ಬೆಂಗ್ಳೂರಲ್ಲಿ 20000 ಅಧಿಕ ಮಂದಿಗೆ ಕೊರೋನಾ ಲಸಿಕೆ

By Kannadaprabha News  |  First Published Jan 21, 2021, 8:45 AM IST

ಉತ್ತಮ ಸ್ಪಂದನೆ| ಬುಧವಾರವೂ ಸಹ 3803 ಆರೋಗ್ಯ ಸಿಬ್ಬಂದಿಗೆ ಕೊರೋನಾ ಲಸಿಕೆ| ಬೆಂಗಳೂರಿನಲ್ಲಿ ಬುಧವಾರ 260 ಹೊಸ ಕೋವಿಡ್‌ ಸೋಂಕು ಪ್ರಕರಣ ಪತ್ತೆ| 303 ಮಂದಿ ಗುಣಮುಖ, ಇಬ್ಬರು ಸಾವು| 


ಬೆಂಗಳೂರು(ಜ.21): ಬಿಬಿಎಂಪಿ ವ್ಯಾಪ್ತಿಯಲ್ಲಿ ಬುಧವಾರ 79 ಕೋವಿಡ್‌ ಲಸಿಕಾ ಕೇಂದ್ರದಲ್ಲಿ 3,803 ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದುಕೊಂಡಿದ್ದಾರೆ. ಇದರೊಂದಿಗೆ ಒಟ್ಟು ಲಸಿಕೆ ಪಡೆದ ಸಂಖ್ಯೆ 20,336ಕ್ಕೆ ತಲುಪಿದೆ.
ಬೆಂಗಳೂರಿನಲ್ಲಿ ಕೋವಿಡ್‌ ಲಸಿಕೆ ಅಭಿಯಾನದ ಆರಂಭಗೊಂಡು ಐದನೇ ದಿನವಾದ ಬುಧವಾರ 21 ಬಿಬಿಎಂಪಿ ಹಾಗೂ ಸರ್ಕಾರಿ ಆಸ್ಪತ್ರೆ, 58 ಖಾಸಗಿ ಆಸ್ಪತ್ರೆಗಳ ಲಸಿಕೆ ನೀಡುವ ಅಭಿಯಾನ ನಡೆಯಿತು.

ಬುಧವಾರ 1,534 ಸರ್ಕಾರಿ ಹಾಗೂ ಬಿಬಿಎಂಪಿಯ ಆರೋಗ್ಯ ಕಾರ್ಯಕರ್ತರು ಮತ್ತು 5,302 ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಒಟ್ಟು 6,836 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ಪೈಕಿ 3,803 (ಶೇ.56) ಆರೋಗ್ಯ ಕಾರ್ಯಕರ್ತರು ಮಾತ್ರ ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆದವರ ಪೈಕಿ 1,095 ಸರ್ಕಾರಿ ಮತ್ತು ಬಿಬಿಎಂಪಿಯ ಆರೋಗ್ಯ ಕಾರ್ಯಕರ್ತರು, 2,708 ಖಾಸಗಿ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

Tap to resize

Latest Videos

undefined

ಶೇ.0.18 ಜನರ ಮೇಲೆ ಅಡ್ಡಪರಿಣಾಮ, ಲಸಿಕೆ ಪಡೆಯಲು ಹಿಂದೇಟು: ಕೇಂದ್ರ ಬೇಸರ

ಬೆಂಗಳೂರಿನಲ್ಲಿ ಈವರೆಗೆ ಲಸಿಕೆ ಪಡೆದವರ ವಿವರ, ದಿನಾಂಕ ಗುರಿ ಲಸಿಕೆ ಪಡೆದವರು ಶೇಕಡ

ಜ.16 816 497 60
ಜ.17 6,277 3,569 58
ಜ.18 20,226 8,489 42
ಜ.19 10,343 3,978 38
ಜ.20 6,836 3,803 56
ಒಟ್ಟು 44,498 20,336 45.70

3.86 ಲಕ್ಷ ದಾಟಿದ ಗುಣಮುಖರ ಸಂಖ್ಯೆ

ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ 260 ಹೊಸ ಕೋವಿಡ್‌ ಸೋಂಕು ಪ್ರಕರಣ ಪತ್ತೆಯಾಗಿದ್ದು, 303 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಮೃತಪಟ್ಟವರದಿಯಾಗಿದೆ. ಈ ಮೂಲಕ ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 3,95,769 ಏರಿಕೆಯಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 3,86,260 ಏರಿಕೆಯಾಗಿದೆ. ಇನ್ನೂ 5,136 ಸಕ್ರಿಯ ಸೋಂಕಿತರಿದ್ದು, ಈ ಪೈಕಿ 74 ಮಂದಿಯ ಆರೋಗ್ಯ ಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಬುಧವಾರ ಮೃತಪಟ್ಟ ಇಬ್ಬರೂ ಮಹಿಳೆಯರಾಗಿದ್ದು, ಈ ಮೂಲಕ ಮೃತರ ಸಂಖ್ಯೆ 4,372 ಏರಿಕೆಯಾಗಿದೆ.
 

click me!