ಉಡುಪಿ: ನೋಟು ರಸ್ತೆಗೆ ಎಸೆದ ಯುವಕ, ಜನರಿಗೆ ಕೊರೋನಾ ಆತಂಕ

Kannadaprabha News   | Asianet News
Published : Apr 14, 2020, 09:47 AM IST
ಉಡುಪಿ: ನೋಟು ರಸ್ತೆಗೆ ಎಸೆದ ಯುವಕ, ಜನರಿಗೆ ಕೊರೋನಾ ಆತಂಕ

ಸಾರಾಂಶ

ಇಲ್ಲಿನ ರಥಬೀದಿ ಸಮೀಪದ ವಾದಿರಾಜ ರಸ್ತೆಯಲ್ಲಿ ಯುವಕನೊಬ್ಬ ನೋಟುಗಳನ್ನು ಎಸೆದು ಕೆಲ ಕಾಲ ಅನಗತ್ಯ ಆತಂಕ ಸೃಷ್ಟಿಸಿದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ಉಡುಪಿ(ಏ.14): ಇಲ್ಲಿನ ರಥಬೀದಿ ಸಮೀಪದ ವಾದಿರಾಜ ರಸ್ತೆಯಲ್ಲಿ ಯುವಕನೊಬ್ಬ ನೋಟುಗಳನ್ನು ಎಸೆದು ಕೆಲ ಕಾಲ ಅನಗತ್ಯ ಆತಂಕ ಸೃಷ್ಟಿಸಿದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ಈ ಯುವಕ ಕೈಯಲ್ಲಿ ಸಾವಿರ, ಐನೂರು ಮತ್ತು ಇನ್ನೂರರ ಕೆಲವು ನೋಟುಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಎಸೆಯುತ್ತಾ ಸಾಗಿದ್ದಾನೆ. ಇದನ್ನು ಕಂಡ ಕೆಲವರು ಹಿಂದೆಮುಂದೆ ಯೋಚಿಸದೇ ಹೆಕ್ಕಿಕೊಂಡಿದ್ದಾರೆ. ಸರಿಯಾಗಿ ಪರಿಶೀಲಿಸಿದಾಗ ಅವೆಲ್ಲವೂ ಝೆರಾಕ್ಸ್ ಮಾಡಲಾದ ನಕಲಿ ನೋಟುಗಳಾಗಿದ್ದವು.

ಕೇರಳ ರೋಗಿಗಳಿಗೆ ಚಿಕಿತ್ಸೆ: ಆರೋಗ್ಯ ಇಲಾಖೆ ಸ್ಪಷ್ಟನೆ

ಅಷ್ಟರಲ್ಲಿ ಕೆಲವರು ಈ ಯುವಕ ನಕಲಿ ನೋಟುಗಳ ಮೂಲಕ ಕೊರೋನಾ ವೈರಸ್‌ ಹರಡುವ ಪ್ರಯತ್ನ ಮಾಡುತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಕೂಡಲೇ ಕೆಲಯುವಕರು ಆತನನ್ನು ಹಿಡಿಯಲು ಯತ್ನಿಸಿದ್ದಾರೆ.

ಅದರೆ ಆತ ಇಲ್ಲಿನ ಭೂತ ಓಣಿ ಎಂಬ ರಸ್ತೆಯಲ್ಲಿ ಓಡಾಡಿ ಪರಾರಿಯಾಗಿದ್ದಾನೆ. ಸಾಮಾಜಿಕ ಕಾರ್ಯಕರ್ತ ಮಧುಕರ್‌ ಮುದ್ರಾಡಿ ಅವರು ಎಲ್ಲ ನೋಟುಗಳನ್ನ ಸಂಗ್ರಹಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.Man throws fake notes in road creates anxiety 

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು