ಕಳೆದ ಕೆಲವು ದಿನಗಳಿಂದ ಒಂದು ದಿನಕ್ಕೆ ನೂರಿನ್ನೂರುಕ್ಕೂ ಹೆಚ್ಚು ಕಾಲ್‌ಗಳು, ಬರೇ ಫೋನಿನಲ್ಲಿ ಮಾತನಾಡಿಯೇ ಸೋತು ಹೋಗುತಿದ್ದೇವೆ. ಅಬ್ಬಾ ಲೈಫಲ್ಲಿ ಇಷ್ಟುಕಾಲ್‌ಗಳು ಬಂದಿರಲಿಲ್ಲ, ದಿನದ 24 ಗಂಟೆನೂ ಬರೇ ಬರೇ ಕೊರೋನಾ ಕೊರೋನಾ ಅಂತಿದ್ದೀವಿ, ಕೇಳ್ತಿದ್ದೀವಿ, ದುಡಿತಿದ್ದೀವಿ, ಇದುವರೆಗೆ ಲೈಫಲ್ಲಿ ಹೀಗಾಗಿರಲಿಲ್ಲ. ಇದು ಉಡುಪಿ ಜಿಲ್ಲೆಯ ಕೊರೋನಾ ನೋಡಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ಅವರು ಇತ್ತೀಚಿನ ನಿತ್ಯದನುಭವ.
ಉಡುಪಿ(ಏ.14): ಕಳೆದ ಕೆಲವು ದಿನಗಳಿಂದ ಒಂದು ದಿನಕ್ಕೆ ನೂರಿನ್ನೂರುಕ್ಕೂ ಹೆಚ್ಚು ಕಾಲ್‌ಗಳು, ಬರೇ ಫೋನಿನಲ್ಲಿ ಮಾತನಾಡಿಯೇ ಸೋತು ಹೋಗುತಿದ್ದೇವೆ. ಅಬ್ಬಾ ಲೈಫಲ್ಲಿ ಇಷ್ಟುಕಾಲ್‌ಗಳು ಬಂದಿರಲಿಲ್ಲ, ದಿನದ 24 ಗಂಟೆನೂ ಬರೇ ಬರೇ ಕೊರೋನಾ ಕೊರೋನಾ ಅಂತಿದ್ದೀವಿ, ಕೇಳ್ತಿದ್ದೀವಿ, ದುಡಿತಿದ್ದೀವಿ, ಇದುವರೆಗೆ ಲೈಫಲ್ಲಿ ಹೀಗಾಗಿರಲಿಲ್ಲ. ಇದು ಉಡುಪಿ ಜಿಲ್ಲೆಯ ಕೊರೋನಾ ನೋಡಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ಅವರು ಇತ್ತೀಚಿನ ನಿತ್ಯದನುಭವ.
ಅವರು ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಬೇಕಾದ ಅಗತ್ಯತೆಗಳನ್ನೆಲ್ಲಾ ಒದಗಿಸುತ್ತಾರೆ, ಮೇಲಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸುತ್ತಾರೆ, ಕರೆ ಮಾಡಿದ ಮಾಧ್ಯಮದವರಿಗೆ, ಸಾರ್ವಜನಿಕರಿಗೆ, ರೋಗಿಗಳ ಮನೆಯವರಿಗೆ, ವಿವಿಧ ಇಲಾಖೆಯ ಅಧಿಕಾರಿಗಳಿಗೆ ಶಾಂತಚಿತ್ತರಾಗಿ ಉತ್ತರಿಸುತ್ತಾರೆ, ನಡುವೆ ಜಿಲ್ಲಾಧಿಕಾರಿಗಳ ಸಭೆಗಳಲ್ಲಿ ಭಾಗವಹಿಸಿ ಅಗತ್ಯ ಮಾಹಿತಿಗಳನ್ನು ನೀಡುತ್ತಾರೆ.
ಮೇ. 3ವರೆಗೆ ದೇಶದಾದ್ಯಂತ ಲಾಕ್‌ಡೌನ್: ಪಿಎಂ ಮೋದಿ ಅಧಿಕೃತ ಘೋಷಣೆ!
ಅವರು ಮತ್ತವರ ವೈದ್ಯರ ತಂಡ, ಆರೋಗ್ಯ ಇಲಾಖೆಯ ಅಧಿಕಾರಿಗಳು ಕೊರೋನಾ ಎಂಬ ಕಾಣದ ವೈರಿಯ ವಿರುದ್ಧ ಹೋರಾಟ ನಡೆಸುತ್ತಿರುವ ಸೈನಿಕನಂತೆ ಕಾಣುತಿದ್ದಾರೆ.
ಔಷಧಿ ಇಲ್ಲ, ಆತಂಕ ಬೇಡ: ಕೊರೋನಾ ವೈರಸ್‌ಗೆ ಇದುವರೆಗೆ ಯಾವುದೇ ಔಷಧಿ ಇಲ್ಲ, ಆದರೂ ಕೊರೋನಾ ರೋಗಿಗಳು ಗುಣಮುಖರಾಗುತ್ತಿದ್ದಾರೆ, ಹೇಗೆ ಎಂದರೆ ಅವರನ್ನು ಬಾಧಿಸುತ್ತಿರುವ ಕೊರೋನಾ ರೋಗದ ಗುಣಲಕ್ಷಣಗಳಿಗೆ ಚಿಕಿತ್ಸೆ ನೀಡುವುದು ಎನ್ನುತ್ತಾರೆ ಡಾ. ಪ್ರಶಾಂತ್ ಭಟ್.
undefined
ಶೀತ, ಜ್ವರ, ಕೆಮ್ಮು ಇತ್ಯಾದಿಗಳಿರುತ್ತವೆ, ಅವುಗಳಿಗೆ ಔಷಧಿ ನೀಡುತ್ತೇವೆ. ಶೆ.95 ರೋಗಿಗಳಿಗೆ ಅಷ್ಟರಿಂದಲೇ ಗುಣವಾಗುತ್ತದೆ, ಶೇ.5 ಮಂದಿಗೆ ಉಸಿರಾಟದ ತೊಂದರೆ ಇದ್ದರೆ ಅದಕ್ಕೂ ಚಿಕಿತ್ಸೆ ನೀಡಿ ಗುಣ ಮಾಡಬಹುದು. ಉಡುಪಿಯಲ್ಲಿ ಪತ್ತೆಯಾದ 3 ರೋಗಿಗಳಿಗೆ ಉಸಿರಾಟದ ತೊಂದರೆ ಇರಲಿಲ್ಲ. ಸಾಮಾನ್ಯ ತೊಂದರೆಗೆ ಚಿಕಿತ್ಸೆ ನೀಡಿ, ಮೂವರೂ ಗುಣಮುಖರಾಗಿದ್ದಾರೆ. ಆದ್ದರಿಂದ ಕೊರೋನಾಕ್ಕೆ ಚಿಕಿತ್ಸೆಯೇ ಇಲ್ಲ ಎಂದು ಭಯಬೇಡ ಎನ್ನುತ್ತಾರೆ ಅವರು.
ಉಡುಪಿ: ನೋಟು ರಸ್ತೆಗೆ ಎಸೆದ ಯುವಕ, ಜನರಿಗೆ ಕೊರೋನಾ ಆತಂಕ
ಕೆಲವರು ಪರೀಕ್ಷೆಗೆ ಒಪ್ಪುತ್ತಿಲ್ಲ: ಆದರೆ ಕೊರೋನಾ ರೋಗಿಗಳ ಸಂಪರ್ಕದಲ್ಲಿದ್ದವರು, ಕೊರೋನಾದ ಲಕ್ಷಣಗಳಿದ್ದವರು, ತಬ್ಲೀಘಿ ಜಮಾತ್‌ಗೆ ಹೋದವರೊಂದಿಗೆ ಸಂಪರ್ಕದಲ್ಲಿದ್ದ ಅನೇಕ ಮಂದಿಯನ್ನು ಪರೀಕ್ಷೆಗೆ ನಾವೇ ಎತ್ತಿಕೊಂಡು ಬರಬೇಕಾಯಿತು, ನಂತರವೂ ಅವರು ಪರೀಕ್ಷೆಗೆ ಒಪ್ಪುತ್ತಿರಲಿಲ್ಲ, ನಮಗೇನಾಗಿದೆ, ನಾವು ಚೆನ್ನಾಗಿದ್ದೇವೆ ಎಂದು ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನಿಸುತಿದ್ದರು ಎಂದು ತಮ್ಮ ಅನುಭವಗಳನ್ನು ಹೇಳುತಾರೆ ಡಾ. ಭಟ್.
ಗಡಿಯಲ್ಲಿ ನುಸುಳಿ ಬರುತ್ತಾರೆ: ಜಿಲ್ಲೆಯ ಗಡಿಗಳನ್ನು ಇಷ್ಟೆಲ್ಲಾ ಲಾಕ್‌ಡೌನ್ ಮಾಡಿಯೂ ಕೆಲವರು ಹೊರ ಜಿಲ್ಲೆಗಳಿಂದ ನುಸುಳಿ ಬರುತ್ತಿದ್ದಾರೆ ಎನ್ನುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ ಹೊಸ ರೋಗಿಗಳು ಪತ್ತೆಯಾಗಿಲ್ಲ ಎಂಬ ಸಮಾಧಾನ ವ್ಯಕ್ತಪಡಿಸಿದರು. ಪತ್ತೆಯಾದರೆ 2 ಗಂಟೆಯೊಳಗೆ ರೋಗ ಪತ್ತೆಯಾದ ಪ್ರದೇಶ 3 ಕಿ.ಮೀ. ವ್ಯಾಪ್ತಿಯನ್ನು ಕಂಟೈನ್ಮೆಂಟ್ ಮಾಡಲಾಗುತ್ತದೆ, ಆ ಪ್ರದೇಶವನ್ನು ಯಾರೂ ಪ್ರವೇಶಿಸಿದಂತೆ ಕಟ್ಟುನಿಟ್ಟು ವ್ಯವಸ್ಥೆ ಮಾಡಲಾಗುತ್ತದೆ ಎನ್ನುವ ಧೈೖರ್ಯವನ್ನೂ ವ್ಯಕ್ತಪಡಿಸಿದರು.
ದಿನಕ್ಕೆ 4- 5 ಮನೆಗೆ ಔಷಧಿ ತಲುಪಿಸುವ ಕೊರೋನಾ ವಾರಿಯರ್
ಉಡುಪಿ ಜಿಲ್ಲೆಯ ವಾರ್ತಾ ಇಲಾಖೆಯಿಂದ ಸುಮಾರು 264 ಮಂದಿ ಯುವಕರನ್ನು ಕೊರೋನಾ ವಾರಿಯರ್ಸ್‌ಗಳನ್ನಾಗಿ ನಿಯೋಜಿಸಲಾಗಿದೆ. ಅವರ ಉಸ್ತುವಾರಿಯನ್ನು ನೋಡಿಕೊಳ್ಳುವ ಸುಕೇತ್ ಶೆಟ್ಟಿ, ಪ್ರತಿದಿನ 4 - 5 ಮಂದಿ ಅಶಕ್ತ, ವಯೋವೃದ್ಧ, ಬಡವರಿಗೆ ಔಷಧಿಗಳನ್ನು ಅವವರ ಮನೆ ಬಾಗಿಲಿಗೆ ಕೊಟ್ಟು ಬರುತ್ತಾರೆ. ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಸುದ್ದಿಗಳ ಸತ್ಯಾಸತ್ಯತೆಯನ್ನು ಪರೀಕ್ಷೀಸುವುದಕ್ಕಾಗಿ ಈ ವಾರಿಯರ್ಸ್‌ಗಳನ್ನು ನಿಯೋಜಿಸಲಾಗಿದೆ. ಆದರೇ ಅವರಿಗೆ ವೈರಲ್ ಸುದ್ದಿಗಳಿಗಿಂತಲೂ, ಸಾರ್ವಜನಿಕರಿಂದ ಆಹಾರ, ಔಷಧಿ, ಸಹಾಯ ಕೇಳಿ ಕರೆಗಳು ಬರುತ್ತಿವೆ.
ಡಿಸ್ಚಾರ್ಜ್ ಆಗಿದ್ದ ಇಬ್ಬರಿಗೆ ಮತ್ತೆ ಕೊರೋನಾ ಸೋಂಕು!
ಉಡುಪಿಯವರಾದ ಸುಕೇತ್ ಶೆಟ್ಟಿಅವರು ಔಷಧಿ ಬೇಕು ಎಂದು ಕರೆ ಬಂದ ತಕ್ಷಣ ಕೆಲವೇ ಗಂಟೆಗಳಲ್ಲಿ 40 - 50 ಕಿ.ಮಿ. ದೂರದ ಕುಂದಾಪುರಕ್ಕೂ, ಕಾರ್ಕಳಕ್ಕೂ ತಮ್ಮ ವಾಹನದಲ್ಲಿ ಹೋಗಿ ಜನರು ಕೇಳಿದ ಔಷಧಿಯನ್ನು ಕೊಟ್ಟು ಬರುತ್ತಾರೆ. ಆ ಮನೆಯವರಿಗೆ ನೆಮ್ಮದಿಯನ್ನು ನೀಡುತಿದ್ದಾರೆ. ಇಂತಹ ತುರ್ತು ಸಂದರ್ಭದಲ್ಲಿ, ಇಂತಹ ಉಚಿತ ಸೇವೆಯಿಂದ ಸಿಗುವ ಖುಷಿ ಹಿಂದೆಲ್ಲೂ ಸಿಕ್ಕಿಲ್ಲ ಎನ್ನುತ್ತಾರವರು.
-ಸುಭಾಶ್ಚಂದ್ರ ವಾಗ್ಳೆ