ಮದುವೆಗೆ ಬಂದ ಅತಿಥಿಗಳಿಗೆ ಲಾಠಿ ಭೋಜನ.. ಹೆಚ್ಚಿನ ಜನ ಸೇರಿದ್ರೆ!

Published : Apr 27, 2021, 08:49 PM ISTUpdated : Apr 27, 2021, 08:50 PM IST
ಮದುವೆಗೆ ಬಂದ ಅತಿಥಿಗಳಿಗೆ ಲಾಠಿ ಭೋಜನ.. ಹೆಚ್ಚಿನ ಜನ ಸೇರಿದ್ರೆ!

ಸಾರಾಂಶ

ಮದುವೆಗೆ ಬಂದ ಅತಿಥಿಗಳಿಗೆ ಲಾಠಿ ರುಚಿ/ ನಿಗದಿಗಿಂತ ಹೆಚ್ಚಿನ ಜನ ಸೇರಿದ್ದರು/ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು/ ಬೆಳಗ್ಗೆ ಅಕ್ಷತೆಯ ಸಮಯದಲ್ಲಿ ನೂರಾರು ಜನ ಕೂಡಿಕೊಂಡು ಬ್ಯಾಂಡ್‍ನೊಂದಿಗೆ ಸಮೀಪದ ಹನುಮಾನ ದೇವಸ್ಥಾನಕ್ಕೆ ಮೆರವಣಿಗೆ ನಡೆಸಿದ್ದರು  

ಶಹಾಬಾದ್, ಕಲಬುರಗಿ(ಏ. 27)  ಕೊರೋನಾ ನಿಯಮಗಳನ್ನು ಉಲ್ಲಂಘಿಸಿ ನಡೆದ ಮದುವೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಚದುರಿಸಲು ಪೊಲೀಸರು ಲಘು ಲಾಟಿ ಪ್ರಹಾರ ಮಾಡಿದ  ಪ್ರಸಂಗ ಶಹಾಬಾದ್ ನಗರದಲ್ಲಿ ನಡೆದಿದೆ. 

ಇಲ್ಲಿನ  ಜಗದಂಬಾ ದೇವಿ ದೇವಸ್ಥಾನದಲ್ಲಿ ಮದುವೆ ನಡೆದಿತ್ತು. ಆರತಕ್ಷತೆಯ ಮುನ್ನಾದಿನ ಸಂಜೆ ದೇವಸ್ಥಾನದಲ್ಲಿ ಅರಿಶಿಣ ಹಚ್ಚುವ ಕಾರ್ಯಕ್ರಮ ಜನರ ಮಧ್ಯದಲ್ಲಿ ನಡೆಯಿತು. ದೇವಸ್ಥಾನ ಸಮಿತಿ, ದೇವಸ್ಥಾನದ ಅರ್ಚಕರು ಕೇಲವ 50 ಜನರಿಗೆ ಮಾತ್ರ ಅವಕಾಶವಿದೆ ಎಂದು ಹೇಳಿದ್ದರು.  ಆದರೂ ಅರ್ಚಕರ ಮಾತು ಮೀರಿ ಬೆಳಗ್ಗೆ ಅಕ್ಷತೆಯ ಸಮಯದಲ್ಲಿ ನೂರಾರು ಜನ ಕೂಡಿಕೊಂಡು ಬ್ಯಾಂಡ್‍ನೊಂದಿಗೆ ಸಮೀಪದ ಹನುಮಾನ ದೇವಸ್ಥಾನಕ್ಕೆ ಮೆರವಣಿಗೆ ನಡೆಸಿದರು.

ಆಗತ್ಯ ಆಸ್ಪತ್ರೆಗಳಿಗೆ ಇಲ್ಲಿ ಕರೆ ಮಾಡಿ

ಮಧ್ಯಾಹ್ನ ಅಕ್ಷತೆಯ ಮಹೂರ್ತಕ್ಕೆ ಸುಮಾರು 200 ರಿಂದ 250 ಜನ ಸಭಾಗೃಹದಲ್ಲಿ ಜಮಾವಣೆಯಾಗಿದ್ದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಅರ್ಚಕರನ್ನು ತರಾಟೆಗೆ ತೆಗೆದುಕೊಂಡರು, ಅರ್ಚಕರು ತಾವೂ ಹಾಗೂ ದೇವಸ್ಥಾನದ ಸಮಿತಿ ಸದಸ್ಯರು ಹಲವು ಬಾರಿ ಎಚ್ಚರಿಕೆ ನೀಡಿದ್ದರು ಕೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. 

ಪೊಲೀಸರು ಕೂಡಲೇ ಲಾಠಿ ಬೀಸಿ ಅಲ್ಲಿದ್ದ ಅರ್ಧಕ್ಕೂ ಹೆಚ್ಚು ಜನರಿಗೆ ಓಡಿಸಿದರು. ಸ್ವಲ್ಪ ಜನ ದೇವಸ್ಥಾನದ ಮೇಲ್ಬಾಗದಲ್ಲಿ, ದೇವಸ್ಥಾನದ ಹಿಂದಿನ ಹಾಲ್‍ನಲ್ಲಿ ಅಡಗಿ ಕುಳಿತ್ತಿದ್ದರು ಎನ್ನಲಾಗಿದೆ. ಕೊನೆಗೂ ಪೊಲೀಸರು ಹೆಚ್ಚು ಇದ್ದ ಜನರನ್ನು ಚದುರಿಸಿ, ದೇವಸ್ಥಾನದ ಬಾಗಿಲಿಗೆ ಬೀಗ ಹಾಕಿ, ನಿಗದಿತ ಜನರಿಗೆ ಮದುವೆ ಔತಣಕ್ಕೆ ಅನುವು ಮಾಡಿಕೊಟ್ಟರು. 

 

 

PREV
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?