ಕೊರೋನಾ ಚಿಕಿತ್ಸೆ ತಪ್ಪಿಸಿಕೊಂಡಿದ್ದ ವ್ಯಕ್ತಿ ಪೊಲೀಸರ ನೆರವಿನಿಂದ ಆಸ್ಪತ್ರೆಗೆ

By Kannadaprabha News  |  First Published Mar 20, 2020, 8:43 AM IST

ಕೊರೋನಾ ಪೀಡಿತ ರೋಗಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸಿದ್ದ ವ್ಯಕ್ತಿಯನ್ನು ಪೊಲೀಸರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. 


ಕುಂದಾಪುರ [ಮಾ.20]: ಕೊರೋನಾ ಪೀಡಿತ ರೋಗಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸಿದ ಬೈಂದೂರಿನ ಯುವಕ ನೊಬ್ಬ ವೈದ್ಯಕೀಯ ಪರೀಕ್ಷೆಯಿಂದ ತಪ್ಪಿಸಿದ್ದು, ನಂತರ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. 

ಈತ ಕಾಸರಗೋಡಿನ ಕೊರೋನಾ ಪೀಡಿತ ವ್ಯಕ್ತಿ ಇದ್ದ ವಿಮಾನದಲ್ಲೇ ಭಾರತಕ್ಕೆ ಬಂದಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಕುಂದಾಪುರ ಆಸ್ಪತ್ರೆಯ ಐಸೋಲೇಶನ್ ವಾರ್ಡ್‌ಗೆ ದಾಖಲಾಗಿ ವೈದ್ಯಕೀಯ ಪರೀಕ್ಷೆಗೊಳಗಾಗುವಂತೆ ಸೂಚಿಸಲಾಗಿತ್ತು. ಆದರೆ ಆತ ತನಗೆ ಮಂಗಳೂರಿಗೆ ಹೋಗುವುದಕ್ಕಿದೆ ಎಂದು ಹೇಳಿ ತಪ್ಪಿಸಿಕೊಂಡಿದ್ದ.

Tap to resize

Latest Videos

15ದಿನ ಹಿಂದೆ ವಿದೇಶದಿಂದ ಬಂದವರ ಮಾಹಿತಿ ಸಂಗ್ರಹ...

ಕೊನೆಗೆ ವೈದ್ಯರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆತನನ್ನು ಹುಡುಕಿ ತಂದು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತನಲ್ಲಿ
ಕೊರೋನಾದ ಯಾವುದೇ ಲಕ್ಷಣಗಳು ಪತ್ತೆಯಾಗಿಲ್ಲ. 

click me!