಿಯು ಗಾಯಗೊಂಡ ಮಹಿಳೆಯನ್ನು ಮುಳಬಾಗಿಲು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಪೊಲೀಸರು ಸದರೀ ಮಹಿಳೆಯಿಂದ ಮಾಹಿತಿ ಪಡೆದು ಕೊಂಡಿದ್ದರು, ಇದರಿಂದ ಕಂಗಾಲಾದ ಮೂವರು ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಹುನ್ನಾರ ನಡೆಸಿ ಮಹಿಳೆಯ ಕುಟುಂಬಸ್ಥರೆಲ್ಲರೂ ತಮ್ಮ ಮೇಲೆಯೇ ಹಲ್ಲೆ ಮಾಡಿರುತ್ತಾರೆಂದು ಹೇಳಿಕೊಂಡು ಕೋಲಾರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಮಾಹಿತಿ ಪಡೆಯಲು ಬಂದ ಪೊಲೀಸರಿಗೆ ತಾನೊಬ್ಬ ಪತ್ರಕರ್ತನಾಗಿದ್ದು ಕೂಡಲೇ ಮಹಿಳೆಯ ಕುಟುಂಬಸ್ಥರೆಲ್ಲರ ವಿರುದ್ದ ಪ್ರಕರಣ ದಾಖಲು ಮಾಡಲು ಒತ್ತಡ ಹೇರಿದ್ದರಿಂದ ಪೊಲೀಸರು ಗಾಯಗೊಂಡ ಮಹಿಳೆಯಿಂದ ಮಾಹಿತಿ ಪಡೆದರೂ ಪ್ರಕರಣ ದಾಖಲಿಸದೇ ಮೌನಕ್ಕೆ ಶರಣಾಗಿದ್ದರು, ಆದರೆ ಹಲ್ಲೆಗೊಳಗಾದ ಕುಟುಂಬ ಸದಸ್ಯರು ಘಟನೆ ಕುರಿತು ಮಾಡಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರಲ್ಲದೇ ಪೊಲೀಸರು ಮತ್ತು ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್‌ರೆಡ್ಡಿ ಅವರಿಗೂ ವೀಡಿಯೋ ಸಹಿತ ಮನವಿ ಮಾಡಿದ್ದರಿಂದ ಅವರ ಸೂಚನೆಯಂತೆ ಆರೋಪಿಯನ್ನು ಹಿಡಿಯಲು ಗ್ರಾಮಕ್ಕೆ ಹೋದಾಗ ಪೊಲೀಸರನ್ನು ಕಂಡು ಓಡಿಹೋಗುತ್ತಿದ್ದಂತೆ ಬೆನ್ನಟ್ಟಿ ಬಂಧಿಸಿ ಪಿಎಸ್‌ಐ ಪ್ರದೀಪ್‌ಸಿಂಗ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುತ್ತಾರೆ, ಉಳಿದ ಆರೋಪಿಗಳು ಪರಾರಿಯಾಗಿರುತ್ತಾರೆನ್ನಲಾಗಿದೆ.
 

click me!